ಟಿ20 ವಿಶ್ವಕಪ್​ನಿಂದ ಔಟ್; ದ್ರಾವಿಡ್​ ಟೀಂಗೆ ವಿಶ್ರಾಂತಿ, ಲಕ್ಷ್ಮಣ್​ಗೆ ಕೋಚಿಂಗ್ ಜವಾಬ್ದಾರಿ – Rahul Dravid rested for New Zealand tour VVS Laxman to coach Team India


ತಂಡದ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಆಗಲಿದ್ದು, ರಾಹುಲ್ ದ್ರಾವಿಡ್ ಸ್ಥಾನಕ್ಕೆ ವಿವಿಎಸ್ ಬರಲಿದ್ದಾರೆ ಎಂಬ ಸುದ್ದಿ ಇದೆ. ಆದಾಗ್ಯೂ, ಈ ಬದಲಾವಣೆ ಕೇವಲ ಒಂದು ಸರಣಿಗೆ ಮಾತ್ರ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಟಿ20 ವಿಶ್ವಕಪ್​ನಿಂದ ಔಟ್; ದ್ರಾವಿಡ್​ ಟೀಂಗೆ ವಿಶ್ರಾಂತಿ, ಲಕ್ಷ್ಮಣ್​ಗೆ ಕೋಚಿಂಗ್ ಜವಾಬ್ದಾರಿ

ಮುಖ್ಯ ಕೋಚ್ ರಾಹುಲ್ ದ್ರಾವಿಡ್

ಐಸಿಸಿ ಟಿ20 ವಿಶ್ವಕಪ್‌ನಲ್ಲಿ (T20 World Cup 2022) ಭಾರತದ ಪಯಣ ಅಂತ್ಯಗೊಂಡಿದೆ. ಗುರುವಾರ ಅಡಿಲೇಡ್‌ ಓವಲ್‌ನಲ್ಲಿ ಇಂಗ್ಲೆಂಡ್‌ ಎದುರು ಟೀಂ ಇಂಡಿಯಾ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ರೋಹಿತ್ ಪಡೆಯ ಕನಸು ಭಗ್ನಗೊಂಡಿದೆ. ಅಂದಿನಿಂದ ಟೀಮ್ ಇಂಡಿಯಾದ ಟಿ20 ತಂಡದಲ್ಲಿ ಬದಲಾವಣೆಗಳಾಗಲಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಪೂರಕವೆಂಬಂತೆ ತಂಡದ ಕೋಚಿಂಗ್ ಸ್ಟಾಫ್​ನಲ್ಲಿ ಬದಲಾವಣೆ ಆಗಲಿದ್ದು, ರಾಹುಲ್ ದ್ರಾವಿಡ್ (Rahul Dravid) ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ (VVS. Laxman) ಬರಲಿದ್ದಾರೆ ಎಂಬ ಸುದ್ದಿ ಇದೆ. ಆದಾಗ್ಯೂ, ಈ ಬದಲಾವಣೆ ಕೇವಲ ಒಂದು ಸರಣಿಗೆ ಮಾತ್ರ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

ಟಿ20 ವಿಶ್ವಕಪ್ ಬಳಿಕ ಭಾರತ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧ ಸರಣಿ ಆಡಬೇಕಿದೆ. ಭಾರತ ತಂಡ ಈ ತಿಂಗಳು ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿದ್ದು, ಅಲ್ಲಿ ಮೂರು ಟಿ20 ಮತ್ತು ಅಷ್ಟೂ ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಕ್ಕಾಗಿ ಬಿಸಿಸಿಐ ಈಗಾಗಲೇ ಟೀಂ ಇಂಡಿಯಾವನ್ನು ಪ್ರಕಟಿಸಿದೆ.

ರಾಹುಲ್ ಮತ್ತು ಕಂಪನಿಗೆ ವಿಶ್ರಾಂತಿ

ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಏಷ್ಯಾಕಪ್‌ನಿಂದ ನಿರಂತರವಾಗಿ ತಂಡದೊಂದಿಗಿರುವ ಕೋಚಿಂಗ್ ಸಿಬ್ಬಂದಿಗೆ ಟಿ20 ವಿಶ್ವಕಪ್ ನಂತರ ವಿರಾಮ ನೀಡಲಾಗುವುದು. ಹೀಗಾಗಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಬೌಲಿಂಗ್ ಕೋಚ್ ಪರಸ್ ಮಹಾಂಬ್ರೆ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನವನ್ನು ವಿ.ವಿ.ಎಸ್. ಲಕ್ಷ್ಮಣ್, ಹೃಷಿಕೇಶ್ ಕಾನಿಟ್ಕರ್ (ಬ್ಯಾಟಿಂಗ್ ಕೋಚ್), ಸಾಯಿರಾಜ್ ಬಹುಲೆ (ಬೌಲಿಂಗ್ ಕೋಚ್) ತುಂಬಲಿದ್ದಾರೆ ಎಂದು ವರದಿಯಾಗಿದೆ.

TV9 Kannada


Leave a Reply

Your email address will not be published.