ಟೀ ಇಂಡಿಯಾ ಇಂದು ಸ್ಕಾಟ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಗ್ರೂಪ್ 2 ರ ಸೂಪರ್ 12 ತಂಡಗಳ ನಡುವೆ ಇಂದು 37ನೇ ಪಂದ್ಯ ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಈಗ ಅಂಬೆಗಾಲಿಡುತ್ತಿರುವ ಸ್ಕಾಟ್ಲೆಂಡ್ ತಂಡವನ್ನು ಸುಲಭವಾಗಿ ಹಣಿಯುವ ಲೆಕ್ಕಾಚರಾದಲ್ಲಿ ಕೊಹ್ಲಿ ಪಡೆ ಇದೆ. ಆದರೆ ಟೀ ಇಂಡಿಯಾ ಸೇಮಿಸ್ಗೆ ಪ್ರವೇಶ ಪಡೆಯಬೇಕಾದರೆ ಸುಲಭ ಜಯ ಅಷ್ಟೇ ಅಲ್ಲ ಭಾರೀ ಗೆಲುವಿನ ಅಂತರ ಅನಿವಾರ್ಯವಾಗಿದೆ.
ಟಿ-20 ವಿಶ್ವಕಪ್ನಲ್ಲಿ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ಅಫ್ಘಾನ್ ಜೊತೆ ಗೆಲ್ಲುವ ಮೂಲಕ ಅಂತೂ ಇಂತೂ ಗೆಲುವಿನ ಖಾತೆ ತೆರೆದಿದೆ. ಪಾಕಿಸ್ತಾನ, ನ್ಯೂಜಿಲೆಂಡ್ ಎದುರು ಸೋತ ಕೊಹ್ಲಿ ಸೇನೆ, ಆಫ್ಘನ್ ವಿರುದ್ಧ 66 ರನ್ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಸೆಮಿಫೈನಲ್ ಕನಸು ಕೊಂಚಮಟ್ಟಿಗೆ ಚಿಗುರಿಸಿಕೊಂಡಿದೆ. ಭಾರತಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶ ಇದೆ. ಆದರೆ ಸಾಕಷ್ಟು ಜಟಿಲವಾಗಿದೆ. ಅದಕ್ಕಾಗಿ ಇದೀಗ ಕೊಹ್ಲಿ ಬಳಗದಲ್ಲಿ ನೆಟ್ ರನ್ರೇಟ್ ಲೆಕ್ಕಾಚಾರ ನಡೆಯುತ್ತಿದೆ.
ಪಾಕಿಸ್ತಾನ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ ಎರಡನೇ ತಂಡವಾಗಿ ಪ್ರವೇಶಿಸಲು ಕಿವೀಸ್ಗೆ ಭಾರತಕ್ಕಿಂತ ಹೆಚ್ಚು ಅವಕಾಶಗಳಿವೆ. ಆದರು ತನ್ನ ಪಾಲಿನ ಉಳಿದಿರುವ ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದಲ್ಲಿ ಟೀಂ ಇಂಡಿಯಾ ಅವಕಾಶ ಜೀವಂತವಾಗಿರಲಿದೆ. ಇನ್ನು ಭಾರತಕ್ಕೆ ಹೋಲಿಸಿದರೆ ಸ್ಕಾಟ್ಲೆಂಡ್ ಅಷ್ಟೇನು ಬಲಾಢ್ಯವಲ್ಲ ಅತಿಯಾದ ಆತ್ಮವಿಶ್ವಾಸದಿಂದ ಎಚ್ಚರ ತಪ್ಪಿ ಆಡಿದರೆ ಆಘಾತ ನೀಡೋದು ಅಂತು ಪಕ್ಕಾ
The post ಟೀಂ ಇಂಡಿಯಾಗೆ ಇಂದು ಸ್ಕಾಟ್ಲೆಂಡ್ ಸವಾಲು; ಭಾರೀ ಅಂತರದಿಂದ ಗೆಲ್ಲಲೇಬೇಕು ಕೊಹ್ಲಿ ಬಾಯ್ಸ್ appeared first on News First Kannada.