ಹರಾರೆ : ಶುಕ್ರವಾರದ ದ್ವಿತೀಯ ಟಿ20 ಪಂದ್ಯದಲ್ಲಿ ಪಾಕಿಸ್ಥಾನವನ್ನು 19 ರನ್ನುಗಳಿಂದ ಮಣಿಸುವ ಮೂಲಕ ಜಿಂಬಾಬ್ವೆ ಹೊಸ ಇತಿಹಾಸವೊಂದನ್ನು ಬರೆದಿದೆ. ಇದು ಪಾಕ್‌ ವಿರುದ್ಧ ಜಿಂಬಾಬ್ವೆ ಸಾಧಿಸಿದ ಮೊದಲ ಟಿ20 ಜಯವಾಗಿದೆ.

“ಹರಾರೆ ನ್ಪೋರ್ಟ್ಸ್ ಕ್ಲಬ್‌’ನಲ್ಲಿ ನಡೆದ ಈ ಪಂದ್ಯ ಸಣ್ಣ ಮೊತ್ತದ ಮೇಲಾಟವಾಗಿತ್ತು. ಮೊದಲು ಬ್ಯಾಟಿಂಗ್‌ ನಡೆಸಿದ ಜಿಂಬಾಬ್ವೆ ಗಳಿಸಿದ್ದು 9 ವಿಕೆಟಿಗೆ 118 ರನ್‌ ಮಾತ್ರ. ಇದನ್ನು ಚೇಸ್‌ ಮಾಡುವಲ್ಲಿ ಎಡವಿದ ಪಾಕಿಸ್ಥಾನ 19.5 ಓವರ್‌ಗಳಲ್ಲಿ 99 ರನ್ನಿಗೆ ಆಲೌಟ್‌ ಆಯಿತು.

ಮಧ್ಯಮ ವೇಗಿ ಲ್ಯೂಕ್‌ ಜೊಂಗ್ವೆ 18 ರನ್ನಿಗೆ 4 ವಿಕೆಟ್‌ ಉಡಾಯಿಸಿ ಜಿಂಬಾಬ್ವೆ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಬಾಬರ್‌ ಆಜಂ 41 ರನ್‌ ಮಾಡಿ 16ನೇ ಓವರ್‌ ತನಕ ಹೋರಾಟ ಜಾರಿಯಲ್ಲಿರಿಸಿದರೂ ಉಳಿದವರಿಗೆ ಜಿಂಬಾಬ್ವೆ ಬೌಲಿಂಗ್‌ ದಾಳಿಯನ್ನು ಎದುರಿಸಿ ನಿಲ್ಲಲಾಗಲಿಲ್ಲ.

ಜಿಂಬಾಬ್ವೆ ಬ್ಯಾಟಿಂಗ್‌ ಸರದಿಯಲ್ಲಿ ಆರಂಭಕಾರ ತಿನಾಶೆ ಕಮುನುಕಮೆÌ ಸರ್ವಾಧಿಕ 34 ರನ್‌ ಮಾಡಿದರು.

ಇದನ್ನೂ ಓದಿ :ಕೊಹ್ಲಿಯಿಂದಾಗಿ ಬ್ಯಾಟಿಂಗ್‌ ಸುಲಭವಾಯಿತು: ಪಡಿಕ್ಕಲ್‌

ಕ್ರೀಡೆ – Udayavani – ಉದಯವಾಣಿ
Read More