ಟಿ20 ಕ್ರಿಕೆಟ್ನ ಬಲಿಷ್ಠ ತಂಡ ಎನಿಸಿಕೊಂಡಿದ್ದ ಟೀಮ್ ಇಂಡಿಯಾ, ಮೊದಲೆರೆಡು ಪಂದ್ಯಗಳ ಸೋಲಿನಿಂದ ಭಾರೀ ನಿರಾಸೆ ಮೂಡಿಸಿದೆ.. ಆದ್ರೆ, ಟೀಮ್ ಇಂಡಿಯಾದ ಸೋಲಿನ ಬಗ್ಗೆ ಭಾರೀ ಚರ್ಚೆಯೇ ನಡೀತಿದ್ದು, ಇಂಥಹ ಹೀನಾಯ ಪ್ರದರ್ಶನಕ್ಕೆ ತಂಡದಲ್ಲಿನ ಗುಂಪುಗಾರಿಕೆಯೇ ಕಾರಣ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶೊಯೇಬ್ ಅಖ್ತರ್, ಸದ್ಯ ಟೀಮ್ ಇಂಡಿಯಾದ ಪ್ರದರ್ಶನ ನೋಡಿದರೆ, ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ಇಲ್ಲಿ ಒಂದು ಗುಂಪು ಕೊಹ್ಲಿ ಪರವಾಗಿದ್ದರೆ, ಮತ್ತೊಂದು ಗುಂಪು ಕೊಹ್ಲಿ ವಿರುದ್ದವಾಗಿದೆ. ಹೀಗಾಗಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದೆ ಎಂದಿದ್ದಾರೆ.
ತಂಡದಲ್ಲಿ ಈ ರೀತಿಯಾಗಿ ಯಾಕೆ ನಡೆಯುತ್ತಿದೆ ನನಗೆ ತಿಳಿದಿಲ್ಲ. ಬಹುಶಃ ಇದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕೊನೆಯ ಟಿ20 ವಿಶ್ವಕಪ್ ಆಗಿದೆ. ಈ ವೇಳೆ ಕೆಲ ತಪ್ಪು ನಿರ್ಧಾರಗಳನ್ನ ತೆಗೆದುಕೊಂಡಿರಬಹುದು. ವಿರಾಟ್ ಕೊಹ್ಲಿ ಟಾಸ್ ಸೋಲುತ್ತಿದ್ದಂತೆ, ಎಲ್ಲರೂ ತಲೆ ತಗ್ಗಿಸಿದ್ದಾರೆ. ಟಾಸ್ ಮಾತ್ರ ಸೋತಿದ್ದೀರಿ. ಇಡೀ ಪಂದ್ಯವನ್ನಲ್ಲ ಎಂಬುದು ಆಟಗಾರರಿಗೆ ತಿಳಿದಿಲ್ಲವೇ. ಈ ಎಲ್ಲಾ ಕಾರಣಗಳಿಂದಾಗಿಯೇ ನಾನು ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಹೇಳುತ್ತಿರುವುದು. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಜಗತ್ತಿನಾದ್ಯಂತ ಮನೆ ಮಾಡಿದ ದೀಪಾವಳಿ ಸಂಭ್ರಮ; ಇಲ್ಲಿದೆ ಫೋಟೋ ಝಲಕ್