ಟೀಂ ಇಂಡಿಯಾದಲ್ಲಿ ಬಿರುಕು? ವಿರಾಟ್​ ಕೊಹ್ಲಿ, ಕೆ.ಎಲ್​ ರಾಹುಲ್​ ನಡುವೆ ಮನಸ್ತಾಪ..!


ಟೀಂ​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನಲ್ಲಿ ಎಲ್ಲವೂ ಸರಿಯಿಲ್ವಾ? ಈ ಪ್ರಶ್ನೆ ಮತ್ತೆ ಹುಟ್ಟಿದೆ. ಕೊಹ್ಲಿ VS ಗಂಗೂಲಿ, ಕೊಹ್ಲಿ VS ರೋಹಿತ್​, ಕೊಹ್ಲಿ VS ಆಯ್ಕೆ ಸಮಿತಿ.. ನಡುವಿನ ತಿಕ್ಕಾಟ ಸದ್ಯಕ್ಕೆ ಅಂತ್ಯ ಕಂಡಿವೆ ಅನ್ನೋವಾಗ್ಲೆ ಕೊಹ್ಲಿ VS KL ರಾಹುಲ್​ ಎಂಬ ಹೊಸ ವಿವಾದ ಹುಟ್ಟಿದೆ. ಏನಿದು ಹೊಸ ಕಥೆ?

ಕಳೆದ 6 ತಿಂಗಳುಗಳು ಭಾರತೀಯ ಕ್ರಿಕೆಟ್​​​ ಸಾಕಷ್ಟು ಬದಲಾವಣೆ ಸಾಕ್ಷಿಯಾಗಿದೆ. ನಾಯಕತ್ವ ಬದಲಾವಣೆಯ ವಿವಾದವಂತೂ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅಂತಿಮವಾಗಿ ವಿರಾಟ್​​ ಕೊಹ್ಲಿ ಮೂರೂ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಬಳಿಕ ಸದ್ಯ ಎಲ್ಲಾ ವಿವಾದಗಳು ಮುಗಿದವು ಎನ್ನಲಾಗಿತ್ತು. ಆದ್ರೆ, ಕಾಂಟ್ರವರ್ಸಿಗಳಿಗೆ ಫುಲ್​ ಸ್ಟಾಫ್​ ಬಿದ್ದಿಲ್ಲ. ಎಲ್ಲಾ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಟೀಂ ಇಂಡಿಯಾ ಡ್ರೆಸ್ಸಿಂಗ್​ ರೂಮ್​ನ EGO CLASHಗಳಿಗೆ ಉದಾಹರಣೆ ಸಾಕಷ್ಟಿವೆ. ಅಂದಕಾಲದಿಂದ ಹಿಡಿದು ಇಂದಿನವರೆಗೂ ಒಂದಿಲ್ಲೊಂದು ಸುದ್ದಿ ಹೊರ ಬೀಳುತ್ತಲೆ ಇವೆ. ಧೋನಿ VS ಗಂಭೀರ್​, ಧೋನಿ VS ಸೆಹ್ವಾಗ್​, ವಿರಾಟ್​ VS ರೋಹಿತ್​..  ಈ ಈಗೋ ಕಲಹಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ವು. ಇದೀಗ ಈ ಪಟ್ಟಿಗೆ ಮತ್ತೊಂದು CLASH ಸೇರಿದ್ದು, ಅಚ್ಚರಿ ಮೂಡಿಸಿದೆ.

ವಿರಾಟ್​ ಕೊಹ್ಲಿ-ಕೆ.ಎಲ್.ರಾಹುಲ್​ ನಡುವೆ ವೈಮನಸ್ಸು?
ವಿರಾಟ್​​ ಕೊಹ್ಲಿ, ಕೆಎಲ್​ ರಾಹುಲ್​.. ಇಬ್ಬರೂ ಆತ್ಮೀಯರಾಗೇ ಗುರುತಿಸಿಕೊಂಡವರು. ಆನ್​ಫೀಲ್ಡ್​ ಹಾಗೂ ಆಫ್​ ದ ಫೀಲ್ಡ್​ ಎರಡರಲ್ಲೂ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಇವರ ನಡುವೆ ಈಗ ಎಲ್ಲವೂ ಸರಿಯಿಲ್ಲ. ಕೊಹ್ಲಿ ನಾಯಕತ್ವದಿಂದ ಇಳಿದ ಬಳಿಕ ರಾಹುಲ್​ ವರ್ತನೆಯೇ ಬದಲಾಗಿದ್ಯಂತೆ. ಇದು ಮಾಜಿ ನಾಯಕನ ಅಸಮಾಧಾನಕ್ಕೆ ಕಾರಣವಾಗಿದೆ. ಇಬ್ಬರ ನಡುವೆ ವೈಮನಸ್ಸು ಮೂಡಿದ್ದು ಈ ಕಾರಣದಿಂದ ಡ್ರೆಸ್ಸಿಂಗ್​ ರೂಮ್​ನ ವಾತಾವರಣವೇ ಬದಲಾಗಿದೆ ಅನ್ನೋ ಮೂಲಗಳ ಮಾಹಿತಿಯಾಗಿದೆ.

ಕ್ರಿಕೆಟ್​​ ಕರಿಯರ್​​ ಕಷ್ಟಕ್ಕೆ ಸಿಲುಕಿದಾಗ ರಾಹುಲ್ ಬೆನ್ನಿಗೆ ನಿಂತಿದ್ದು ವಿರಾಟ್​ ಕೊಹ್ಲಿ. ಇದರಲ್ಲಿ ಅನುಮಾನವೇ ಇಲ್ಲ. ಈಗ ಕೊಹ್ಲಿ ಬಳಿ ಅಧಿಕಾರವಿಲ್ಲ. ಆದ್ರೆ, ರಾಹುಲ್​ರನ್ನ ಅಧಿಕಾರ ಅರಸಿಕೊಂಡು ಬರ್ತಿದೆ. ಜೊತೆಗೆ ಅಧಿಕಾರವನ್ನ ಬಯಸ್ತಿರೋ ರಾಹುಲ್​, ಹೆಚ್ಚು ಬಿಸಿಸಿಐ ಹಾಗೂ ಮ್ಯಾನೇಜ್​ಮೆಂಟ್​​ನ ಫೇವರ್​​ ಆಗ್ತಿದ್ದಾರಂತೆ. ಅಧಿಕಾರ ಕೈತಪ್ಪಿದ ಬಳಿಕ ರಾಹುಲ್​ ವರ್ತನೆಯಲ್ಲಾಗಿರೋ ಈ ಬದಲಾವಣೆಯೇ ಕೊಹ್ಲಿಯ ಅಸಮಾಧಾನಕ್ಕೆ ಕಾರಣವಾಗಿದ್ಯಂತೆ.

2 ಬಣಗಳಾಗಿ ಒಡೆದಿದ್ಯಾ ಡ್ರೆಸ್ಸಿಂಗ್​ ರೂಮ್​.?
ರಾಹುಲ್​, ಕೊಹ್ಲಿ ನಡುವಿನ ತಿಕ್ಕಾಟದ ನಡುವೆಯೇ ಡ್ರೆಸ್ಸಿಂಗ್​ ರೂಮ್​ ಕೂಡ 2 ಭಾಗವಾಗಿ ವಿಂಗಡನೆಯಾಗಿದೆ ಎನ್ನಲಾಗ್ತಿದೆ. ಒಂದಿಷ್ಟು ಆಟಗಾರರು ವಿರಾಟ್​​ ಬಣದಲ್ಲಿದ್ರೆ, ರಾಹುಲ್​ ಬೆಂಬಲಕ್ಕೆ ಹಲವರು ಇದ್ದಾರೆ ಎಂಬ ಮಾಹಿತಿಯಿದೆ. ಇದು ಇಬ್ಬರ ಸ್ವ ಹಿತಾಸಕ್ತಿಗೆ ಭಾರತೀಯ ಕ್ರಿಕೆಟ್​​ ಬಲಿಯಾಗ್ತಿದ್ಯಾ ಎಂಬ ಪ್ರಶ್ನೆ ಮೂಡಿಸಿದೆ.

News First Live Kannada


Leave a Reply

Your email address will not be published. Required fields are marked *