ಟೀಂ ಇಂಡಿಯಾ ವಿರುದ್ಧ ಗೆದ್ದರೆ ಪಾಕ್​​ಗೆ ಬ್ಲ್ಯಾಂಕ್ ಚೆಕ್ -ಪಿಸಿಬಿ ಅಧ್ಯಕ್ಷನ ಬಹಿರಂಗ ಹೇಳಿಕೆ

ಇಂಡಿಯನ್​​ ಪ್ರೀಮಿಯರ್​ ಲೀಗ್​ ಅಂತಿಮ ಘಟ್ಟ ತಲುಪಿದೆ. ಕ್ವಾಲಿಫೈಯರ್​​, ಎಲಿಮೆನೇಟರ್​​ ಸೆಣೆಸಾಟಗಳಿಗೆ ವೇದಿಕೆ ಸಿದ್ಧವಾಗಿರುವಾಗ್ಲೇ, ವಿಶ್ವಕಪ್​ನ ಫೀವರ್​​ ಕೂಡ ಹೆಚ್ಚಾಗ್ತಿದೆ. ಅದರಲ್ಲೂ ಭಾರತ-ಪಾಕಿಸ್ತಾನ​ ನಡುವಿನ ಪಂದ್ಯದತ್ತ ಇಡೀ ವಿಶ್ವ ಕ್ರಿಕೆಟ್​​ ಲೋಕದ ಚಿತ್ತ ನೆಟ್ಟಿದೆ. ಅದರಲ್ಲೂ ಪಿಸಿಬಿ ಅಧ್ಯಕ್ಷ ರಮಿಜ್​ ರಾಜಾ ನೀಡಿರೋ ಹೇಳಿಕೆ, ಪಂದ್ಯ ಮೇಲಿನ ಕುತೂಹಲವನ್ನ ಡಬಲ್​ ಮಾಡಿದೆ.

16 ಜೂನ್​ 2019.. ಅಂದು ಓಲ್ಡ್​​ ಟ್ರಾಪರ್ಡ್​​ ಅಂಗಳದಲ್ಲಿ ನಡೆದ ಇಂಡೋ-ಪಾಕ್ ವಿಶ್ವಕಪ್​ ಲೀಗ್​ ಫೈಟ್​​ನಲ್ಲಿ, ಭಾರತ ಬರೋಬ್ಬರಿ 89 ರನ್​ಗಳ ಅಂತರದಲ್ಲಿ ಗೆದ್ದು ಬೀಗಿತ್ತು. ಅದಾಗಿ ಸುಮಾರು 2 ವರ್ಷಗಳ ಬಳಿಕ ಭಾರತ-ಪಾಕಿಸ್ತಾನ ಮುಖಾಮುಖಿಗೆ, ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್​​ 24ರಂದು ನಡೆಯೋ ಟಿ20 ವಿಶ್ವಕಪ್​ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲೇ ಭಾರತ, ಪಾಕಿಸ್ತಾನ ತಂಡವನ್ನ ಎದುರಿಸಲಿದೆ. ಪಂದ್ಯಕ್ಕೆ 2 ವಾರಗಳ ಅಂತರವಿದ್ರೂ, ಮ್ಯಾಚ್​​ನ ಕಾವು​ ಈಗಾಗಲೇ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ದುಬೈ ಅಂಗಳದಲ್ಲಿ ನಡೆಯೋ ಬದ್ಧವೈರಿಗಳ ಕಾದಾಟಕ್ಕೆ ಫ್ಯಾನ್ಸ್​ ಎಷ್ಟು ಕಾತರಾಗಿದ್ದಾರೆ ಅನ್ನೋದಕ್ಕೆ ಕೆಲವೇ ಘಂಟೆಗಳಲ್ಲಿ ಪಂದ್ಯದ ಟಿಕೆಟ್ಸ್​​ ಸೇಲ್​​ ಆಗಿದ್ದೇ ಸಾಕ್ಷಿಯಾಗಿದೆ. ವಿಶ್ವ ಕ್ರಿಕೆಟ್​​ನಲ್ಲಿ ಶ್ರೇಷ್ಠ ಆಟಗಾರ ಹಾಗೂ ನಾಯಕರಾಗಿ ಗುರುತಿಸಿಕೊಂಡಿರುವ ವಿರಾಟ್​​ ಕೊಹ್ಲಿ-ಬಾಬರ್​ ಅಜಮ್​ ಮುಖಾಮುಖಿಯೂ, ಕುತೂಹಲವನ್ನ ಹೆಚ್ಚಿಸಿದೆ. ಈ ಪಂದ್ಯವನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಪಾಕಿಸ್ತಾನ ಪಂದ್ಯಕ್ಕೆ ರಣತಂತ್ರಗಳನ್ನ ಈಗಿನಿಂದಲೇ ಹೂಡ್ತಿದೆ. ಅದರ ಜೊತೆಗೆ ಒಂದು ಬಂಪರ್ ಆಫರ್ ಸಿಕ್ಕಿರೋದು ಕೂಡ ಪಾಕಿಸ್ತಾನದ ಗೆಲುವಿನ ತುಡಿತವನ್ನ ಹೆಚ್ಚಿಸಿದೆ.

‘ಬ್ಲ್ಯಾಂಕ್​ ಚೆಕ್ ಸಿದ್ಧವಿದೆ​ ’

‘ನಾನು ಪಾಕಿಸ್ತಾನ ಕ್ರಿಕೆಟ್​​​ ಅನ್ನ ಬಲ ಪಡಿಸುವುದಕ್ಕೆ ಆದ್ಯತೆ ನೀಡುತ್ತೇನೆ. ವಿಶ್ವಕಪ್​ನಲ್ಲಿ ಭಾರತವನ್ನ ಪಾಕಿಸ್ತಾನ ಮಣಿಸಿದ್ರೆ ಪಿಸಿಬಿಗೆ ಬ್ಲ್ಯಾಂಕ್​ ಚೆಕ್​ ಸಿಗಲಿದೆ. ಒಬ್ಬರು ಬಲಿಷ್ಠ ಹೂಡಿಕೆದಾರರು ಈಗಾಗಲೇ ನನಗೆ ಹೇಳಿದ್ದಾರೆ’

ರಮೀಜ್​ ರಾಜಾ, ಪಿಸಿಬಿ ಅಧ್ಯಕ್ಷ

ಪಾಕಿಸ್ತಾನಕ್ಕೆ ಸಿಕ್ಕಿರೋ ಬಂಪರ್ ಆಫರ್​ ಏನು ಅನ್ನೋದನ್ನ. ಭಾರತವನ್ನ ಸೋಲಿಸೋಕೆ ಇಡೀ ಪಾಕಿಸ್ತಾನ ಹೇಗೆ ಕಾದು ಕುಳಿತಿದೆ ಅನ್ನೋದಕ್ಕೆ, ಇದಕ್ಕಿಂತ ಸಾಕ್ಷಿ ಬೇಕಿಲ್ಲ. ಒಂದೆಡೆ ಬದ್ಧವೈರಿಯ ವಿರುದ್ಧ ಜಯ ಸಾಧಿಸಬೇಕು ಅನ್ನೋದ್ರಾದ್ರೆ, ಈ ಬ್ಲ್ಯಾಂಕ್​ಚೆಕ್​ ಆಫರ್​ ಪಾಕಿಸ್ತಾನಕ್ಕೆ ಗೆಲುವಿನ ಒತ್ತಡವನ್ನ ಹೆಚ್ಚಿಸಿದೆ.

ಪಾಕಿಸ್ತಾನಕ್ಕೆ ಬಂಪರ್​ ಆಫರ್​ ಯಾಕೆ..?
ಒಂದು ಪಂದ್ಯದ ಗೆಲುವಿಗೆ ಬ್ಲ್ಯಾಂಕ್​ ಚೆಕ್ಕಾ..? ಅನ್ನೋ ಆಶ್ಚರ್ಯ ಭರಿತ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಆದ್ರೆ, ಇಂಥಾ ಬಂಪರ್​ ಆಫರ್​​ ನೀಡೋಕೆ ಟ್ರ್ಯಾಕ್​​ ರೆಕಾರ್ಡ್​​ ಕೂಡ ಕಾರಣವಾಗಿದೆ. ಈವರೆಗೆ ಐಸಿಸಿ ಏಕದಿನ ಮುಖಾಮುಖಿಯಲ್ಲಿ ಭಾರತದ ಎದುರು ಗೆಲುವನ್ನೇ ಕಾಣದ ಪಾಕ್​, ಟಿ20 ವಿಶ್ವಕಪ್​ ಇತಿಹಾಸದಲ್ಲಿ ಗೆದ್ದಿರೋದು ಒಂದು ಪಂದ್ಯ ಮಾತ್ರ. ಪಾಕಿಸ್ತಾನದ ಈ ಕಳಪೆ ರೆಕಾರ್ಡ್​ ಹೊಂದಿರೋದರಿಂದಲೇ ಈಗ ಬ್ಲ್ಯಾಂಕ್​ ಚೆಕ್​ ಆಫರ್​ ಬಂದಿರೋದು.

ಭಾರತವನ್ನ ಮಣಿಸೋದು ಪಾಕ್​ಗೆ ಸುಲಭನಾ?
ವಿಶ್ವಕಪ್​ನಲ್ಲಿ ಆಡೋ ಟೀಮ್​ ಇಂಡಿಯಾ ಎಷ್ಟು ಬಲಿಷ್ಠ ಅನ್ನೋದು ಎಲ್ಲರಿಗೂ ತಿಳಿದಿರೋ ವಿಚಾರವೇ ಆಗಿದೆ. ವಿಶ್ವ ಶ್ರೇಷ್ಠ ಆಟಗಾರರಾದ ಕೊಹ್ಲಿ, ರೋಹಿತ್​, ಬೂಮ್ರಾ, ಶಮಿ ಒಳಗೊಂಡಂತೆ ಯುವ ಹಾಗೂ ಅಗ್ರೆಸ್ಸೀವ್​ ಪ್ಲೇಯರ್​ಗಳ ದಂಡು, ಟೀಮ್​ ಇಂಡಿಯಾದಲ್ಲಿದೆ. ಅದರ ಜೊತೆಗೆ ಟಿ20 ವಿಶ್ವಕಪ್​ಗೂ ಮುನ್ನ ಯುಇಎ ನಾಡಲ್ಲಿ ಐಪಿಎಲ್​ ಆಡ್ತಿರೋದು ಕೂಡ ಭಾರತಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಚಾಣಾಕ್ಷ ಧೋನಿ ಮೆಂಟರ್​ ಆಗಿರೋದು ಭಾರತದ ಬಲ ಹೆಚ್ಚಿಸಿದೆ. ಹಾಗೆಂದ ಮಾತ್ರ ಪಾಕಿಸ್ತಾನ ಭಾರತಕ್ಕೆ ಸುಲಭದ ತುತ್ತಾ ಎಂದು ಹೇಳೋಕಾಗಲ್ಲ. ಟಫ್​ ಫೈಟ್​​ ಅನ್ನಂತೂ ನಿರೀಕ್ಷೆ ಮಾಡಬಹುದಾಗಿದೆ.

News First Live Kannada

Leave a comment

Your email address will not be published. Required fields are marked *