ಟಿ-20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ವೈಫಲ್ಯ ಅನುಭವಿಸಿದ್ದಾಗಿದೆ. ಈ ವೈಫಲ್ಯದ ಬಳಿಕ ಎಚ್ಚೆತ್ತಿರುವ ಬಿಗ್ಬಾಸ್ಗಳು, ಟೀಮ್ ಇಂಡಿಯಾದಲ್ಲಿ ಹೊಸ ನೀತಿಯೊಂದನ್ನ ಇಂಪ್ಲಿಮೆಂಟ್ ಮಾಡ್ತಿದೆ. ಈ ನೀತಿಯೊಂದಿಗೆ ಎರಡು ವಿಶ್ವಕಪ್ಗಳನ್ನ ಟಾರ್ಗೆಟ್ ಮಾಡ್ತಿದೆ. ನೂತನ ಕೋಚ್, ನೂತನ ನಾಯಕ ಸೇರಿದಂತೆ ಕೆಲ ದೊಡ್ಡ ಮಟ್ಟದ ಬದಲಾವಣೆಗಳಿಗೆ ನಾಂದಿ ಹಾಡಿದೆ. ಆದ್ರೆ, ಈ ಬೆನ್ನಲ್ಲೇ ಈಗ ಮತ್ತೊಂದು ಬದಲಾವಣೆಗೆ ಬಿಗ್ಬಾಸ್ಗಳು ಕೈ ಹಾಕಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ವಿರಾಟ್ ಪಡೆ ನೀಡಿದ್ದ ಪ್ರದರ್ಶನ, ಟೀಮ್ ಇಂಡಿಯಾದ ಸಾಮರ್ಥ್ಯವನ್ನೇ ಪ್ರಶ್ನಿಸುವಂತೆ ಮಾಡಿತ್ತು. ಇದೊಂದು ಟಿ20 ಫಾರ್ಮೆಟ್ ತಂಡವೇನಾ ಎಂಬ ಅನುಮಾನವನ್ನ ಹುಟ್ಟಿಸಿತ್ತು. ಈ ವಿಚಾರವಾಗಿ ಕ್ರಿಕೆಟರ್ ಸಬಾ ಕರಿಂ, ಟಿ20 ಮಾದರಿಯಲ್ಲಿ ಟೀಮ್ ಇಂಡಿಯಾ ಹಿಂದುಳಿದಿದೆ ಅಂತಾನೇ ಜರಿದಿದ್ದರು.
ಇದನ್ನೂ ಓದಿ: INTERESTING ನಿರೀಕ್ಷೆ ಹುಸಿ ಮಾಡಿದ ದೈತ್ಯರು; ವಿಶ್ವಕಪ್ನಲ್ಲಿ ಇವರ ಸಾಧನೆ ಏನು ಗೊತ್ತಾ..?
ಇತ್ತೀಚಿನ ದಿನಗಳಲ್ಲಿ ಟಿ20 ಕ್ರಿಕೆಟ್ ಹೆಚ್ಚು ಬದಲಾಗುತ್ತಿದೆ. ಟೀಮ್ ಇಂಡಿಯಾವನ್ನ ಗಮನಿಸಿದರೆ ತುಂಬಾ ಹಿಂದುಳಿದಿದೆ. ನಾವು ಸಾಧ್ಯವಾದಷ್ಟು ಬೇಗ ಶಾರ್ಟ್ ಫಾರ್ಮೆಟ್ಗೆ ನಮ್ಮನ್ನ ಸಿದ್ಧಪಡಿಸಿಕೊಳ್ಳಬೇಕಿದೆ. ನಮ್ಮದೇ ಆದ ಯೋಜನೆಯನ್ನ ಹೊಂದಿರಬೇಕು. ಹೀಗಾಗಿ ವಿಭಿನ್ನ ಪಾತ್ರಗಳಿಗೆ ತಕ್ಕಂತ ಆಟಗಾರರನ್ನ ಆಯ್ಕೆ ಮಾಡಬೇಕಾಗಿದೆ. ಮುಂಬರುವ ವಿಶ್ವಕಪ್ ದೃಷ್ಟಿಯಿಂದ ಈ ಪ್ರಕ್ರಿಯೆ ಥಿಂಕ್-ಟ್ಯಾಂಕ್ಗಳಿಗೆ ದೊಡ್ಡ ಕಲಿಕೆಯಾಗಲಿದೆ.
ಸಬಾ ಕರಿಂ, ಭಾರತ ಮಾಜಿ ಆಟಗಾರ
ಮಾಜಿ ವಿಕೆಟ್ ಕೀಪರ್ ಸಬಾ ಕರಿಂ ಹೇಳಿದಂತೆ, ಮುಂದಿನ ವಿಶ್ವಕಪ್ ಗೆಲ್ಲಲು ಟೀಮ್ ಇಂಡಿಯಾದಲ್ಲಿ ಕೆಲ ಅಂಶಗಳತ್ತ ಹೆಚ್ಚು ಫೋಕಸ್ ನೀಡಬೇಕಿದೆ. ಈಗಿನಿಂದಲೇ ಸಿದ್ಧತೆಯೂ ಆರಂಭಿಸಬೇಕಿದೆ. ಈ ನಿಟ್ಟಿನಲ್ಲಿ ಬಿಗ್ಬಾಸ್ಗಳು ಕೂಡ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಟೀಮ್ ಇಂಡಿಯಾದಲ್ಲಿ ಹೊಸ ನೀತಿಯೊಂದನ್ನ implement ಮಾಡೋಕೆ ಸಜ್ಜಾಗಿದ್ದಾರೆ.
ಇಂಗ್ಲೆಂಡ್ ಮಾದರಿ ಟೀಮ್ ಇಂಡಿಯಾದಲ್ಲಿ ರೋಟೇಷನ್..!
ಈಗಾಗಲೇ ರೋಟೇಷನ್ ನೀತಿಯಿಂದಾಗಿ ಸಕ್ಸಸ್ ಕಂಡಿರುವ ಇಂಗ್ಲೆಂಡ್, ಏಕದಿನ, ಟಿ20, ಟೆಸ್ಟ್ ಹೀಗೆ ಪ್ರತ್ಯೇಕ ತಂಡವನ್ನೇ ರಚಿಸಿದೆ. ಅಷ್ಟೇ ಅಲ್ಲ, ಈ ರೋಟೇಷನ್ ಪಾಲಿಸಿಯಿಂದ ಸಕ್ಸಸ್ ಕೂಡ ಕಾಣ್ತಿದೆ. ಈ ನೀತಿಯನ್ನೇ ಈಗ ಟೀಮ್ ಇಂಡಿಯಾದಲ್ಲೂ ಇಂಪ್ಲಿಮೆಂಟ್ ಮಾಡೋಕೆ ಬಿಸಿಸಿಐ ಮುಂದಾಗಿದೆ. ಈ ರೋಟೇಷನ್ ಪಾಲಿಸಿಯಿಂದ ಆಟಗಾರರಿಗೆ ವಿಶ್ರಾಂತಿ ಸಿಗೋ ಜೊತೆಗೆ ಕೆಲ ಯಂಗ್ ಆಟಗಾರರಿಗೆ ಚಾನ್ಸ್ ಸಿಗುತ್ತೆ.
ರೋಟೆಷನ್ ನೀತಿ ಜಾರಿ
‘ಆಟಗಾರರು ದಣಿದಿರುವುದನ್ನ ನಾವು ಪರಿಗಣನೆಗೆ ತೆಗೆದುಕೊಂಡಿದ್ದೇವೆ. ಸತತ ಬಯೋ ಬಬಲ್ನಲ್ಲಿ ಉಳಿಯುವುದು ಸುಲಭವಲ್ಲ. ಹೀಗಾಗಿ ಸ್ಕ್ವಾಡ್ ರೋಟೇಷನ್ ಅವಶ್ಯಕತೆಯಿದೆ. ಇದು ನ್ಯೂಜಿಲೆಂಡ್ ಸರಣಿಯಿಂದಲೇ ಪ್ರಾರಂಭವಾಗಲಿದೆ. ದೇಶಿ ಕ್ರಿಕೆಟ್ನಲ್ಲಿ ಸಾಕಷ್ಟು ಪ್ರತಿಭೆಗಳಿದ್ದಾರೆ. ಹೀಗಾಗಿ ಟಿ20 ಫಾರ್ಮೆಟ್ನಲ್ಲಿ ಹೆಚ್ಚಿನ ಆಟಗಾರರಿಗೆ ಅವಕಾಶ ಸಿಗುತ್ತದೆ’
ಬಿಸಿಸಿಐ ಅಧಿಕಾರಿ
ಇದನ್ನೂ ಓದಿ: ದಿಗ್ಗಜರ ಸಮಾಗಮಕ್ಕೆ ನಡುಗಿದ ಕ್ರಿಕೆಟ್ ಲೋಕ.. ದಾದಾ, ವಾಲ್, ಲಕ್ಷ್ಮಣ್ ಅಂದ್ರೆ ಯಾಕೆ ಭಯ..?
ರೋಟೇಷನ್ ಪಾಲಿಸಿ ಹಿಂದೆ ಬಿಸಿಸಿಐನ ಮಾಸ್ಟರ್ ಪ್ಲಾನ್ ಅಡಗಿದೆ. ಅದೇನೆಂದರೆ 2022ರ ಟಿ20 ವಿಶ್ವಕಪ್, 2023ರ ಏಕದಿನ ವಿಶ್ವಕಪ್ ಆಗಿದೆ. ಈ ಪ್ರತಿಷ್ಠಿತ ಟೂರ್ನಿಗಳನ್ನ ಗೆಲ್ಲೋದೆ ಧ್ಯೇಯವನ್ನಾಗಿಸಿಕೊಂಡಿರುವ ಬಿಸಿಸಿಐ, ಈಗಿನಿಂದಲೇ ರೋಟೆಷನ್ ಪಾಲಿಸಿ ಇಂಪ್ಲಿಮೆಂಟ್ ಮಾಡ್ತಿದೆ.
ಇದನ್ನೂ ಓದಿ: 2024ರ ಐಸಿಸಿ ‘ಟಿ20 ವಿಶ್ವಕಪ್’ ಟೂರ್ನಿ ಆತಿಥ್ಯ ವಹಿಸುವ ದೇಶ ಯಾವುದು ಗೊತ್ತಾ..?
ಇದನ್ನೂ ಓದಿ: ಹಂಸಲೇಖ ಟೀಕೆ; ಹೊಗಳಿಕೆಗಾಗಿ ಮಾಡ್ತಿಲ್ಲ..ತೆಗಳಿದ್ರೂ ಕಾರ್ಯ ನಿಲ್ಲಲ್ಲ-ಪೇಜಾವರ ಶ್ರೀ
ಇದನ್ನೂ ಓದಿ: ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಕೋಳಿ ತಿಂತಾರಾ? ಕುರಿ ರಕ್ತ ಕುಡಿತಾರಾ? ಹಂಸಲೇಖ ಪ್ರಶ್ನೆ
ಇದನ್ನೂ ಓದಿ: ದಲಿತರ ಮನೆಯಲ್ಲಿ ಪೇಜಾವರ ಶ್ರೀ ಕೋಳಿ ತಿಂತಾರಾ ಹೇಳಿಕೆ; ಕ್ಷಮೆ ಕೇಳಿದ ‘ಮಹಾಗುರು’
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ 8 ವಿಕೆಟ್ ಭರ್ಜರಿ ಜಯ; ಆಸ್ಟ್ರೇಲಿಯಾ ಮಡಿಲಿಗೆ ಚೊಚ್ಚಲ ಟಿ20 ವಿಶ್ವಕಪ್ ಟ್ರೋಫಿ