ಟೀಂ ಇಂಡಿಯಾ ಖ್ಯಾತ ಆಟಗಾರನ ಬ್ಯಾಟಿಂಗ್​​ ಬಗ್ಗೆ ಕಳವಳ ವ್ಯಕ್ತಪಡಿಸಿದ VVS​​​ ಲಕ್ಷ್ಮಣ್​​


ಮುಂಬೈ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್​​ ಎರಡನೇ ಟೆಸ್ಟ್​ ಮ್ಯಾಚ್​ ನಡೆಯುತ್ತಿದೆ. ಎರಡನೇ ಟೆಸ್ಟ್​ ಪಂದ್ಯದ ಎರಡೂ ಇನ್ನಿಂಗ್ಸ್​ನಲ್ಲೂ ಟೀಂ ಇಂಡಿಯಾ ಅನುಭವಿ ಬ್ಯಾಟ್ಸ್​​ಮನ್ ಚೇತೇಶ್ವರ್​ ಪೂಜಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ, ಕಳೆದ 42 ಟೆಸ್ಟ್​ಗಳಲ್ಲಿ ಒಂದೇ ಒಂದು ಶತಕ ಬಾರಿಸಲು ವಿಫಲವಾದ ಚೇತೇಶ್ವರ್​ ಪೂಜಾರ ಬಗ್ಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕಳವಳ ವ್ಯಕ್ತಪಡಿಸಿದ್ದಾರೆ.

ನನಗೆ ನಿಜವಾಗಿಯೂ ಪೂಜಾರ ಪರ್ಫಾಮೆನ್ಸ್​ ಕಳವಳವುಂಟು ಮಾಡುತ್ತದೆ. ನೀವು ಕ್ರಮಾಂಕದಲ್ಲಿ ಬ್ಯಾಟಿಂಗ್​​ ಮಾಡುವುದರಿಂದ ಐದು ಮತ್ತು ಆರನೇ ಕ್ರಮಾಂಕದಲ್ಲಿ ಕ್ರೀಸ್​​ಗೆ ಬರೋರಿಗಿಂತಲೂ ಶತಕ ಗಳಿಸಲು ಹೆಚ್ಚು ಅವಕಾಶ ಹೊಂದಿರುತ್ತೀರಿ ಎಂದಿದ್ದಾರೆ. ಅಲ್ಲದೇ ಶ್ರೇಯಸ್ ಐಯ್ಯರ್, ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ ಉತ್ತಮ ಆಟ ಆಡುತ್ತಿರುವಾಗ ನೀವ್ಯಾಕೆ ಕಳಪೆ ಪ್ರದರ್ಶನ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *