ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​ ಹಾಗೂ ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿ ಟೀಮ್​ ಇಂಡಿಯಾ ಪಾಲಿಗೆ ನಿಜಕ್ಕೂ ಚಾಲೆಂಜ್​. ಎದುರಾಳಿ ತಂಡದ ಕಾರಣದಿಂದಾಗಿ ಮಾತ್ರವಲ್ಲ. ಪಂದ್ಯದಲ್ಲಿ ಬಳಸುವ ಬಾಲ್ ಕೂಡ ಟೀಮ್​ ಇಂಡಿಯಾಗೆ ಚಾಲೆಜಿಂಗ್​. ಯಾಕಂದ್ರೆ ಪಂದ್ಯದಲ್ಲಿ ಬಳಸೋದು ಎಸ್​ಜಿ ಬಾಲ್​ ಅಲ್ಲ, ಡ್ಯೂಕ್​ ಬಾಲ್​.

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಹಣಾಹಣಿಗೆ ಆತ್ಮವಿಶ್ವಾಸದೊಂದಿಗೆ ಇಂಗ್ಲೆಂಡ್ ಫ್ಲೈಟ್​​ ಹತ್ತಿದ ಟೀಮ್​ ಇಂಡಿಯಾ, ಎಸ್​ಜಿ​ ಬೌಲ್​ನಲ್ಲಿ ಕಠಿಣ ಕ್ವಾರಂಟೀನ್​ಗೆ ಒಳಗಾಗಿದೆ. ನಾಳೆಗೆ ಕಠಿಣ ಕ್ವಾರಂಟೀನ್​ ಅಂತ್ಯವಾಗಲಿದ್ದು, ಬಳಿಕ ತಂಡ ಮೈದಾನಕ್ಕಿಳಿಯಲಿದೆ. ಅಷ್ಟೇ ಅಲ್ಲ. ಡ್ಯೂಕ್​ ಬಾಲ್​ನಲ್ಲಿ ಪ್ರಾಕ್ಟಿಸ್ ಸೆಷನ್​ ನಡೆಸಲು ಮ್ಯಾನೇಜ್ಮೆಂಟ್​​ ವಿಶೇಷ ಪ್ಲ್ಯಾನ್​ ರೂಪಿಸಿದೆ. ಯಾಕಂದ್ರೆ, ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಮಾತ್ರವಲ್ಲ. ಇಂಗ್ಲೆಂಡ್​ ಪ್ರವಾಸದಲ್ಲೂ ಕೊಹ್ಲಿ ಪಡೆಯ ಮುಂದಿರೂ ಸವಾಲು ಇದು.

ಆರ್​ಸಿಬಿ ಕ್ಯಾಂಪ್​ನಲ್ಲಿದ್ದಾಗ ನಾಯಕ ವಿರಾಟ್ ಕೊಹ್ಲಿಗೆ, ನೆಟ್ಸ್​​ನಲ್ಲಿ ಡ್ಯೂಕ್​ ಬಾಲ್​ನಲ್ಲಿ ಬೌಲಿಂಗ್ ಮಾಡುವಂತೆ ಮಾಡಿದ ಮನವಿಯನ್ನ, ನ್ಯೂಜಿಲೆಂಡ್ ವೇಗಿ ಕೈಲ್ ​ಜೆಮಿಸನ್​ ತಿರಸ್ಕರಿಸಿದ್ರಂತೆ. ಇಂಡೋ-ಕಿವೀಸ್​​ ನಡುವಿನ ಮಹತ್ವದ ಫೈನಲ್​ ಪಂದ್ಯದ ಚರ್ಚೆ ಆರಂಭವಾದಾಗ, ಇದು ಹೆಚ್ಚು ಚರ್ಚೆಯಲ್ಲಿದ್ದ ವಿಚಾರ. ಡ್ಯೂಕ್​, ಎಸ್​ಜಿ, ಕುಕುಬುರಾ ಈ ಮೂರು ಟೆಸ್ಟ್​ ಫಾರ್ಮೆಟ್​ನಲ್ಲಿ ಬಳಸೋ ಬಾಲ್​ಗಳು. ಭಾರತದ ನೆಲದಲ್ಲಿ ಎಸ್​ಜಿ ಬಾಲ್​ನಲ್ಲಿ ಟೀಮ್​ ಇಂಡಿಯಾಗೆ, ವಿದೇಶದಲ್ಲಿ ಡ್ಯೂಕ್, ​ಕುಕುಬುರಾ ಬಾಲ್​​ನಲ್ಲಿ ಆಡೋದು ನಿಜಕ್ಕೂ ದೊಡ್ಡ ಸವಾಲು.

ಭಾರತೀಯ ಬ್ಯಾಟ್ಸ್​ಮನ್​ಗಳಿಗೆ ಡ್ಯೂಕ್​ ಬಾಲ್​ ಕಂಟಕ
ಇಂಗ್ಲೆಂಡ್​, ವಿಂಡೀಸ್​ನಲ್ಲಿ ಬಳಸೋ ಬಾಲ್​ ವಿಶೇಷತೆ ಏನು?

1760ರಿಂದ ಬ್ರಿಟಿಷ್​ ನೆಲದಲ್ಲಿ ಬಳಸ್ತಾ ಇರೋ ಬಾಲ್​ ಇದು. ವೆಸ್ಟ್​​ ಇಂಡೀಸ್​​​ ಹಾಗೂ ಇಂಗ್ಲೆಂಡ್​​​ ವಾತಾವರಣಕ್ಕಾಗಿ ಈ ಬಾಲ್​ಗಳನ್ನ ಬಳಲಾಗುತ್ತಿದ್ದು, ಸ್ವಿಂಗ್​ ಹಾಗೂ ಬೌನ್ಸ್​ಗೆ ಈ ಬಾಲ್​ ಹೆಚ್ಚು ಸಹಕಾರಿಯಾಗಲಿದೆ. ಹೀಗಾಗಿ ಅಲ್ಲಿನ ಪಿಚ್​​ಗಳಲ್ಲಿ ಬೌಲರ್​ಗಳ ಅಬ್ಬರ ಸರ್ವೇ ಸಾಮಾನ್ಯ..! ಇತ್ತೀಚಿನ ದಿನಗಳಲ್ಲಿ ಐರ್ಲೆಂಡ್​ನಲ್ಲಿ ನಡೆಯೋ ಟೆಸ್ಟ್​ ಪಂದ್ಯಗಳಿಗೂ, ಇದೇ ಬೌಲ್​ ಅನ್ನ ಬಳಸಲಾಗುತ್ತಿದೆ.

ಡ್ಯೂಕ್​ ಬಾಲ್​ ಬಳಕೆ, ಉತ್ಪಾದನೆ ಏಲ್ಲಿ..?

 • ಉತ್ಪಾದನೆ- ಇಂಗ್ಲೆಂಡ್​​
 • ಸೀಮ್​- 6 ಹೊಲಿಗೆ
 • ಸ್ಟಿಚಿಂಗ್​- ಹ್ಯಾಂಡ್​ ಸ್ಟಿಚ್​
 • ಬಳಕೆ – ಇಂಗ್ಲೆಂಡ್​, ವಿಂಡೀಸ್​​

1970ರಿಂದ ಡ್ಯೂಕ್​ ಫ್ಯಾಮಿಲಿ ಈ ಬಾಲ್​​ ಉತ್ಪಾದನೆಯನ್ನ ಇಂಗ್ಲೆಂಡ್​ನಲ್ಲಿ ಆರಂಭಿಸಿದೆ. ಒಟ್ಟು 6 ಹೊಲಿಗೆಗಳ ಸೀಮ್​ ಹೊಂದಿರೋ ಈ ಬಾಲ್,​ ಸಂಪೂರ್ಣ ಹ್ಯಾಂಡ್​ ಸ್ಟಿಚ್​ ಬಾಲ್​ ಇದಾಗಿದೆ. ಇದನ್ನ ಇಂಗ್ಲೆಂಡ್​ ಹಾಗೂ ವೆಸ್ಟ್​ ಇಂಡೀಸ್​​ನಲ್ಲಿ ನಡೆಯೋ ಟೆಸ್ಟ್​ ಪಂದ್ಯಗಳಲ್ಲಿ ಬಳಸಲಾಗುತ್ತದೆ.

ಡ್ಯೂಕ್​ ಬಾಲ್​ ಮಾತ್ರವಲ್ಲ ಕುಕುಬುರಾ ಬಾಲ್ ಎದುರಿಸೋದು ಕೂಡ ಟೀಮ್​ ಇಂಡಿಯಾ ಆಟಗಾರರ ಪಾಲಿಗೆ, ಸವಾಲಿನ ವಿಚಾರವೇ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ​ಇಂಡಿಯಾ ಬ್ಯಾಟ್ಸ್​​ಮನ್​ಗಳು ಪರದಾಡಿದ್ದೇ, ಇದಕ್ಕೆ ತಾಜಾ ಉದಾಹರಣೆ. ಆದ್ರೆ ಟೆಸ್ಟ್​ ಕ್ರಿಕೆಟ್​ ಪಂದ್ಯವನ್ನಾಡೋ ಹೆಚ್ಚು ರಾಷ್ಟ್ರಗಳಲ್ಲಿ, ಇದೇ ಬಾಲ್​ ಬಳಸೋದು. ಆಸ್ಟ್ರೇಲಿಯಾ, ನ್ಯೂಜಿಲೆಂಡ್​, ಸೌತ್​ ಆಫ್ರಿಕಾ, ಜಿಂಬಾಬ್ವೆ, ಅಷ್ಟ್ರೇ ಏಕೆ? ಶ್ರೀಲಂಕಾ, ಪಾಕಿಸ್ತಾನಗಳಲ್ಲೂ ಇದೇ ಬಾಲ್​ ಬಳಸೋದು.

ಕುಕುಬುರಾ​ ಬಾಲ್​ ಉತ್ಪಾದನೆ ಹೇಗೆ..?

 • ಉತ್ಪಾದನೆ- ಆಸ್ಟ್ರೇಲಿಯಾ
 • ಸೀಮ್​- 6 ಹೊಲಿಗೆ
 • ಸ್ಟಿಚಿಂಗ್​- ಹ್ಯಾಂಡ್ + ಮಷಿನ್​​

ಪ್ರಮುಖ ಟೆಸ್ಟ್​ ರಾಷ್ಟ್ರಗಳಲ್ಲಿ ಬಳಕೆಯಾಗೋ ಈ ಬಾಲ್​, ಆಸ್ಟ್ರೇಲಿಯಾದಲ್ಲಿ ಉತ್ಪಾದಿಸಲಾಗುತ್ತದೆ. ಈ ಬಾಲ್​ನಲ್ಲೂ ಸೀಮ್​ ಭಾಗದಲ್ಲಿ 6 ಹೊಲಿಗೆಗಳಿದ್ದು, ಒಳಭಾಗದ ಎರಡು ಲೇಯರ್​​ಗಳನ್ನ ಹ್ಯಾಂಡ್​ ಹಾಗೂ ಹೊರಗಿನ 2 ಲೇಯರ್​​ಗಳನ್ನ ಮಷೀನ್​ ಸಹಾಯದಿಂದ, ಹೊಲಿಗೆ ಹಾಕಲಾಗುತ್ತದೆ.

ಡ್ಯೂಕ್​ ಹಾಗೂ ಕುಕುಬುರಾ ಬಾಲ್​ಗಳನ್ನ ಹೊರತುಪಡಿಸಿದ್ರೆ, ​ಟೆಸ್ಟ್​ ಪಂದ್ಯದಲ್ಲಿ ಎಸ್​ಜಿ ಬಾಲ್ ಕೂಡ ಬಳಸಲಾಗುತ್ತದೆ. ಇದನ್ನ ಬಳಸೋದು ಭಾರತದಲ್ಲಿ ಮಾತ್ರ. ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರವಲ್ಲ. ರಣಜಿ ಪಂದ್ಯಗಳಲ್ಲೂ ಭಾರತದಲ್ಲಿ ಇದೇ ಬಾಲ್​ ಬಳಸೋದು. ಆದ್ರೆ ಕಳೆದ ಕೆಲ ವರ್ಷಗಳಿಂದ ಭಾರತೀಯ ಆಟಗಾರರೂ, ಡ್ಯೂಕ್​ ಬಾಲ್​ನತ್ತ ಒಲವು ತೋರುತ್ತಿದ್ದಾರೆ ಅನ್ನೋದನ್ನ ಮರೆಯುವಂತಿಲ್ಲ.

SG ಬಾಲ್​ ಬಳಕೆ, ಉತ್ಪಾದನೆ ಏಲ್ಲಿ..?

 • ಉತ್ಪಾದನೆ- ಭಾರತ
 • ಸೀಮ್- 6 ಹೊಲಿಗೆ
 • ಸ್ಟಿಚಿಂಗ್- ಹ್ಯಾಂಡ್​ ಸ್ಟಿಚ್​
 • ಬಳಕೆ- ಭಾರತ​​

ಮೀರಠ್​​​ ಮೂಲದ ಕಂಪನಿಯೊಂದು ಈ ಬಾಲ್​ ತಯಾರಿಕೆಯನ್ನ ನಡೆಸುತ್ತಿದೆ. ಈ ಬಾಲ್ ಸೀಮ್​ ಭಾಗದಲ್ಲಿ 6 ಹೊಲಿಗೆಯನ್ನ ಹೊಂದಿದ್ದು, ಸಂಪೂರ್ಣವಾಗಿ ಕೈ ಹೊಲಿಗೆಯಿಂದಲೇ ತಯಾರಿಸಲಾಗುತ್ತದೆ. ಈ ಬಾಲ್​ ಭಾರತದಲ್ಲಿ ಆಡುವ ಪಂದ್ಯಗಳಿಗೆ ಮಾತ್ರ, ಬಳಸಲಾಗುತ್ತದೆ.

ಒಟ್ಟಿನಲ್ಲಿ ಮೂರು ತೆರನಾದ ಬಾಲ್​ಗಳನ್ನ ಸದ್ಯ ವಿಶ್ವ ಟೆಸ್ಟ್​ ಕ್ರಿಕೆಟ್​​ನಲ್ಲಿ ಬಳಸಲಾಗ್ತಿದೆ. ಪಿಚ್​ ಹಾಗೂ ಪ್ಲೇಯಿಂಗ್​ ಕಂಡೀಷನ್​ ಆಧಾರದಲ್ಲಿ ಬಾಲ್, ಪಂದ್ಯದ ಮೇಲೆ ತನ್ನದೇ ಪ್ರಭಾವ ಬೀರುತ್ತೆ ಅನ್ನೋದನ್ನ ಮರೆಯುವಂತಿಲ್ಲ. ಹೀಗಾಗಿಯೇ ಇಂಗ್ಲೆಂಡ್​ ಪ್ರವಾಸದಲ್ಲಿ ಡ್ಯೂಕ್​ ಬಾಲ್​ ಎದುರಿಸೋದು, ಭಾರತಕ್ಕೆ ಸವಾಲಾಗಲಿದೆ ಎಂದು ಹೇಳ್ತಾ ಇರೋದು.

The post ಟೀಂ ಇಂಡಿಯಾಗೆ ಡ್ಯೂಕ್​ ಬಾಲ್​ ಕಂಟಕ- ಎಸ್​ಜಿ, ಡ್ಯೂಕ್​ ಬಾಲ್​ಗೂ ಇರೋ ವ್ಯತ್ಯಾಸವೇನು? appeared first on News First Kannada.

Source: newsfirstlive.com

Source link