ಟಿ20 ವಿಶ್ವಕಪ್​​ಗೆ ಭಾರತದ ಸಿದ್ಧತೆ ಹೇಗಿರಬೇಕು? -ಇಲ್ಲಿದೆ ಬೆಸ್ಟ್​​ ಮಾರ್ಗಸೂಚಿ


T20 ವಿಶ್ವಕಪ್,​​ ಟೀಮ್​ ಇಂಡಿಯಾಗೆ ಮುಗಿದ ಅಧ್ಯಾಯ. ಇಲ್ಲಿ ಕಲಿತ ಅದೆಷ್ಟೋ ತಪ್ಪಿನ ಪಾಠಗಳು, ಭಾರತಕ್ಕೆ ತಿದ್ದಿಕೊಳ್ಳುವ ಸಮಯ. ಹಾಗಾಗಿ ಮುಂದಿನ ವಿಶ್ವಕಪ್​ಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳೋದು ಅನಿವಾರ್ಯ. ಅದಕ್ಕೆ ಏನೆಲ್ಲಾ ಮಾಡಬೇಕು. ಹೇಗೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು.

ಟೀಮ್​ ಇಂಡಿಯಾ ಟಿ20 ವಿಶ್ವಕಪ್​​​ ಗೆಲ್ಲುವ ಫೇವರಿಟ್​! ಇದು ವಿಶ್ವಕಪ್​ ಆರಂಭಕ್ಕೂ ಮುನ್ನ ನುಡಿದ ಮಾತು. ಆದ್ರೆ ಟೀಮ್​ ಇಂಡಿಯಾ ಸೆಮಿಫೈನಲ್​​ ಪ್ರವೇಶಿಸುವುದಿರಲಿ, ಲೀಗ್​​​ ಹಂತದಲ್ಲೇ ಮುಗ್ಗರಿಸಿತು. ಅದಕ್ಕೆ ಟೀಮ್​​​​​ ಮ್ಯಾನೇಜ್​ಮೆಂಟ್​, ಬಿಸಿಸಿಐ, ಸೆಲೆಕ್ಷನ್​ ಕಮಿಟಿ ಮಾಡಿದ ಯಡವಟ್ಟುಗಳೇ ಕಾರಣ. ಮುಂದಿನ ಒಂದು ವರ್ಷದೊಳಗೆ T20 ವಿಶ್ವಕಪ್​​ ಶುರು ವಾಗಲಿದೆ. ಹಾಗಾಗಿ ಈ ವಿಶ್ವಕಪ್​​ನಲ್ಲಿ ಮಾಡಿದ ತಪ್ಪುಗಳನ್ನ ಭಾರತ, ತಿದ್ದಿಕೊಳ್ಳಲು ಇದು ಸುಸಮಯ.

ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಪಾತ್ರದ ಬಗ್ಗೆ ಸ್ಪಷ್ಟತೆಯ ಪಾಠ..!
ಹೌದು.. ಈ ಮಾರ್ಗಸೂಚಿ ಆಟಗಾರನಿಗೆ ಅತ್ಯಗತ್ಯ. ಟೀಮ್​ ಮ್ಯಾನೇಜ್​ಮೆಂಟ್, ಆಟಗಾರರಿಗೆ ತಮ್ಮ ಆಟದ ಕುರಿತು ಸ್ಪಷ್ಟತೆ ನೀಡಬೇಕು. ತಮ್ಮ ಪಾತ್ರದ ಬಗ್ಗೆ ಆಟಗಾರರಿಗೆ ಚೆನ್ನಾಗಿ ವ್ಯಾಖ್ಯಾನ ನೀಡಬೇಕು. ಕೊನೆವರೆಗೂ ಇದೇ ಯೋಜನೆಗೆ ಅಂಟಿಕೊಳ್ಳಬೇಕು ಅಂತ ಸೂಚಿಸಬೇಕು. ಆಗ ಬ್ಯಾಟ್ಸ್​ಮನ್​ ವೈಫಲ್ಯದ ಆತಂಕವಿಲ್ಲದೆ, ನಿರ್ಭೀತಿಯಿಂದ ಬ್ಯಾಟ್​​ ಬೀಸಿದ್ರೆ, ಬೌಲರ್​ಗಳು ಅಗ್ರೆಸಿವ್ ಸ್ಪೆಲ್ ಮಾಡಲು ನೆರವಾಗಲಿದೆ.

ಐಪಿಎಲ್​ ಪ್ರದರ್ಶನ ಆಯ್ಕೆಯ ಮಾನದಂಡವಾಗಬಾರದು
ಯುವ ಕ್ರಿಕೆಟಿಗರು ತಮ್ಮ ಸಾಮರ್ಥ್ಯ ತೋರಿಸಲು IPL ಉತ್ತಮ ವೇದಿಕೆ. ಇಲ್ಲಿ ಅಬ್ಬರಿಸಿದ ಆಟಗಾರರು, ರಾಷ್ಟ್ರೀಯ ತಂಡ ಪ್ರವೇಶಿಸೋದು ಸರ್ವೇಸಾಮಾನ್ಯ. ಆದ್ರೆ IPLನ ಅಂಕಿ-ಸಂಖ್ಯೆಗಳೇ ಮಹತ್ವದ ಟೂರ್ನಿಗೆ ಆಯ್ಕೆಗೆ, ಏಕೈಕ ಮಾನದಂಡವಾಗಬಾರದು. ಏಕೆಂದರೆ ಆಟಗಾರನ ಪಾತ್ರ, ಪರಿಸ್ಥಿತಿ ರಾಷ್ಟ್ರೀಯ ತಂಡದಲ್ಲಿ ಬದಲಾಗುತ್ತವೆ. ಹೀಗಾಗಿ ಪ್ರತಿ ಸ್ಪರ್ಧಿಯ ಯೋಜನೆಗಳನ್ನ ಹೇಗೆ ಎದುರಿಸ್ತಾನೆ ಎಂಬುದರ ಮೇಲೆ ಆಯ್ಕೆ ಉತ್ತಮ.

ವಿಶ್ವಕಪ್​​​ಗೂ ಮುನ್ನ ಪಿಚ್​​​ ಕಂಡೀಷನ್​ ಅಧ್ಯಯನ ಮಾಡಬೇಕು
ಭಾರತೀಯರು ಹೊರತುಪಡಿಸಿ, ಬೇರೆಲ್ಲಾ ಆಟಗಾರರು ವಿಶ್ವದ ವಿವಿಧ ಟಿ20 ಲೀಗ್​​​ಗಳಲ್ಲಿ ಕಾಣಿಸಿಕೊಳ್ತಾರೆ. ಹೀಗಾಗಿ ಆಯಾ ಪ್ರದೇಶದ ವಾತಾವರಣದ ಕಂಡೀಷನ್​​​ ಅನ್ನು ಸ್ಪಷ್ಟವಾಗಿ ಅರಿಯುತ್ತಾರೆ. ಆದ್ರೆ ಭಾರತೀಯರು IPL ಮಾತ್ರ ಆಡ್ತಾರೆ. ಇದು ಭಾರತೀಯರ ಹಿನ್ನಡೆಗೆ ಕಾರಣ ಅಂದರೆ ತಪ್ಪಾಗಲ್ಲ. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ-ಟ್ವೆಂಟಿ ವಿಶ್ವಕಪ್ ಶುರುವಾಗಲಿದ್ದು, ಅದಕ್ಕೂ ಮೊದಲು ಪರಿಸ್ಥಿತಿಗಳನ್ನ ಸ್ಟಡಿ ಮಾಡಬೇಕು. ಅದಕ್ಕಾಗಿ ತಂಡವೊಂದನ್ನ ಕಳುಹಿಸಿ ನಿರ್ದಿಷ್ಟ ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು.

ಬಯೋಬಬಲ್ ಮತ್ತು ಕೆಲಸದ ಹೊರೆಯನ್ನ ಗೌರವಿಸಿ..!
ಈಗಾಗಲೇ ಟೀಮ್​ ಇಂಡಿಯಾಗೆ ಮುಂದಿನ ಎರಡು ವರ್ಷಗಳ ವೇಳಾಪಟ್ಟಿ ತಿಳಿದಿದೆ. ಬಿಡುವಿಲ್ಲದ ಈ ವೇಳಾಪಟ್ಟಿಯಲ್ಲಿ ಬಬಲ್​​​​ನಲ್ಲಿರೋದು ಆಟಗಾರರಿಗೆ ದೊಡ್ಡ ಸವಾಲು. ಹೀಗಾಗಿ ಆಟಗಾರರು ಆಯಾಸಕ್ಕೆ ಒಳಗಾಗದಂತೆ, ಯೋಜನೆ ರೂಪಿಸೋದು ಮಂಡಳಿಗೆ ಚಾಲೆಂಜ್​​​ ಆಗಿದೆ. ವಿಶ್ವಕಪ್​​ಗೆ ಸಿದ್ಧತೆಗಾಗಿ ಯಾವಾಗ ವಿಶ್ರಾಂತಿ ನೀಡಬೇಕು ಎಂಬ ಪ್ಲಾನ್ ಹಾಕಿಕೊಳ್ಳಬೇಕು. ಜೊತೆಗೆ ಕೆಲಸದ ಹೊರೆ ತಗ್ಗಿಸುವ ಕೆಲಸ ಮಾಡಬೇಕು ಬಿಸಿಸಿಐ.!

ಮುಂದಿನ ಟಿ20 ವಿಶ್ವಕಪ್​​ಗೆ ಈಗಿನಿಂದಲೇ ಸಜ್ಜಾಗಬೇಕು..!
ಪ್ರಸ್ತುತ ವಿಶ್ವಕಪ್​ಗೆ ಬಿಡುವಿಲ್ಲದ ಸರಣಿಗಳು, ಕೋವಿಡ್​​ ಕಾರಣದಿಂದಾಗಿ ಟೀಮ್​ ಇಂಡಿಯಾ ತಯಾರಿ ನಡೆಸಿದ್ದು ಅಷ್ಟಕಷ್ಟೆ. ಆದರೆ ಮುಂದಿನ ವಿಶ್ವಕಪ್​​​ಗೆ ಈ ತಕ್ಷಣವೇ ತಯಾರಿ ಆರಂಭಿಸುವುದು ಉತ್ತಮ. ಮುಂದಿನ 12 ತಿಂಗಳಲ್ಲಿ ಭಾರತ ಮುಂದಿರೋ ಟಫ್​​ ಅಸೈನ್‌ ಮೆಂಟ್‌ಗಳೆಂದ್ರೆ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ ಪ್ರವಾಸ.!! ಬಳಿಕ ಟಿ-ಟ್ವೆಂಟಿ ವಿಶ್ವಕಪ್. ಹೀಗಾಗಿ ಈ ಮಾರ್ಗಸೂಚಿಗಳನ್ನ ತಪ್ಪದೇ ಪಾಲಿಸಿದ್ರೆ, ವಿಶ್ವಕಪ್​​ ಅನ್ನು ಧೈರ್ಯ ದಿಂದ ಎದುರಿಸಬಹುದಾಗಿದೆ.

News First Live Kannada


Leave a Reply

Your email address will not be published. Required fields are marked *