ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ T20 ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಕಳೆದ ಎರಡು ಪಂದ್ಯಗಳನ್ನು ಭಾರತ ಗೆದ್ದು ಬೀಗಿದೆ. ಈಗಾಗಲೇ ಟೀಂ ಇಂಡಿಯಾ ಟಿ20 ಸರಣಿ ಗೆದ್ದಿದ್ದು, ಇದೊಂದು ಔಪಚಾರಿಕ ಪಂದ್ಯ. ಹೀಗಿರುವಾಗಲೇ ಟೀಂ ಇಂಡಿಯಾ ಪ್ಲೇಯರ್ಸ್ ಸಾಲು ಸಾಲು ದಾಖಲೆಗಳನ್ನು ಮಾಡಿದ್ದಾರೆ.
ಭಾರತ ತಂಡದ ನಾಯಕ ವಿರಾಟ್ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ 50+ ರನ್ಗಳಿಸಿದ ಬ್ಯಾಟರ್ ಆಗಿದ್ದಾರೆ. ಕೊಹ್ಲಿ 29 ಅರ್ಧಶತಕದೊಂದಿಗೆ ಪಟ್ಟಿಯಲ್ಲಿ ಫಸ್ಟ್ ಪ್ಲೇಸ್ ಗಳಿಸಿದ್ದಾರೆ. ಈಗ ವಿರಾಟ್ ದಾಖಲೆಯನ್ನು 4 ಶತಕ ಹಾಗೂ 25 ಅರ್ಧಶತಕದೊಂದಿಗೆ ರೋಹಿತ್ ಸರಿಗಟ್ಟಿದ್ದಾರೆ.
ಒಂದು ವೇಳೆ ಇಂದು ಹಿಟ್ಮ್ಯಾನ್ ಮತ್ತೊಂದು ಅರ್ಧಶತಕ ಸಿಡಿಸಿದರೆ, ಆಗ ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ಬಾರಿ ಹಾಫ್ ಸೆಂಚೂರಿ ಬಾರಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಪಾಲಾಗಲಿದೆ.