ಟೀಂ ಇಂಡಿಯಾಗೆ ದ್ರಾವಿಡ್ ಎಂಟ್ರಿ.. ಕೆಲವು ಆಟಗಾರರಿಗೆ ಮರುಜೀವ, ಚಿಗುರೊಡೆದ ಹೊಸ ಕನಸು..!
ಟೀಮ್ ಇಂಡಿಯಾದಲ್ಲಿ ಹೊಸ ಪರ್ವ ಶುರುವಾಗಿದೆ. ಇದರೊಂದಿಗೆ ಹೊಸ ಆಶಾಭಾವನೆಗಳೂ ಮೊಳೆಕೆ ಹೊಡೆದಿದೆ. ಇದು ಕೇವಲ ಟೀಮ್ ಇಂಡಿಯಾಕ್ಕೆ ಮಾತ್ರವೇ ಸಿಮೀತವಾಗಿಲ್ಲ.. ದ್ರಾವಿಡ್ ಆಗಮನ, ಕೆಲ ಆಟಗಾರರಿಗೂ ಹೊಸ ಆಸೆಯನ್ನ ಚಿಗುರೊಡೆಯುವಂತೆ ಮಾಡಿದೆ.
ಕಳೆದೈದು ವರ್ಷಗಲ್ಲಿ ಟೀಮ್ ಇಂಡಿಯಾದಲ್ಲಿ ಹಲವು ಪ್ರತಿಭಾನ್ವಿತ ಕ್ರಿಕೆಟಿಗರು, ಗೆಸ್ಟ್ ಆಟಗಾರರಾಗಿ ಬಂದು ಹೋಗಿದ್ದಾರೆ. ಹಾಗೇ ಸತತ ತಂಡದಲ್ಲಿದ್ದರೂ, ಬೆಂಚ್ಗೆ ಸೀಮಿತವಾದ ಹಲವು ಕ್ರಿಕೆಟಿಗರಿದ್ದಾರೆ. ಕೆಲ ಕ್ರಿಕೆಟಿಗರಂತೂ ಅಗೊಂದು, ಈಗೊಂದು ಚಾನ್ಸ್ನಲ್ಲೇ ಟೀಮ್ ಇಂಡಿಯಾದಿಂದ ಗೇಟ್ಪಾಸ್ ಕೂಡ ಪಡೆದಿದ್ದಾರೆ. ಆದ್ರೀಗ ನೂತನ ಕೋಚ್ ರಾಹುಲ್ ದ್ರಾವಿಡ್ ಆಗಮನ, ಕೆಲ ಕ್ರಿಕೆಟಿಗರ ವೃತ್ತಿ ಜೀವನಕ್ಕೆ ಮರುಜೀವ ತುಂಬುತ್ತಿದೆ.
ಟೆಸ್ಟ್ ವೈಸ್ ಕ್ಯಾಪ್ಟನ್ ರಹಾನೆ, ಅಶ್ವಿನ್ಗೆ ಹೊಸ ಭರವಸೆ..?
ರಹಾನೆ, ಅಶ್ವಿನ್ ಟೀಮ್ ಇಂಡಿಯಾ ಟೆಸ್ಟ್ ತಂಡದ ಸ್ಟಾರ್ ಆಟಗಾರರು. ಅದ್ರೆ ಇವರಿಬ್ಬರ ಸಮಸ್ಯೆ ಬೇರೇಯದ್ದೇ ಆಗಿತ್ತು. ಒಬ್ಬರು ತಂಡದಲ್ಲಿದ್ದೂ ಬ್ಯಾಡ್ ಫಾರ್ಮ್ನಿಂದ ಒದ್ದಾಡ್ತಿದ್ರೆ, ಮತ್ತೊಬ್ಬರು ಉತ್ತಮ ಲಯದಲ್ಲಿದ್ರೂ ಬೆಂಚ್ಗೆ ಸಿಮೀತವಾಗ್ತಿದ್ದರು. ಆದ್ರೀಗ ಈ ಸಮಸ್ಯೆಯಿಂದ ದೂರ ಉಳಿಯೋ ಹೊಸ ಭರವಸೆ, ಇವರಿಬ್ಬರಲ್ಲಿ ಮೂಡಿದೆ. ಯಾಕಂದ್ರೆ ರಾಜಸ್ಥಾನ್ ಮೆಂಟರ್ ಆದಾಗಿನಿಂದ ರಹಾನೆಯ ಬ್ಯಾಟಿಂಗ್ ಬಗ್ಗೆ ಅರಿತಿರುವ ದ್ರಾವಿಡ್, ವೈಫಲ್ಯಕ್ಕೆ ಮದ್ದಾಗುತ್ತಿದ್ದರು. ಆದ್ರೀಗ ಇಂಥಹ ಸಮಸ್ಯೆಯಿಂದಲೇ ಬಳಲುತ್ತಿರುವ ರಹಾನೆ, ದ್ರಾವಿಡ್ ಆಗಮನದಿಂದ ಫುಲ್ ಖುಷ್ ಆಗಿದ್ದಾರೆ. ರಹಾನೆ ಮಾತ್ರವಲ್ಲ..! ಅಶ್ವಿನ್ ಕೂಡ ಇನ್ಮುಂದೆ ಬೆಂಚ್ ಕಾಯಲ್ಲ ಎಂಬ ಭರವಸೆಯಲ್ಲೇ ಇದ್ದಾರೆ.
ಸಂಜು-ಮನೀಶ್ ಪ್ರತಿಭೆಗೆ ನೀರೆರೆಯುತ್ತಾರಾ ದ್ರಾವಿಡ್..?
ಸಂಜು ಸ್ಯಾಮ್ಸನ್, ಮನೀಶ್ ಪಾಂಡೆ ಪ್ರತಿಭಾನ್ವಿತ ಆಟಗಾರರು ಅನ್ನೋದ್ರಲ್ಲಿ ಎರಡು ಮಾತಿಲ್ಲ. 2015ರ ಜಿಂಬಾಬ್ವೆ ಪ್ರವಾಸದಲ್ಲಿ ರಾಷ್ಟ್ರೀಯ ತಂಡಕ್ಕೆ ಡೆಬ್ಯೂ ಮಾಡಿದ್ದ ಈ ಇಬ್ಬರು, ಟೀಮ್ ಇಂಡಿಯಾದ ಗೆಸ್ಟ್ ಅಪಿರಿಯನ್ಸ್ ಪ್ಲೇಯರ್ಗಳಾಗಿಬಿಟ್ಟಿದ್ದಾರೆ.. ಈ ಇಬ್ಬರು ತಂಡದಲ್ಲಿದ್ದರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳದೆ, ಬೆಂಚ್ ಹಾಗೂ ಎಕ್ಸ್ಟ್ರಾ ಪ್ಲೇಯರ್ಗಳಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಸದ್ಯ ಇವರಿಬ್ಬರು ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡೋ ಕನಸಿನಲ್ಲಿದ್ದಾರೆ. ಇವರಿಬ್ಬರ ಬ್ಯಾಟಿಂಗ್ ಟೆಕ್ನಿಕ್ ಅನ್ನ ಹತ್ತಿರದಿಂದ ನೋಡಿರುವ ದ್ರಾವಿಡ್, ಕೋಚ್ ಆಗಿ ಇವರಿಬ್ಬರ ಸರಿ ತಪ್ಪುಗಳನ್ನ ಹೇಳಿಕೊಡಲಿದ್ದಾರೆ.
ಜಸ್ಟ್.. ರಹಾನೆ, ಅಶ್ವಿನ್, ಸಂಜು, ಮನೀಶ್ಗೆ ಮಾತ್ರವಲ್ಲ. ಅಂಡರ್-19 ತಂಡದಲ್ಲಿ ನಾಯಕನಾಗಿದ್ದ ಪೃಥ್ವಿ ಶಾ, ಶುಭ್ಮನ್ ಗಿಲ್ಗೂ ಹೊಸ ಆಸೆ ಹುಟ್ಟಿಸಿದೆ. ಅದ್ರಲ್ಲೂ ಖಾಯಂ ಸ್ಥಾನಕ್ಕಾಗಿ ಫೈಟ್ ಮಾಡ್ತಿರೋ ಮುಂಬೈಕರ್ ಪೃಥ್ವಿ, ಹೊಸ ಭವಿಷ್ಯ ಕಂಡುಕೊಳ್ಳೋ ಲೆಕ್ಕಚಾರದಲ್ಲೇ ಇದ್ದಾರೆ. ಒಟ್ನಲ್ಲಿ ದ್ರಾವಿಡ್ ಆಗಮನ ಕೆಲ ಆಟಗಾರರಿಗೆ ಮರುಜೀವ ಬಂದಂತಾಗಿರೋದಂತೂ ಸುಳ್ಳಲ್ಲ.