ಟೀಂ ಇಂಡಿಯಾಗೆ ಭರ್ಜರಿ ಜಯ.. ಕ್ಯಾಪ್ಟನ್​ ಆಗಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ..!


ವೆಸ್ಟ್​ ಇಂಡೀಸ್​​ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಏಕದಿನ ಇತಿಹಾಸದಲ್ಲಿ ಭಾರತ ಆಡಿದ 1000ನೇ ಪಂದ್ಯವನ್ನು ಗೆದ್ದಿದೆ. ಈ ಗೆಲುವು ಟೀಂ ಇಂಡಿಯಾ ಒನ್​​ ಡೇ ಕ್ಯಾಪ್ಟನ್​ ಆಗಿ ಡೆಬ್ಯೂಟ್​ ಮಾಡಿದ ರೋಹಿತ್​ ಶರ್ಮಾ ನೇತೃತ್ವದಲ್ಲೇ ಗೆದ್ದಿದ್ದು ಮಾತ್ರ ಸ್ಮರಣೀಯ.

1000 ಏಕದಿನ ಪಂದ್ಯವನ್ನು ಗೆಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಉತ್ತಮ ಬೌಲಿಂಗ್​​ನಿಂದ ಇಂಡೀಸ್​​ ತಂಡವನ್ನು ಕೇವಲ 177 ರನ್​​ಗೆ ಕಟ್ಟಿ ಹಾಕಿತ್ತು.

ಬಳಿಕ ಈ ಗುರಿ ಚೇಸ್​ ಮಾಡಿದ ಟೀಂ ಇಂಡಿಯಾ ರೋಹಿತ್​ ಶರ್ಮಾ ಜವಾಬ್ದಾರಿಯುತ ಆಟದಿಂದ ಸುಲಭವಾಗಿ ಗೆದ್ದಿದೆ. 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ.

ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಅಬ್ಬರದಾಟದ ಮೂಲಕ ಉತ್ತಮ ಆರಂಭ ನೀಡಿದರು. ಈ ಮೂಲಕ ಭಾರತ ಗೆಲುವನ್ನು ಸುಲಭವಾಗಿಸಿದರು. ಅಲ್ಲದೇ ಕ್ಯಾಪ್ಟನ್​​ ಆಗಿ ಮೊದಲನೇ ಪಂದ್ಯ ಗೆದ್ದು ದಾಖಲೆ ಬರೆದರು.

The post ಟೀಂ ಇಂಡಿಯಾಗೆ ಭರ್ಜರಿ ಜಯ.. ಕ್ಯಾಪ್ಟನ್​ ಆಗಿ ಹೊಸ ದಾಖಲೆ ಬರೆದ ರೋಹಿತ್​ ಶರ್ಮಾ..! appeared first on News First Kannada.

News First Live Kannada


Leave a Reply

Your email address will not be published.