ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಬಳಿಕ ಮುಂದಿನ 10 ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ ರಿಷಭ್ ಪಂತ್ ಎಂದು ಇಂಗ್ಲೆಂಡ್ ಸ್ಪಿನ್ ದಿಗ್ಗಜ ಗ್ರೇಮ್ ಸ್ವಾನ್ ಹೇಳಿದ್ದಾರೆ.
ಈ ಸಂಬಂಧ ಮಾತಾಡಿದ ಗ್ರೇಮ್ ಸ್ವಾನ್, ರೋಹಿತ್ ಪೂರ್ಣಾವಧಿ ನಾಯಕರಾಗುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಖಚಿತತೆ ಇಲ್ಲ. ಆದರೆ, ಮುಂದಿನ 10 ವರ್ಷಗಳ ಕಾಲ ಟೀಮ್ ಇಂಡಿಯಾವನ್ನ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ಆಟಗಾರ ರಿಷಭ್ ಪಂತ್ ಎನ್ನಬಹುದು ಎಂದಿದ್ದಾರೆ.
ಧೋನಿ ಮತ್ತು ವಿರಾಟ್ ಕೊಹ್ಲಿಗೆ ಇರುವ ಸಾಮರ್ಥ್ಯ ಪಂತ್ಗೆ ಇದೆ. ಧೋನಿಯ ಚಾಕಚಕ್ಯತೆ, ವಿರಾಟ್ ಕ್ರೀಡಾ ಸ್ಪೂರ್ತಿ ಪಂತ್ರಲ್ಲಿ ಅಡಗಿವೆ. ಹೀಗಾಗಿ, ಪಂತ್ರನ್ನು ಆಯ್ಕೆ ಮಾಡಿದ್ದರೆ ಮುಂದಿನ 10 ವರ್ಷಗಳ ಕಾಲ ಟೀಂ ಇಂಡಿಯಾಗೆ ತಲೆ ಬಿಸಿ ಇರುವುದಿಲ್ಲ. ರೋಹಿತ್ ಅದ್ಭುತ ನಾಯಕ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇಂದು ಟಿ20 ವಿಶ್ವಕಪ್ ಸೆಮಿಫೈನಲ್-2: ಪಾಕ್ ವಿರುದ್ಧ ಗೆಲ್ಲುತ್ತಾ ಆಸ್ಟ್ರೇಲಿಯಾ ಟೀಂ?