‘ಟೀಂ ಇಂಡಿಯಾ ಆಯ್ಕೆಯಲ್ಲೇ ಹಲವು ಸಮಸ್ಯಗಳಿವೆ’- ಹೀಗಂದ ಖ್ಯಾತ ಕ್ರಿಕೆಟರ್​​ ಯಾರು?


ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ಗೆಲ್ಲಲು ಟೀಮ್ ಇಂಡಿಯಾ ಸಜ್ಜಾಗುತ್ತಿದೆ. ಹೀಗಾಗಿಯೇ ರೋಹಿತ್‌ ಶರ್ಮಾ ನೇತೃತ್ವದ 16 ಆಟಗಾರರನ್ನು ಒಳಗೊಂಡ ತಂಡವನ್ನು ಬಿಸಿಸಿಐ ಅನೌನ್ಸ್​ ಮಾಡಿದೆ.

ಇನ್ನು, ಬಿಸಿಸಿಐ ಅನೌನ್ಸ್​​ ಮಾಡಿದ ತಂಡದ ಬಗ್ಗೆ ಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಅಸಮಾಧಾನ ಹೊರಹಾಕಿದ್ದಾರೆ. ನಮ್ಮಲ್ಲಿ ಕೆಲವು ಸಮಸ್ಯೆಗಳಿವೆ. ಈ ಬಗ್ಗೆ ನಾನೀಗ ಮಾತಾಡುತ್ತಿದ್ದೇನೆ ಎಂದರು.

ನೀವು ಭವಿಷ್ಯದ ಕಡೆಗೆ ಗಮನ ನೀಡುತ್ತಿದ್ದೀರಿ. ಟಿ20 ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡುತ್ತಿರುವ ರೀತಿ ಸರಿಯಿಲ್ಲ. ಓಪನರ್‌ ಆಗಿ ಯಶಸ್ಸು ಕಂಡ ಆಟಗಾರನನ್ನು ಆಯ್ಕೆ ಮಾಡಿ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಹೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್​ ಸರಣಿ; ಮೂವರು ಕನ್ನಡಿಗರಿಗೆ ಸ್ಥಾನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ವರ್ಕೌಟ್​​ ಆಗೋದಿಲ್ಲ. ಓಪನರ್‌ ಬ್ಯಾಟ್ಸ್‌ಮನ್‌ಗೆ 5ನೇ ಕ್ರಮಾಂಕದಲ್ಲಿ ಆಡಿ ಯಶಸ್ಸು ಗಳಿಸುವುದು ಬಹಳ ಕಷ್ಟ. ನೀವು ಆಯ್ಕೆ ಮಾಡಿದ ತಂಡದಲ್ಲಿ 5 ಓಪನರ್ಸ್​ ಇದ್ದಾರೆ. ಇರುವ ಮೂರು ಪಂದ್ಯಗಳಲ್ಲಿ ಎಷ್ಟು ಮಂದಿಗೆ ಅವಕಾಶ ಸಿಗುತ್ತದೆ ಎಂದು ಕಿಡಿಕಾರಿದ್ದಾರೆ.

The post ‘ಟೀಂ ಇಂಡಿಯಾ ಆಯ್ಕೆಯಲ್ಲೇ ಹಲವು ಸಮಸ್ಯಗಳಿವೆ’- ಹೀಗಂದ ಖ್ಯಾತ ಕ್ರಿಕೆಟರ್​​ ಯಾರು? appeared first on News First Kannada.

News First Live Kannada


Leave a Reply

Your email address will not be published.