ಟೀಂ ಇಂಡಿಯಾ ಸ್ಪಿನ್ನರ್ಸ್​ಗಳ ಬಗ್ಗೆ ನ್ಯೂಜಿಲೆಂಡ್​ ಕೋಚ್​ ಹೇಳಿದ್ದೇನು ಗೊತ್ತಾ?

ನ್ಯೂಜಿಲೆಂಡ್‌ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ವೈಟ್‌ವಾಶ್‌ ಮಾಡಿಕೊಂಡಿದೆ. ಇನ್ನು ಕಾನ್ಪುರದ ಗ್ರೀನ್​ ಪಾರ್ಕ ಸ್ಟೇಡಿಯಂನಲ್ಲಿ ನಡೆಯಲಿರೋ ಮೊದಲನೇ ಟೆಸ್ಟ್​ಗೆ ಉಭಯ ಆಟಗಾರರು ರೆಡಿಯಾಗುತ್ತಿದ್ದಾರೆ. ಈ ವೇಳೆ ಮಾತನಾಡಿದ ನ್ಯೂಜಿಲೆಂಡ್ ಹೆಡ್‌ ಕೋಚ್‌ ಗ್ಯಾರಿ ಸ್ಟೆಡ್​ ಭಾರತೀಯ ಸ್ಪಿನ್ನರ್​ಗಳನ್ನು ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ;ಕಾನ್ಪುರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಕ್ಯಾಪ್ಟನ್, ಕೋಚ್​ಗೆ ಗೊಂದಲ- ನಂ.4 ಸ್ಲಾಟ್​​ಗೆ ತ್ರಿಮೂರ್ತಿಗಳು ಪೈಪೋಟಿ

ಹೆಡ್​ ಕೋಚ್​ ಗ್ಯಾರಿ ಸ್ಟೆಡ್ ಟೀಂ ಇಂಡಿಯಾದ ಮೂವರು ಸ್ಪಿನ್ನರಗಳಾದ ಆರ್​.ಅಶ್ವಿನ್​, ರವೀಂದ್ರ ಜಡೇಜಾ, ಮತ್ತು ಅಕ್ಸರ್​ ಪಟೇಲ್​ ಅವರು ವಿಶ್ವದರ್ಜೆಯ ಸ್ಪಿನ್ನರ್​ಗಳೆಂದು ಬಣ್ಣಿಸಿದ್ದಾರೆ. ಅವರನ್ನು ಪಿಚ್​ನಲ್ಲಿ ಹ್ಯಾಂಡಲ್​ ಮಾಡೋದು ತುಂಬಾ ಕಷ್ಟ. ಈ ಮೂವರು ಆಟಗಾರರು ಎದುರಾಳಿ ಬ್ಯಾಟರ್​ನ್ನು ಕಟ್ಟಿ ಹಾಕುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅವರು ಕೊಂಡಾಡಿದ್ದಾರೆ.

ಇನ್ನು ಮೊದಲ ಟೆಸ್ಟ್​ಗೆ ತಂಡದ ವೇಗಿಗಳಾದ ಟ್ರೆಂಟ್​ ಬೌಲ್ಟ್​ ಮತ್ತು ಗ್ರ್ಯಾಂಡಹೋಮ್​ ಅವರು ಬಯೋಬಬಲ್​ನಲ್ಲಿ ಇರೋದ್ರಿಂದ ಈ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಮಾರಕ ಕೋವಿಡ್​ನಿಂದ ವಾತಾವರಣದಿಂದ ಉತ್ತಮ ಆಟಗಾರರು ತಂಡದಿಂದ ಕೈಬಿಡುವಂತೆ ಮಾಡಿದ್ದು ಈ ಸಿರೀಸ್​ನಲ್ಲಿ ಸವಾಲಾಗಿ ಪರಿಣಮಿಸಿದೆ. ಅದೇ ರೀತಿ ಟೀಂ ಇಂಡಿಯಾದಲ್ಲೂ ಕೂಡ ಕೆಲವು ಆಟಗಾರರು ಬಯೋಬಬಲ್​ ಕಾರಣದಿಂದಾಗಿ ಪಂದ್ಯದಿಂದ ಹೊರಗುಳಿದಿದ್ದಾರೆ ಎಂದು ಗ್ಯಾರಿ ಸ್ಟೆಡ್​ ತಿಳಿಸಿದರು.

News First Live Kannada

Leave a comment

Your email address will not be published. Required fields are marked *