ಮುಂಬರುವ ಟಿ20 ವಿಶ್ವಕಪ್ಗಾಗಿ ತಂಡದ ಆಯ್ಕೆ ಬಗ್ಗೆ ಮಾತನಾಡಿದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದರು. ನಾವು ವಿಶ್ವಕಪ್ಗಾಗಿ ನಾವು ತ್ವರಿತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ವಿಶ್ವಕಪ್ಗೆ ಬಲಿಷ್ಠ ತಂಡ ಕಟ್ಟಬೇಕಿದೆ ಎಂದರು.
ಆಸ್ಟ್ರೇಲಿಯಾದ ಪ್ರತಿಯೊಂದು ಮೈದಾನವೂ ವಿಭಿನ್ನವಾಗಿವೆ. ಹೀಗಾಗಿ ತಂಡದ ಸಂಯೋಜನೆ ಮಾಡೋ ಮುನ್ನ ಎಲ್ಲರ ಬಗ್ಗೆಯೂ ಯೋಚನೆ ಮಾಡಬೇಕಾಗುತ್ತದೆ. ನಮ್ಮಲ್ಲಿ ಎಷ್ಟು ಸ್ಪಿನ್ ಮತ್ತು ಪೇಸ್ ಆಲ್ ರೌಂಡರ್ಗಳಿದ್ದಾರೆ ಎಂಬುದು ಮುಖ್ಯವಾಗುತ್ತದೆ ಎಂದು ಹೇಳಿದರು.
ಪರಿಸ್ಥಿತಿಗೆ ಅನುಗುಣವಾಗಿ ತಂಡದ ಆಯ್ಕೆ ನಡೆಯಲಿದೆ. ನಾವು ಎಲ್ಲಾ ಆಟಗಾರರಿಗೆ ಅವರ ಪಾತ್ರದ ಬಗ್ಗೆ ಹೇಳಿದ್ದೇವೆ. ಈಗ ಅವರು ತಮ್ಮ ಕೌಶಲ್ಯವನ್ನು ಹೇಗೆ ತೋರಿಸುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಯಾವುದೇ ಆಟಗಾರನ ಸ್ಥಾನವನ್ನು ಪಡೆದುಕೊಳ್ಳುವ ಬ್ಯಾಕ್ಅಪ್ ಆಟಗಾರರ ಅಗತ್ಯವಿದೆ ಎಂದು ವಿವರಿಸಿದ್ದಾರೆ.