ಟೀಂ ಇಂಡಿಯಾ ವೇಗಿ ಭುವನೇಶ್ವರ್​ ಕುಮಾರ್ ಅವರ ತಂದೆ ಕಿರಣ್​ ಪಾಲ್​​ ಸಿಂಗ್​​ ಇಂದು ಸಾವನ್ನಪ್ಪಿದ್ದಾರೆ. ಬಹುಕಾಲದಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕಿರಣ್​ ಪಾಲ್​ ಸಿಂಗ್​ ಅವರು ನೋಯ್ಡಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗೆ ಕೊನೆಯುಸಿರೆಳೆದಿದ್ದಾರೆ.

63 ವರ್ಷದ ಕಿರಣ್​ ಪಾಲ್​ ಸಿಂಗ್​​ ಅವರು ಉತ್ತರ ಪ್ರದೇಶದ ಪೊಲೀಸ್​ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತರಾಗಿದ್ದರು. ಸದ್ಯ ಮನೆಯಲ್ಲೇ ಕುಟುಂಬಸ್ಥರೊಂದಿಗೆ ಇದ್ದ ಭುವನೇಶ್ವರ್​, ತಂದೆಗೆ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾ ವಹಿಸಿದ್ದರು. ಇತ್ತೀಚೆಗಷ್ಟೇ ನೋಯ್ಡಾದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಿಮೋಥೆರಪಿ ಚಿಕಿತ್ಸೆಯನ್ನು ಪಡೆದು ಮನೆಗೆ ವಾಪಸ್​ ಆಗಿದ್ದರು. ಆದರೆ ಕೆಲ ವಾರಗಳಿಂದ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸದ್ಯ ಭುವನೇಶ್ವರ್​ ಅವರು ಟೆಸ್ಟ್​ ಚಾಂಪಿಯನ್​ ಶಿಫ್​ ಫೈನಲ್​​ ಗೆ ಆಯ್ಕೆಯಾಗಿರುವ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, ಶ್ರೀಲಂಕಾ ವಿರುದ್ಧ ನಡೆಯಲಿರುವ ಸಿಮೀತ ಓವರ್​ಗಳ ಟೂರ್ನಿಗೆ ಕಮ್​​​ಬ್ಯಾಕ್​ ಮಾಡುವ ನಿರೀಕ್ಷೆಯಲ್ಲಿದ್ದರು.

The post ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್​​​ ತಂದೆ ನಿಧನ appeared first on News First Kannada.

Source: newsfirstlive.com

Source link