ಇತ್ತೀಚೆಗೆ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಿಂದಲೇ ವೈಫಲ್ಯ ತೋರಿದ ಕಾರಣ ಟೀಂ ಇಂಡಿಯಾ ಹೊರಬಿದ್ದಿತ್ತು. ಈಗ ಭರ್ಜರಿ ಪ್ರದರ್ಶನ ತೋರಿದ ಭಾರತ ಕ್ರಿಕೆಟ್ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಗೆದ್ದಿದೆ. 3-0 ಅಂತರದಲ್ಲಿ ವೈಟ್ವಾಷ್ ಸಾಧನೆ ಮಾಡಿದೆ.
ಇನ್ನು, ಸರಣಿ ಗೆದ್ದ ಬಳಿಕ ಮಾತನಾಡಿದ ರೋಹಿತ್, ಈ ಪಂದ್ಯದಲ್ಲಿ ನಾವು ಉತ್ತಮ ಆರಂಭ ಪಡೆದುಕೊಳ್ಳುವುದು ಮುಖ್ಯವಾಗಿತ್ತು. ಹಾಗಾಗಿ ಮ್ಯಾಚ್ಗೆ ಮುನ್ನವೇ ಕೆಲವು ಪ್ಲಾನ್ ಮಾಡಿದ್ದೆವು. ಆದರೂ, ಅದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬರಲಿಲ್ಲ. ಕೊನೆಗೂ ಮಧ್ಯಮ ಕ್ರಮಾಂಕ ಸುಧಾರಿಸಿದೆ ಎಂದರು.
ಭಾರತದ ಗೆಲುವಿನಲ್ಲಿ ನಮ್ಮ ಸ್ಪಿನ್ನರ್ಗಳ ಕೊಡುಗೆ ಅಪಾರ. ವೆಂಕಟೇಶ್ ಅಯ್ಯರ್ ಕೂಡ ಬೌಲಿಂಗ್ ಮಾಡಿದ್ದು ಖುಷಿ ತಂದಿದೆ. 8, 9ನೇ ಕ್ರಮಾಂಕದವರೆಗೆ ಟೀಂ ಇಂಡಿಯಾ ಆಟಗಾರರು ಬ್ಯಾಟ್ ಮಾಡಬಲ್ಲರು. ಹರ್ಷಲ್ ಪಟೇಲ್ ಹರಿಯಾಣ ಪರ ಆರಂಭಿಕ ಬ್ಯಾಟ್ಸ್ಮನ್. ದೀಪಕ್ ಚಹಾರ್ ಬ್ಯಾಟಿಂಗ್ ವೈಭವವನ್ನು ಕಳೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಂಡಿದ್ದೇವೆ. ಚಹಾಲ್ ಕೂಡ ಉತ್ತಮ ಬ್ಯಾಟ್ಸ್ಮನ್ ಎಂದು ಹೇಳಿದರು.