2031ರ ಐಸಿಸಿ ಏಕದಿನ ವಿಶ್ವಕಪ್ಗೆ ಭಾರತವೇ ಆತಿಥ್ಯ ವಹಿಸಲಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, 2031 ಕ್ರಿಕೆಟ್ ವಿಶ್ವಕಪ್‌ನ ಆತಿಥ್ಯ ಹಕ್ಕುಗಳನ್ನು ಪಡೆಯಲು ಬಿಸಿಸಿಐ ಸಿದ್ಧವಾಗಿದೆ. ಈ ವರ್ಷದ ಆರಂಭದಲ್ಲಿ ಐಸಿಸಿ 2024 ರಿಂದ 2031ರವರೆಗಿನ ಐಸಿಸಿ ಟೂರ್ನಿಗಳ ವೇಳಾಪಟ್ಟಿಯನ್ನು ಪ್ರಕಟಿಸಿತ್ತು.
ಭಾರತವು 2023 ರಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ಗೆ ಅನ್ನು ಆಯೋಜಿಸಲು ಹಕ್ಕುಗಳನ್ನ ಪಡೆದುಕೊಂಡಿದೆ. ಆದರೆ, 2024ರ ಬಳಿಕ ಆರಂಭವಾಗುವ ಐಸಿಸಿ ವಿಶ್ವಕಪ್ಗಳಿಗೆ ಆತಿಥ್ಯದ ಹಕ್ಕುಗಳ ಕುರಿತು ಯಾವುದೇ ಅಪ್ಡೇಟ್ ಇಲ್ಲ. ಆದರೂ ಮೂಲಗಳ ಪ್ರಕಾರ, 2024ರಲ್ಲಿ ನಡೆಯುವ ICC T20 ವಿಶ್ವಕಪ್ ಅನ್ನ ವೆಸ್ಟ್ ಇಂಡೀಸ್ ಹೋಸ್ಟ್ ಮಾಡುವ ಸಾಧ್ಯತೆಯಿದೆ.
2031 ಏಕದಿನ ವಿಶ್ವಕಪ್ ಅನ್ನು ಬಿಸಿಸಿಐ ಹೋಸ್ಟ್ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗ್ತಿದೆ. ಈ ಬಾರಿ ಟಿ20 ವಿಶ್ವಕಪ್ಗೂ ಭಾರತವೇ ಆತಿಥ್ಯದ ಹಕ್ಕುಗಳನ್ನ ಪಡೆದುಕೊಂಡಿತ್ತು. ಆದರೆ ಕೊರೊನಾ ಕಾರಣದಿಂದ ಭಾರತದ ಆತಿಥ್ಯದಲ್ಲೇ ಯುಎಇನಲ್ಲಿ ನಡೆಸಲಾಯ್ತು. ಇನ್ನು ಕೊನೆಯದಾಗಿ 2016ರ ಟಿ20 ವಿಶ್ವಕಪ್ ಅನ್ನ ಭಾರತದಲ್ಲಿ ಆಯೋಜಿಸಲಾಗಿತ್ತು.