ಶತಕಗಳ ಸರದಾರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ. ಆದರೀಗ, ಕೊಹ್ಲಿ ಶತಕದವಿಲ್ಲದೇ 2 ವರ್ಷ ಪೂರೈಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಕಳೆದ 56 ಇನಿಂಗ್ಸ್ಗಳಿಂದ ಒಂದೇ ಒಂದು ಶತಕ ಸಿಡಿಸಿಲ್ಲ.
ಹೌದು, 2019 ನವೆಂಬರ್ 23ರಂದು ಬಾಂಗ್ಲಾದೇಶ ವಿರುದ್ಧದ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಬಾರಿಸಿದ್ದು ಕೊನೇ ಶತಕ. ಬಳಿಕ ವಿಂಡೀಸ್ ವಿರುದ್ಧ ಟಿ20 ಪಂದ್ಯದಲ್ಲಿ ಅಜೇಯ 94 ರನ್ ಗಳಿಸಿರುವುದೇ ಗರಿಷ್ಠ ಗಳಿಕೆ.
ಕೊಹ್ಲಿ ಇದುವರೆಗೆ 70 ಶತಕ ಸಿಡಿಸಿದ್ದು, ಈ ಪೈಕಿ 27 ಟೆಸ್ಟ್ ಮತ್ತು 43 ಏಕದಿನ ಪಂದ್ಯಗಳಲ್ಲಿ ದಾಖಲಾಗಿವೆ. ಆದರೆ ಕಳೆದ 2 ವರ್ಷಗಳಲ್ಲಿ ಶತಕದ ಬರ ಎದುರಿಸುತ್ತಿರುವುದು ಅಭಿಮಾನಿಗಳ ಬಾರಿ ನಿರಾಸೆಗೆ ಕಾರಣವಾಗಿದೆ.
ಸದ್ಯ ಕ್ರಿಕೆಟ್ನಿಂದ ಬಿಡುವು ಪಡೆದಿರುವ ಕೊಹ್ಲಿ, ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಮತ್ತು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.