ಸೆಂಚುರಿಯನ್ : ದಕ್ಷಿಣ ಆಫ್ರಿಕಾ ಎದುರಿನ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ಅವರಿಂದ ಅಮೋಘ ದಾಖಲೆಯೊಂದು ನಿರ್ಮಾಣಗೊಂಡಿದೆ. ಅವರು ಚೇಸಿಂಗ್‌ ವೇಳೆ ಅತ್ಯಧಿಕ ರನ್‌ ಬಾರಿಸಿದ ನಾಯಕನಾಗಿ ಮೂಡಿಬಂದಿದ್ದಾರೆ.

ಈ ಮುಖಾಮುಖೀಯಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 5 ವಿಕೆಟಿಗೆ 203 ರನ್‌ ಪೇರಿಸಿತು. ಪಾಕಿಸ್ಥಾನ ಕೇವಲ 18 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 205 ರನ್‌ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು. ಇದರಲ್ಲಿ ಬಾಬರ್‌ ಆಜಂ ಪಾಲು 122 ರನ್‌. 59 ಎಸೆತ ನಿಭಾಯಿಸಿದ ಆಜಂ, 15 ಬೌಂಡರಿ ಹಾಗೂ 4 ಸಿಕ್ಸರ್‌ ಬಾರಿಸಿ ಆತಿಥೇಯ ಬೌಲರ್‌ಗಳನ್ನು ಕಾಡಿದರು.

ಬಾಬರ್‌ ಆಜಂ-ಮೊಹಮ್ಮದ್‌ ರಿಜ್ವಾನ್‌ (ಅಜೇಯ 73) ಸೇರಿಕೊಂಡು ಮೊದಲ ವಿಕೆಟಿಗೆ 17.4 ಓವರ್‌ಗಳಿಂದ 197 ರನ್‌ ಸೂರೆಗೈದರು. ಇದು ಟಿ20 ಚೇಸಿಂಗ್‌ ವೇಳೆ ದಾಖಲಾದ ಅತ್ಯಧಿಕ ಮೊತ್ತದ ಜತೆಯಾಟ. ಚೇಸಿಂಗ್‌ ವೇಳೆ ಅತ್ಯಧಿಕ ರನ್‌ ಬಾರಿಸಿದ ನಾಯಕನೆಂಬ ದಾಖಲೆ ನೇಪಾಲದ ಪಾರಸ್‌ ಖಾಡ್ಕ ಹೆಸರಲ್ಲಿತ್ತು (ಅಜೇಯ 106).

ಕ್ರೀಡೆ – Udayavani – ಉದಯವಾಣಿ
Read More