ಟೀಂ ಇಂಡಿಯಾ ಎರಡು ಗುಂಪುಗಳಾಗಿವೆ ಎಂದ ಪಾಕ್​​ ಆಟಗಾರ.. ರಾಹುಲ್​​​, ಕೊಹ್ಲಿ ಬಗ್ಗೆ ಹೇಳಿದ್ದೇನು?


ಸೌತ್​​ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಮ್​ ಇಂಡಿಯಾ ಕಳಪೆ ಪ್ರದರ್ಶನ ನೀಡುತ್ತಿದೆ. ಹೀಗಾಗಿ ಟೀಂ ಇಂಡಿಯಾ ಆಡಿದ 2 ಪಂದ್ಯಗಳಲ್ಲೂ ಸೋಲುಂಡಿದೆ. ಮೊದಲ ಏಕದಿನದಲ್ಲಿ ಟೀಮ್​ ಇಂಡಿಯಾ 31 ರನ್ ಅಂತರದ ಸೋಲು ಅನುಭವಿಸಿತ್ತು. ಇನ್ನು 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್​​ಗಳ ಸೋಲುಂಡಿದೆ.

ಈ ಸಂಬಂಧ ಮಾತಾಡಿದ ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ, ಟೀಂ​ ಇಂಡಿಯಾದ ಡ್ರೆಸ್ಸಿಂಗ್ ರೂಮ್​ ಎರಡು ಗುಂಪುಗಳಾಗಿ ವಿಂಗಡನೆಯಾಗಿದೆ ಎಂದರು. ಕೆ.ಎಲ್ ರಾಹುಲ್ ಹಾಗೂ ಕೊಹ್ಲಿ ಪ್ರತ್ಯೇಕವಾಗಿ ಕುಳಿತಿದ್ದರು. ಪಂದ್ಯಗಳಲ್ಲಿ ಕೊಹ್ಲಿ ನಾಯಕರಾಗಿದ್ದಾಗ ಇದ್ದ ಮೂಡ್‌ನಲ್ಲಿ ಇರಲಿಲ್ಲ. ಆದರೆ ಅವರೊಬ್ಬ ಟೀಮ್ ಪ್ಲೇಯರ್ ಆಗಿದ್ದು, ಮತ್ತಷ್ಟು ಬಲಶಾಲಿಯಾಗಿ ಹಿಂತಿರುಗುವ ನಂಬಿಕೆಯಿದೆ ಎಂದು ಹೇಳಿದ್ದಾರೆ.

News First Live Kannada


Leave a Reply

Your email address will not be published. Required fields are marked *