ಟೀಮ್ ಇಂಡಿಯಾ ಮುಂದಿನ ಕ್ಯಾಪ್ಟನ್ ಯಾರೆಂಬುದನ್ನ ವಿರಾಟ್ ಕೊಹ್ಲಿ ಸುಳಿವು ನೀಡಿದ್ದಾರೆ. ಟಿ-20 ವಿಶ್ವಕಪ್ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಮಾತನಾಡಿದ ಕೊಹ್ಲಿ, ಈ ಬಗ್ಗೆ ಸುಳಿವು ನೀಡಿದ್ದಾರೆ.
ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ನಾಯಕನಾಗಿ ನಿನ್ನೆಯೇ ಕೊನೆ ಪಂದ್ಯವನ್ನಾಡಿದ್ದು, ಮುಂದಿನ ನಾಯಕ ಯಾರು ಚರ್ಚೆ ನಡೀತಿದೆ. ಇದರ ನಡುವೆ ವಿರಾಟ್ ನೀಡಿದ ಹೇಳಿಕೆ, ರೋಹಿತ್ ಶರ್ಮಾನೇ ಮುಂದಿನ ನಾಯಕ ಅನ್ನೋದನ್ನ ಸೂಚಿಸಿದೆ. ಇದಕ್ಕೂ ಮೊದಲು ರೋಹಿತ್ ಶರ್ಮಾ ವೈಟ್ಬಾಲ್ ಕ್ರಿಕೆಟ್ನ ನಾಯಕರಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ಮಾಹಿತಿ ಬಂದಿತ್ತು.
ಇದೀಗ ಕೊಹ್ಲಿಯಿಂದಲೂ ಇದೇ ಸುಳಿವು ಹೊರ ಬಿದ್ದಿದೆ. ಸದ್ಯ ತಂಡವನ್ನು ಮುನ್ನಡೆಸುವ ಅವಧಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ ಇನ್ನಷ್ಟು ಮುಂದಿನ ಹಂತಕ್ಕೆ ಕೊಂಡೊಯ್ಯಲು ಬದಲಾವಣೆ ಅಗತ್ಯ. ಭಾರತ ತಂಡದಲ್ಲಿ ಉತ್ತಮ ಗೌರವ ಸಿಕ್ಕಿದೆ. ಇಷ್ಟು ದಿನಗಳ ಕಾಲ ಈ ಅವಕಾಶ ಸಿಕ್ಕ ನಾನು, ತಂಡಕ್ಕಾಗಿ ಅತ್ಯುತ್ತಮ ಪ್ರಯತ್ನವನ್ನೇ ಮಾಡಿದ್ದೇನೆ. ಇದೀಗ ಖುಷಿಯಿಂದಲೇ ಆ ಜವಾಬ್ದಾರಿಯನ್ನ ತೊರೆಯಲಿದ್ದೇನೆ. ಮುಂದೆ ರೋಹಿತ್ ಶರ್ಮಾ ಕೈಯಲ್ಲಿ ಭಾರತೀಯ ಕ್ರಿಕೆಟ್ ಉತ್ತಮವಾಗಿರಲಿದೆ ಎಂದು ಹೇಳಿದ್ದಾರೆ. ಈ ಒಂದು ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.