ಅಂತಿಮ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ 17 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯನ್ನು ರೋಹಿತ್ ಪಡೆ ವೈಟ್ವಾಶ್ ಮಾಡಿದೆ. ಭಾರತ ಮೊದಲ ಪಂದ್ಯದಲ್ಲಿ 6 ವಿಕೆಟ್, 2ನೇ ಟಿ20ಯಲ್ಲಿ 8 ರನ್ಗಳಿಂದ ರೋಚಕ ಗೆದ್ದಿತ್ತು.
ಅವಕಾಶ ಕೈ ಚೆಲ್ಲಿದ ಋತುರಾಜ್, ಭರವಸೆ ಇನ್ನಿಂಗ್ಸ್ ಕಟ್ಟದ ಶ್ರೇಯಸ್..!
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಟೀಮ್ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯ್ತು. ಸರಣಿಯಲ್ಲಿ ಚೊಚ್ಚಲ ಅವಕಾಶ ಪಡೆದ ಋತುರಾಜ್ ಗಾಯಕ್ವಾಡ್ ಬೌಂಡರಿ ಸಿಡಿಸಿ ಔಟಾದ್ರೆ, ಶ್ರೇಯಸ್ ಅಯ್ಯರ್ ಭರವಸೆಯ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದ್ರು. ಇನ್ನು ಇಶಾನ್ ಕಿಶಾನ್ ಸ್ಲೋ ಇನ್ನಿಂಗ್ಸ್ ಕಟ್ಟಿ 31 ರನ್ಗಳಿಗೆ ಆಟ ಅಂತ್ಯಗೊಳಿಸಿದ್ರು. ಮಿಡಲ್ ಆರ್ಡನ್ನಲ್ಲಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಕೂಡ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಹಾಗಾಗಿ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿತ್ತು.
ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್..!
ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಸೂರ್ಯಕುಮಾರ್ ಅಕ್ಷರಶಃ ನೆರವಾದ್ರು. ಆರಂಭದಿಂದಲೇ ಅಬ್ಬರಿಸಲು ಶುರುವಿಟ್ಟ ಸೂರ್ಯ, ಭರ್ಜರಿ 7 ಸಿಕ್ಸ್ ಸಿಡಿಸಿ ತಂಡದ ಮೊತ್ತ ಏರಿಕೆಗೆ ಕಾರಣರಾದ್ರು. 28 ಎಸೆತಗಳಲ್ಲೇ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಸೂರ್ಯ, ಪಂದ್ಯದ ಕೊನೆ ಬಾಲ್ನಲ್ಲಿ ಔಟಾದ್ರು. ಅತ್ತ ಸೂರ್ಯ ಘರ್ಜಿಸಿದ್ರೆ, ಇತ್ತ ಸೂರ್ಯಗೆ ಸಾಥ್ ನೀಡಿದ ವೆಂಕಟೇಶ್ ಅಯ್ಯರ್, ಅಜೇಯ 35 ರನ್ ಗಳಿಸಿ ಮತ್ತೊಮ್ಮೆ ಮಿಂಚಿದ್ರು. 5ನೇ ವಿಕೆಟ್ಗೆ ಈ ಜೋಡಿಯಿಂದ 37 ಎಸೆತಗಳಲ್ಲಿ 91 ರನ್ಗಳು ಹರಿದು ಬಂದವು. ಅಂತಿಮವಾಗಿ ಭಾರತ 5 ವಿಕೆಟ್ ನಷ್ಟಕ್ಕೆ 184 ಗಳಿಸ್ತು.
ಬ್ಯಾಕ್ ಟು ಬ್ಯಾಕ್ ಪೆವಿಲಿಯನ್ ಸೇರಿದ ವಿಂಡೀಸ್ ಬ್ಯಾಟರ್ಸ್..!
ಭಾರತ ನೀಡಿದ್ದ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ವಿಂಡೀಸ್, ಆರಂಭದಲ್ಲೇ ವಿಕೆಟ್ ಕಳೆದುಕೊಂಡಿತು. ಕೈಲ್ ಮೇಯರ್, ಶಾಯ್ಹೋಪ್, ಪೊಲಾರ್ಡ್, ಜೇಸನ್ ಹೋಲ್ಡರ್ ಒಂದಂಕಿಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ರೆ, ರಾವ್ಮನ್ ಪೊವೆಲ್ ಸ್ವಲ್ಪ ಹೊತ್ತು ಘರ್ಜಿಸಿ 25ರನ್ಗೆ ಆಟ ಮುಗಿಸಿದ್ರು. ಇದರ ಬೆನ್ನಲ್ಲೇ ರಸ್ಟನ್ ಚೇಸ್ ಕೂಡ ಪೆವಿಲಿಯನ್ನತ್ತ ಹೆಜ್ಜೆ ಹಾಕಿದ್ರು. ಈ ಹಿನ್ನೆಲೆ ಪಂದ್ಯದ ಮೇಲೆ ಟೀಮ್ ಇಂಡಿಯಾ ಹಿಡಿತ ಸಾಧಿಸಿತ್ತು.
ನಿಕೋಲಸ್ ಪೂರನ್ ಏಕಾಂಗಿ ಹೋರಾಟ ವ್ಯರ್ಥ..!
ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ನಿಕೋಲಸ್ ಪೂರನ್ ಭರ್ಜರಿ ಆಟವಾಡಿ ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿ ಸಂಭ್ರಮಿಸಿದ್ರು. ಆದ್ರೆ 61 ರನ್ಗಳಿಸಿದ್ದಾಗ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾಗಿ ಪಂದ್ಯವನ್ನ ಜಯದತ್ತ ಕೊಂಡೊಯುವಲ್ಲಿ ಫೇಲ್ ಆದ್ರು. ಬಳಿಕ ರೋಮಾರಿಯೋ ಶೆಫರ್ಡ್ ಕೂಡ ವಿಕೆಟ್ ಒಪ್ಪಿಸಿದ್ರು. ಆದ್ರೆ ವಿಂಡೀಸ್ ಗೆಲ್ಲಲು ಕೊನೇ ಓವರ್ನಲ್ಲಿ 23 ರನ್ಗಳ ಅಗತ್ಯ ಇತ್ತು. ಈ ವೇಳೆ ಬೌಂಡರಿ ಸಿಡಿಸಿ ಡ್ರೇಕ್ಸ್ ಔಟಾದ್ರು. ಆದ್ರೆ ಗಳಿಸಿದ್ದು ಕೇವಲ 5ರನ್ಗಳು ಮಾತ್ರ. ಆ ಮೂಲಕ ಟೀಮ್ ಇಂಡಿಯಾ 17 ರನ್ಗಳಿಂದ ಪಂದ್ಯವನ್ನ ಗೆದ್ದು ಬೀಗಿತು.
ಟೀಮ್ ಇಂಡಿಯಾ ಪರ ಶಾರ್ದೂಲ್, ದೀಪಕ್ ಚಹರ್, ವೆಂಕಟೇಶ್ ಅಯ್ಯರ್ ತಲಾ 2 ವಿಕೆಟ್ ಪಡೆದ್ರೆ, ಹರ್ಷಲ್ ಪಟೇಲ್ 3 ವಿಕೆಟ್ ಕಬಳಿಸಿ ಮಿಂಚಿದ್ರು.