ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿ ಶುರುವಾಗಿದೆ. ಈಗಾಗಲೇ ಮೊದಲ ಪಂದ್ಯ ಮುಗಿದಿದ್ದು, ಇಂದು 2ನೇ ಮತ್ತು ನಾಳೆ ಕೊನೆ ಪಂದ್ಯ ನಡೆಯಲಿದೆ. ಹೀಗಿರುವಾಗಲೇ ಭಾರತದ ವಿರುದ್ಧದ ಟೆಸ್ಟ್ ಸರಣಿಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಲಿಷ್ಠ ತಂಡ ಪ್ರಕಟಿಸಿದೆ.
ಮಾರ್ಚ್ 5ನೇ ತಾರೀಕಿನಿಂದ ಮೊಹಾಲಿಯಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಎರಡನೇ ಪಂದ್ಯ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಪಂದ್ಯವೂ ಮಾರ್ಚ್ 12ರಿಂದ ಆರಂಭವಾಗಲಿದ್ದು, ಟೀಂ ಇಂಡಿಯಾ ಗೆಲುವಿನ ನಾಗಲೋಟ ಮುಂದುವರಿಸಲು ಪ್ಲಾನ್ ಮಾಡಿಕೊಂಡಿದೆ.
ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ದಿಮುತ್ ಕರುಣರತ್ನೆ ಮುನ್ನಡೆಸಲಿದ್ದಾರೆ. ಧನಂಜಯ ಡಿಸಿಲ್ವ ಉಪ ನಾಯಕ ಅಗಿದ್ದಾರೆ.
ಟೆಸ್ಟ್ ತಂಡ ಹೀಗಿದೆ..
- ದಿಮುತ್ ಕರುಣರತ್ನೆ (ನಾಯಕ)
- ಪಾತುಂ ನಿಸ್ಸಾಂಕ
- ಲಹಿರು ತಿರಿಮನ್ನೆ
- ಧನಂಜಯ ಡಿ ಸಿಲ್ವಾ (ಉಪನಾಯಕ)
- ಕುಸಾಲ್ ಮೆಂಡಿಸ್
- ಏಂಜೆಲೊ ಮ್ಯಾಥ್ಯೂಸ್
- ದಿನೇಶ್ ಚಾಂಡಿಮಾಲ್
- ಚರಿತ್ ಅಸಲಂಕಾ
- ನಿರೋಶನ್ ಡಿಕ್ವೆಲ್ಲಾ
- ಚಾಮಿಕಾ ಕರುಣಾರತ್ನೆ
- ಲಹಿರು ಕುಮಾರ
- ಸುರಂಗ ಲಕ್ಮಲ್
- ದುಷ್ಮಂತ ಚಮೀರ
- ವಿಶ್ವ ಫೆರ್ನಾಂಡೋ
- ಜೆಫ್ರಿ ವಾಂಡರ್ಸೆ
- ಪ್ರವೀಣ್ ಜಯವಿಕ್ರಮ
- ಲಸಿತ್ ಎಂಬುಲ್ದೇನಿಯ