ಭಾರತೀಯ ಮಹಿಳಾ ತಂಡದ ಹೆಡ್ ಕೋಚ್ ಸ್ಥಾನಕ್ಕೆ ಟೀಂ ಇಂಡಿಯಾ ಮಾಜಿ ಆಟಗಾರ ರಮೇಶ್ ಪವಾರ್ ಅವರನ್ನು ಮತ್ತೊಮ್ಮೆ ಬಿಸಿಸಿಐ ಆಯ್ಕೆ ಮಾಡಿದೆ. ಹೆಡ್ ಕೋಚ್ ಸ್ಥಾನಕ್ಕೆ ಸಲ್ಲಿಕೆಯಾಗಿದ್ದ 35 ಅರ್ಜಿಗಳಲ್ಲಿ 4 ಮಹಿಳಾ ಹಾಗೂ 4 ಪುರುಷ ಅಭ್ಯರ್ಥಿಗಳನ್ನು ಬಿಸಿಸಿಐ ಸಂದರ್ಶನ ನಡೆಸಿತ್ತು.

42 ವರ್ಷದ ರಮೇಶ್ ಪವಾರ್ ಅವರು ಮತ್ತೊಮ್ಮೆ ಹೆಡ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಈ ಹಿಂದೆ 2018ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಆಡಿಸದಿದ್ದ ಕಾರಣಕ್ಕೆ ಪವಾರ್ ವಿವಾದಕ್ಕೆ ಒಳಗಾಗಿದ್ದರು. ಈ ಕಾರಣದಿಂದಲೇ ಕೋಚ್ ಸ್ಥಾನದಿಂದ ಅವರನ್ನು ತೆಗೆಯಲಾಗಿತ್ತು. ಸದ್ಯ ಅವರು ಮತ್ತೆ ಕೋಚ್ ಸ್ಥಾನಕ್ಕೆ ಆಯ್ಕೆಯಾಗಿರುವುದು ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದೆ.

The post ಟೀಂ ಇಂಡಿಯಾ ಮಹಿಳಾ ತಂಡದ ಹೆಡ್‍ಕೋಚ್ ಆಗಿ ಮತ್ತೆ ರಮೇಶ್ ಪವಾರ್ ನೇಮಕ appeared first on News First Kannada.

Source: newsfirstlive.com

Source link