ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್​ ರೈನಾ ತಂದೆ ನಿಧನ


ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ತಂದೆ ತ್ರಿಲೋಕಚಂದ್ರ ರೈನಾ ಇಂದು ನಿಧನರಾಗಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು ಬಾಂಬ್​ ತಯಾರಿಕೆಯಲ್ಲಿ ಪರಿಣಿತಿ ಪಡೆದಿದ್ದರು. ಇತ್ತೀಚಿಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ತ್ರಿಲೋಕಚಂದ್​ ಅವರು ಗಾಜಿಯಾಬಾದ್​ನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸದ್ಯ ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ಬ್ಯಾಟರ್​ ಎನಿಸಿಕೊಂಡಿರುವ ಸುರೇಶ್​ ರೈನಾ, ಬಹುಪಾಲು ಐಪಿಎಲ್​ ಆವೃತ್ತಿಯನ್ನು ಸಿಎಸ್​ಕೆ ಪರ ಆಡಿದ್ದಾರೆ. 2020ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ರೈನಾ ಇದೀಗ ಐಪಿಎಲ್​ನ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ಹರಾಜಿನಲ್ಲಿ ರೈನಾ ಅವರನ್ನು ಲಕ್ನೋ ಸೂಪರ್‌ಜೈಂಟ್ಸ್ ಖರೀದಿಸುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

News First Live Kannada


Leave a Reply

Your email address will not be published.