ಟೀಂ ಇಂಡಿಯಾದಿಂದ ಗೇಟ್​ಪಾಸ್; ಐಪಿಎಲ್​ನಲ್ಲೂ ನಿರಾಸೆ ಮೂಡಿಸಿದ ಆಟಗಾರನಿಗೆ ಈಗ ದಿಢೀರ್ ನಾಯಕತ್ವ! | Kuldeep Yadav named Captain of Uttar Pradesh for Ranji Trophy


ಟೀಂ ಇಂಡಿಯಾದಿಂದ ಗೇಟ್​ಪಾಸ್; ಐಪಿಎಲ್​ನಲ್ಲೂ ನಿರಾಸೆ ಮೂಡಿಸಿದ ಆಟಗಾರನಿಗೆ ಈಗ ದಿಢೀರ್ ನಾಯಕತ್ವ!

ಕುಲ್ದೀಪ್ ಯಾದವ್

ಒಂದು ಕಾಲದಲ್ಲಿ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನಿಂಗ್ ಬೌಲರ್ ಆಗಿದ್ದ ಕುಲದೀಪ್ ಯಾದವ್ ಅವರ ವೃತ್ತಿಜೀವನವು ಇದ್ದಕ್ಕಿದ್ದಂತೆ ಕುಸಿಯಿತು. ಕುಲದೀಪ್ ಯಾದವ್ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ತಂಡದಿಂದ ಹೊರಗುಳಿದರು. ನಂತರ ಅವರ ಫಾರ್ಮ್ ಕೂಡ ಕಳೆಗುಂದಿತು. ಕಳಪೆ ಫಾರ್ಮ್‌ನಿಂದಾಗಿ, ಅವರು ಅನೇಕ ಪಂದ್ಯಗಳಿಗೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ಪ್ಲೇಯಿಂಗ್ XI ನಲ್ಲಿ ಸೇರಿಸಲಾಗಿಲ್ಲ. ಆದರೆ, ಈಗ ಈ ಚೀನಾಮನ್ ಬೌಲರ್‌ಗಳಿಗೆ ನಾಯಕತ್ವ ಸಿಕ್ಕಿದೆ.

ಆಶ್ಚರ್ಯಪಡಬೇಡಿ, ವಾಸ್ತವವಾಗಿ ಕುಲದೀಪ್ ಯಾದವ್ ಅವರನ್ನು ಉತ್ತರ ಪ್ರದೇಶದ ರಣಜಿ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ಕುಲದೀಪ್ ಈ ವರ್ಷದ ಜುಲೈನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತ ತಂಡಕ್ಕೆ ಮರಳುವ ಅವಕಾಶವನ್ನು ಅವರು ಹೊಂದಿರುತ್ತಾರೆ.

ಯುಪಿ ರಣಜಿ ತಂಡ
ಕುಲದೀಪ್ ಯಾದವ್ (ನಾಯಕ), ಕರಣ್ ಶರ್ಮಾ (ಉಪನಾಯಕ), ಮಾಧವ್ ಕೌಶಿಕ್, ಅಲ್ಮಾಸ್ ಶೌಕತ್, ಸಮರ್ಥ್ ಸಿಂಗ್, ಹರ್ದೀಪ್ ಸಿಂಗ್, ರಿಂಕು ಸಿಂಗ್, ಪ್ರಿಯಾಂ ಗಾರ್ಗ್, ಅಕ್ಷದೀಪ್ ನಾಥ್, ಸಮೀರ್ ಚೌಧರಿ, ಕೃತಗ್ಯಾ ಸಿಂಗ್, ಅರುಣ್ ಜುಯಲ್, ಧ್ರುವ ಸಿಂಗ್ ಜುರೈಲ್ , ಶಿವಂ ಮಾವಿ, ಅಂಕಿತ್ ರಜಪೂತ್, ಯಶ್ ದಯಾಳ್, ಕುನಾಲ್ ಯಾದವ್, ಪ್ರಿನ್ಸ್ ಯಾದವ್, ರಿಷಬ್ ಬನ್ಸಾಲ್, ಸಾನು ಸೈನಿ, ಜಸ್ಮರ್, ಜೀಶನ್ ಅನ್ಸಾರಿ, ಶಿವಂ ಶರ್ಮಾ ಮತ್ತು ಪಾರ್ಥ ಮಿಶ್ರಾ.

ಕುಲದೀಪ್ ಯಾದವ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿದ್ದಾರೆ. ಕುಲದೀಪ್ ಯಾದವ್ ಅವರು ಗಾಯದ ಕಾರಣ IPL 2021 ರ ಮದ್ಯದ ಋತುವಿನಿಂದ ಹೊರಗುಳಿದಿದ್ದರು. ಕುಲದೀಪ್ ಯಾದವ್ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ, ಆದರೆ ಈಗ ಅವರು ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಕುಲದೀಪ್ ಯಾದವ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 33 ಪಂದ್ಯಗಳಲ್ಲಿ 123 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಯುಪಿ ರಣಜಿ ತಂಡಕ್ಕೆ ಮರಳಿರುವುದು ಖಂಡಿತವಾಗಿಯೂ ತಂಡದ ಪ್ರದರ್ಶನವನ್ನು ಸುಧಾರಿಸುತ್ತದೆ.

TV9 Kannada


Leave a Reply

Your email address will not be published. Required fields are marked *