ಟೀಮ್​ ಇಂಡಿಯಾಗೆ ಸಿಕ್ಕಿದ್ದಾರೆ ಮತ್ತೊಬ್ರು ಸೆಹ್ವಾಗ್​. ವೀರೂ ನಿವೃತ್ತಿ ಬಳಿಕ ಖಾಲಿಯಿದ್ದ ಅವರ ಜಾಗವನ್ನ ತುಂಬಿದ್ದಾರೆ. ಸೇಮ್​​ ಟು ಸೇಮ್​ ಸೆಹ್ವಾಗ್​ರಂತೆಯೇ ಫಿಯರ್​​ಲೆಸ್​ ಬ್ಯಾಟಿಂಗ್​ ಮಾಡುವ ಇವರು ಕೂಡ, ಹೊಡಿಬಡಿ ಆಟಕ್ಕೇ ಫೇಮಸ್​​. ಸೆಹ್ವಾಗ್​ರಂತ ಆಟ ಇನ್ಯಾರಿಂದಲೂ ಸಾಧ್ಯವಿಲ್ಲ ಅಂತಿದ್ದವರೆಲ್ಲಾ ಇದೀಗ ನಿಜ ಅಂತಿದ್ದಾರೆ.

ವಿರೇಂದ್ರ ಸೆಹ್ವಾಗ್​.. ಟೀಮ್​ ಇಂಡಿಯಾದ ಸ್ಫೋಟಕ ಬ್ಯಾಟ್ಸ್​ಮನ್​​. ಟಿ20, ಒಡಿಐ, ಟೆಸ್ಟ್..​​ ಹೀಗೆ ಯಾವುದೇ ಫಾರ್ಮೆಟ್​ ಆಗಿರಲಿ.. ಸೆಹ್ವಾಗ್​ ಸ್ಟೈಲ್ ಒಂದೇ.. ಸಿಕ್ಸರ್, ಬೌಂಡರಿಗಳ ಸುರಿಮಳೆ.. ಇನ್ನಿಂಗ್ಸ್​ನ ಮೊದಲ​ ಎಸೆತವನ್ನೇ ಬೌಂಡರಿಗಟ್ಟುವ ಈ ಡೇರಿಂಗ್​ ಓಪನರ್​​ ಕ್ರಿಸ್​​ಗಿಳಿದ್ರೆ, ಬೌಲರ್​​​ಗಳಿಗೆ ನಡುಕ. ಅದೆಂತಹ ವರ್ಲ್ಡ್ ​ಕ್ಲಾಸ್​​ ಬೌಲರ್​​ ಆದರೂ ವೀರೂ ಫಿಯರ್​​ಲೆಸ್​​ ಆಟಕ್ಕೆ ತಲೆಬಾಗಲೇಬೇಕು. ಅಷ್ಟರ ಮಟ್ಟಿಗೆ ಬೌಲರ್​​ಗಳಿಗೆ ಭಯ ಹುಟ್ಟಿಸಿದ ಸೆಹ್ವಾಗ್, ವಿಶ್ವ​ ಕ್ರಿಕೆಟ್​​ನಲ್ಲಿ ಹೆಚ್ಚು ಗಮನ ಸೆಳೆದಿರೋದು, ತನ್ನ ಡಿಫ್ರೆಂಟ್​ ಬ್ಯಾಟಿಂಗ್​ ಮ್ಯಾನರಿಸಮ್​ನಿಂದ. ಬ್ಯಾಟ್​ ಇರೋದೇ ಚೆಂಡನ್ನ ದಂಡಿಸೋಕೆ ಎಂಬ ಮಂತ್ರವನ್ನ ತಪ್ಪದೇ ಪಠಿಸುತ್ತಿದ್ದ ಡೆಲ್ಲಿ ಡ್ಯಾಷರ್​​, ಸದಾ ಅಗ್ರೆಸ್ಸಿವ್​​ ಬ್ಯಾಟಿಂಗ್ ಮೂಡ್​ನಲ್ಲೇ ಇರ್ತಿದ್ರು. ಸೆಹ್ವಾಗ್​ ಬಗ್ಗೆ ಇಷ್ಟೆಲ್ಲಾ ಹೇಳೋದಕ್ಕೆ ಕಾರಣ 17 ವರ್ಷದ ಶೆಫಾಲಿ ವರ್ಮಾ.

ಸೆಹ್ವಾಗ್​ ಅಂತಾರಾಷ್ಟ್ರೀಯ ಕ್ರಿಕೆಟ್​​ ನಿವೃತ್ತಿ ಘೋಷಿಸಿದ ನಂತ್ರ ಅವರ ಸ್ಥಾನ ತುಂಬೋಕೆ ಯಾರಿಂದಲೂ ಸಾಧ್ಯವಾಗಿಲ್ಲ. ಈಗಲೂ ಸಹ ಈ ಪ್ರಶ್ನೆ ಎಲ್ಲರನ್ನೂ ಬಹುವಾಗಿ ಕಾಡ್ತಿದೆ. ಆದರೀಗ ಈ ದೊಡ್ಡ ಪ್ರಶ್ನೆಗೆ, ಉತ್ತರ​​ ಸಿಕ್ಕಿದೆ. ಯೆಸ್.. ಶೆಫಾಲಿ ವರ್ಮಾ ಅದಕ್ಕೆ ಉತ್ತರ ಆಗಿದ್ದಾರೆ. ಟೀಮ್​ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಶೆಫಾಲಿ ಕೂಡ, ಫಿಯರ್​​ಲೆಸ್​ ಆಟದಿಂದಲೇ ಗಮನ ಸೆಳೆದಿದ್ದಾರೆ. ಥೇಟ್​​ ಸೆಹ್ವಾಗ್​ರಂತೆಯೇ ಹೊಡಿಬಡಿ ಆಟಕ್ಕೆ ಫೇಮಸ್​. ಬೌಲರ್​​​ಗಳಿಗೆ ದಂಡಂ ದಶಗುಣಂ ಅನ್ನುವ 17 ವರ್ಷದ ಬ್ಯಾಟ್ಸ್​ವುಮೆನ್​, ತನ್ನ ಸ್ಫೋಟಕ ಆಟದ ಮೂಲಕ ಸಿಕ್ಸ್, ಫೋರ್​ಗಳ ಸುರಿಮಳೆ ಸುರಿಸುತ್ತಾರೆ. ಅದಕ್ಕಾಗಿಯೇ ಶೆಫಾಲಿಯನ್ನ, ಲೇಡಿ ಸೆಹ್ವಾಗ್​ ಅಂತ ಕರೀತಾರೆ.

ಟೀಮ್​ ಇಂಡಿಯಾಕ್ಕೆ ಸಿಕ್ರು ರನ್​​ ಬೇಟೆಯಾಡೋ ಲೇಡಿ ಸೆಹ್ವಾಗ್​
ಇಂಗ್ಲೆಂಡ್​ ಟೆಸ್ಟ್​​ನಲ್ಲಿ ಮಿಂಚಿನ ಬ್ಯಾಟಿಂಗ್​ ನಡೆಸಿದ ಶೆಫಾಲಿ ವರ್ಮಾ

ಟೀಮ್​ ಇಂಡಿಯಾ ಮೆನ್ಸ್​ ಟೀಮ್​ನಲ್ಲಿ ಸೆಹ್ವಾಗ್​ರಂತೆ ಬ್ಯಾಟ್​ ಬೀಸುವ ಆಟಗಾರರು ಇಲ್ಲದಿದ್ರೂ, ವುಮೆನ್ಸ್​ ತಂಡದಲ್ಲಿ ಶೆಫಾಲಿ ವರ್ಮಾ ಆ ಸ್ಥಾನವನ್ನ ಫುಲ್​ಫಿಲ್​ ಮಾಡಿದ್ದಾರೆ.​ ಫಿಯರ್​​ಲೆಸ್​ ಲೇಡಿ ಸೆಹ್ವಾಗ್​ ಎಂದೇ ಖ್ಯಾತಿ ಪಡೆದಿರೋ ಶೆಫಾಲಿ ವರ್ಮಾ, ಇಂಟರ್​ನ್ಯಾಷನಲ್​​ ಕ್ರಿಕೆಟ್​ಗೆ ಕಾಲಿಟ್ಟ ಕೆಲವೇ ತಿಂಗಳಲ್ಲಿ ಅದನ್ನ ನಿರೂಪಿಸಿದ್ದಾರೆ. ಅದಕ್ಕೆ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಪಂದ್ಯವೇ ಒಂದೇ ಸಾಕ್ಷಿ.

ಮೊದಲ ಇನ್ನಿಂಗ್ಸ್​​​ನಲ್ಲಿ ಶೆಫಾಲಿ
ಬ್ರಿಸ್ಟಲ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 152 ಎಸೆತಗಳನ್ನ ಎದುರಿಸಿದ ಶೆಫಾಲಿ, 96 ರನ್​ ಸಿಡಿಸಿದ್ರು. ಆದ್ರೆ ಕೇವಲ 4 ರನ್​ಗಳಿಂದ ಶತಕ ವಂಚಿತರಾದ್ರು. 13 ಬೌಂಡರಿ, 2 ಸಿಕ್ಸ್​ ಸಿಡಿದ್ದ ಲೇಡಿ ಸೆಹ್ವಾಗ್​, 63.16 ಸ್ಟ್ರೈಕ್​ರೇಟ್​ ಹೊಂದಿದ್ದಾರೆ. ಮೊದಲ ಇನ್ನಿಂಗ್ಸ್​​​ನಲ್ಲಿ ಆಕ್ರಮಣಕಾರಿ ಆಟದ ಕಿಕ್​​​ ಸ್ಟಾರ್ಟ್​​ ಮಾಡಿದ್ದ ಶೆಫಾಲಿ, 2ನೇ ಇನ್ನಿಂಗ್ಸ್​​ನಲ್ಲೂ ಫಿಯರ್​​ಲೆಸ್​ ಆಟವಾಡಿದ್ರು.

ಎರಡನೇ ಇನ್ನಿಂಗ್ಸ್​​​ನಲ್ಲಿ ಶೆಫಾಲಿ
ಇನ್ನು 2ನೇ ಇನ್ನಿಂಗ್ಸ್​ನಲ್ಲಿ 83 ಎಸೆತಗಳನ್ನ ಎದುರಿಸಿದ ಶೆಫಾಲಿ, 63 ರನ್​ ಸಿಡಿಸಿದ್ರು. 11 ಬೌಂಡರಿ, 1 ಸಿಕ್ಸರ್​​​​ ಸಿಡಿರುವ ಲೇಡಿ ಸೆಹ್ವಾಗ್​, 75.90 ಸ್ಟ್ರೈಕ್​ರೇಟ್​ ಹೊಂದಿದ್ದಾರೆ.

ಶೆಫಾಲಿ ಸ್ಫೋಟಕ ಆಟಕ್ಕೆ ಸಿಕ್ತು ಟಿ20 ನಂ.1 ಪಟ್ಟ
ಡೇರಿಂಗ್​ ಆ್ಯಂಡ್​ ಡ್ಯಾಶಿಂಗ್​​​​ ಬ್ಯಾಟಿಂಗ್​ನಿಂದಲೇ, ಚುಟುಕು ಕ್ರಿಕೆಟ್​ನಲ್ಲಿ ಶೆಫಾಲಿ ಹೊಂದಿರೋದು 148.31 ಸ್ಟ್ರೈಕ್​ರೇಟ್​​. ಶೆಫಾಲಿ ಟಿ20 ಕ್ರಿಕೆಟ್​​ ಫಾರ್ಮೆಟ್​ಗೆ ಕಾಲಿಟ್ಟು 1 ವರ್ಷ 8 ತಿಂಗಳಷ್ಟೇ ಆಗಿದ್ದು, ಅತಿ ಕಡಿಮೆ ಅವಧಿಯಲ್ಲೇ ಟಿ20 ಕ್ರಿಕೆಟ್​​​ನಲ್ಲಿ ನಂಬರ್ ​​ವನ್​​ ಪಟ್ಟ ಅಲಂಕರಿಸಿದ್ದಾರೆ. ಜೊತೆಗೆ ಚಿಕ್ಕವಯಸ್ಸಿನಲ್ಲೇ ಱಂಕಿಂಗ್​ನಲ್ಲಿ ನಂಬರ್​​ವನ್​ ಕಿರೀಟ ಧರಿಸಿದ, ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ಸೆಹ್ವಾಗ್​​ರಂಥ​ ಆಟ ಜಗತ್ತಿನಲ್ಲಿ ಇನ್ಯಾರಿಂದಲೂ ಊಹಿಸಲು ಸಾಧ್ಯವಿಲ್ಲ ಎಂದವ್ರು, ಈಗ ಶೆಫಾಲಿ ಆಟಕ್ಕೆ ಮನಸೋತು ಲೇಡಿ ಸೆಹ್ವಾಗ್​ ಅಂತಿದ್ದಾರೆ. ಸದ್ಯ ಇಂಗ್ಲೆಂಡ್​ ವಿರುದ್ಧ ಟೆಸ್ಟ್​ ಮುಗಿಸಿರುವ ಟೀಮ್​ ಇಂಡಿಯಾ, ಲಿಮಿಟೆಡ್ ಓವರ್​​ಗಳ ಸರಣಿಗೆ ಸಿದ್ಧತೆ ಮಾಡಿಕೊಳ್ತಿದೆ. ಈ ಸರಣಿಯಲ್ಲೂ ಶೆಫಾಲಿ ಅಬ್ಬರ ಮುಂದುವರಿಯಲಿ ಅನ್ನೋದೇ, ಅಭಿಮಾನಿಗಳ ಆಶಯ.

The post ಟೀಂ ಇಂಡಿಯಾಗೆ ಸಿಕ್ರು ಲೇಡಿ ಸೆಹ್ವಾಗ್ -ಮಾರ್ಡನ್ ಕ್ರಿಕೆಟ್​​ನ ರೋರಿಂಗ್​ ಸ್ಟಾರ್ ಇವರು! appeared first on News First Kannada.

Source: newsfirstlive.com

Source link