ಇಷ್ಟು ದಿನ ವಿರಾಟ್​ ಕೊಹ್ಲಿ ನಾಯಕತ್ವದ ಬದಲಾವಣೆಯ ಬಗ್ಗೆ ಚರ್ಚೆಗಳು ಮುನ್ನಲೆಗೆ ಬಂದಿತ್ತು. ಆದರೀಗ ಆಟಗಾರರ ಸೆಲೆಕ್ಷನ್​ ಮಾಡುವ ಕೊಹ್ಲಿ ನಿರ್ಧಾರಗಳ ಬಗ್ಗೆ ಟೀಕೆ ವ್ಯಕ್ತವಾಗಿದೆ.
ವಿರಾಟ್​ ಕೊಹ್ಲಿ, ಟೀಮ್​ ಇಂಡಿಯಾದ ಮೋಸ್ಟ್​ ಸಕ್ಸಸ್​ಫುಲ್​ ಕ್ಯಾಪ್ಟನ್​​. ಟೆಸ್ಟ್​ ಕ್ರಿಕೆಟ್​ನಲ್ಲಿ ತಂಡವನ್ನ ಐದು ವರ್ಷಗಳ ಕಾಲ ನಂಬರ್​​ 1 ಪಟ್ಟ ಅಲಂಕರಿಸುವಂತೆ ಮಾಡಿದ್ದು, ಇದೇ ಕೊಹ್ಲಿ.! ಆದರೆ ಕೊಹ್ಲಿ ಆಟಗಾರರ ಸೆಲೆಕ್ಷನ್​ ವಿಷಯದಲ್ಲಿ, ತೀವ್ರ ಟೀಕೆಗೆ ಗುರಿಯಾಗ್ತಿದ್ದಾರೆ. ಕಾರಣ ಕೊಹ್ಲಿ ಆಟಗಾರರನ್ನ ಆಯ್ಕೆ ಮಾಡೋ ವಿಧಾನ.

ಮೈದಾನದಲ್ಲಿ ಕ್ಯಾಪ್ಟನ್​ ಕೊಹ್ಲಿ ಪರ್ಫೆಕ್ಟ್​ ಆಗಿದ್ದರೂ, ಆಟಗಾರರ ಆಯ್ಕೆಯಲ್ಲಿ ಮಾತ್ರ ಅದಕ್ಕೆ ತದ್ವಿರುದ್ಧ. ಜೊತೆಗೆ ಕೊಹ್ಲಿಯ ಅಸ್ಪಷ್ಟ ನಿಲುವು, ಆಟಗಾರರನ್ನ ಇಕ್ಕಟ್ಟಿಗೆ ಸಿಲುಕಿಸಿ, ಆತಂಕಕ್ಕೆ ದೂಡುತ್ತಿದೆ. ಹಾಗೇ ಆಟಗಾರರ ಮೇಲೆ ವಿಶ್ವಾಸ ಹೊಂದಿಲ್ಲ, ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ ಅನ್ನೋದನ್ನ ನಿರೂಪಿಸುತ್ತೆ. ಇದರಿಂದ ಆಟಗಾರರಿಗೆ ಖಾಯಂ ಸ್ಥಾನದ ಖಚಿತತೆಯೇ ಇಲ್ಲದಂತಾಗಿದೆ. ಆಟಗಾರರ ಆತ್ಮವಿಶ್ವಾಸ ಸಹ ಕುಗ್ಗುತ್ತಿದೆ.

ಕ್ಲಾರಿಟಿ ಇಲ್ಲದ ಕೊಹ್ಲಿಯ ನಡೆಗೆ, ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಕೊಹ್ಲಿ ನಾಯಕತ್ವದ ಬಗ್ಗೆ ಈ ಹಿಂದೆಯೂ, ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರ ಹಾಕಿದ್ರು. ಇದೀಗ ಮೊಹಮ್ಮದ್​ ಕೈಫ್​​ ಕೂಡ ಕೊಹ್ಲಿ ಮೇಲೆ ಟೀಕ ಪ್ರಹಾರ ನಡೆಸಿದ್ದು, ತಂಡದ ಸಮತೋಲನದಲ್ಲಿ ನಾಯಕನ ನಡೆ ಸರಿಯಿಲ್ಲ ಎಂದಿದ್ದಾರೆ. ಸೌರವ್​​ ಗಂಗೂಲಿ ಮತ್ತು ಕೊಹ್ಲಿ ನಾಯಕತ್ವದಲ್ಲಿ ಸಾಮ್ಯತೆ ಎಂತಹದ್ದು ಅನ್ನೋದನ್ನ ಕೂಡ, ವಿವರಿಸಿದ್ದಾರೆ.

‘ಪ್ರದರ್ಶನ ನೀಡದ, ತಂಡದಿಂದ ಹೊರಗುಳಿದ ಆಟಗಾರರಿಗೂ ಗಂಗೂಲಿ ಬೆಂಬಲ ನೀಡ್ತಾರೆ. ಆದರೆ ಕೊಹ್ಲಿ ಅದಕ್ಕೆ ತದ್ವಿರುದ್ಧ’
ಮೊಹಮ್ಮದ್​ ಕೈಫ್​, ಮಾಜಿ ಕ್ರಿಕೆಟಿಗ

ಕೊಹ್ಲಿ ಆದ್ಯತೆ ಏನು?

  • ಪ್ರಸ್ತುತ ಉತ್ತಮ ಪ್ರದರ್ಶನ ನೀಡಿದವರಿಗೆ ಕೊಹ್ಲಿ ಆದ್ಯತೆ
  • ಈ ಹಿಂದೆ ಅದ್ಭುತ ಪ್ರದರ್ಶನ, ಫ್ಲಾಪ್​ ಆದವರಿಗೆ ಗೇಟ್​ಪಾಸ್​
  • ಪ್ರಯೋಗಕ್ಕೆ ಮುಂದಾಗ್ತಾರೆ ಕೊಹ್ಲಿ – ಪ್ಲೇಯರ್ಸ್​ಗೆ​ ತಪ್ಪುತ್ತೆ ಚಾನ್ಸ್​
  • ಫಾರ್ಮ್​ ಇಲ್ಲದೆ ಹೊರಗಿದ್ದಾಗ ಬೆಂಬಲಿಸೋದು ಗಂಗೂಲಿ ಗುಣ
  • ಪ್ರದರ್ಶನ ತೋರದಿದ್ದರೂ ಚಾನ್ಸ್​ ನೀಡ್ತಿದ್ರೂ ಸೌರವ್​ ಗಂಗೂಲಿ
  • ತಂಡದ ಆಯ್ಕೆಯತ್ತ ಹೆಚ್ಚಿನ ಕೇಂದ್ರೀಕರಿಸುತ್ತಿದ್ದ ದಾದಾ

ಕ್ಯಾಪ್ಟನ್ ವಿರಾಟ್ ಕೊಹ್ಲಿ, ಈ ಹಿಂದಿನ ನಾಯಕರಿಗಿಂತ ತುಂಬಾನೇ ವಿಭಿನ್ನ. ಪ್ರಸ್ತುತ ಆಟಗಾರರ ಫಾರ್ಮ್​​ನತ್ತ ಹೆಚ್ಚು ಗಮನ ಹರಿಸುವ ಕೊಹ್ಲಿ, ಕೆಲವೊಮ್ಮೆ ಹಿನ್ನಡೆ ಸಹ ಅನುಭವಿಸುತ್ತಾರೆ. ಹೀಗಾಗಿ ಕೊಹ್ಲಿ ಮಾಜಿ ಕ್ರಿಕೆಟಿಗರಿಂದ ಟೀಕೆಗೂ ಗುರಿಯಾಗ್ತಿದ್ದಾರೆ.

The post ಟೀಂ ಇಂಡಿಯಾ ಸೋಲುಗಳಿಗೆ ಕಾರಣ ಕೊಟ್ಟ ಕೈಫ್​; ಆಟಗಾರರ ಆತ್ಮವಿಶ್ವಾಸ ಕುಗ್ಗಿಸ್ತಿದ್ದಾರಾ ಕೊಹ್ಲಿ? appeared first on News First Kannada.

Source: newsfirstlive.com

Source link