ಟೀಂ ಇಂಡಿಯಾ A ತಂಡ ಸೇರಿದ ದೀಪಕ್​​ ಚಹಾರ್​​, ಇಶಾನ್​​ ಕಿಶನ್​​

ದೀಪಕ್ ಚಹಾರ್ ಮತ್ತು ಇಶಾನ್ ಕಿಶನ್ ಭಾರತ ಎ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಸ್ತುತ ಕಿವೀಸ್​ ಸರಣಿಯನ್ನ ಮುಕ್ತಾಯಗೊಳಿಸಿರುವ ಈ ಇಬ್ಬರೂ ದಕ್ಷಿಣ ಆಫ್ರಿಕಾಗೆ ಹಾರಲಿದ್ದಾರೆ. ಮೂರು ಪಂದ್ಯಗಳ ರೆಡ್​​ಬಾಲ್ ಸರಣಿಗಾಗಿ ಪ್ರಿಯಾಂಕ್ ಪಾಂಚಾಲ್ ನೇತೃತ್ವದ ತಂಡವು ಈಗಾಗಲೇ ಒಂದೆರಡು ದಿನಗಳ ಹಿಂದೆ ಸೌತ್​ ಆಫ್ರಿಕಾದ ಬ್ಲೋಮ್‌ಫಾಂಟೈನ್‌ಗೆ ತಲುಪಿದೆ.

ಚಹಾರ್ ಮತ್ತು ಕಿಶನ್ ನವೆಂಬರ್ 24ರಂದು ಮುಂಬೈಗೆ ತಲುಪಲಿದ್ದು, ಅಲ್ಲಿಂದ ವಿಮಾನ ಹತ್ತಲಿದ್ದಾರೆ. ಇವರ ಬೆನ್ನಲ್ಲೇ ಶಾರ್ದೂಲ್ ಠಾಕೂರ್ ಕೂಡ ತಂಡವನ್ನು ಸೇರುವ ಸಾಧ್ಯತೆಯಿದೆ. ನವೆಂಬರ್ 9ರಂದು ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು 14 ಸದಸ್ಯರ ತಂಡವನ್ನ ಘೋಷಿಸಿತ್ತು.

ಬಳಿಕ ತಡವಾಗಿ ಹನುಮ ವಿಹಾರಿಯನ್ನ ತಂಡಕ್ಕೆ ಸೇರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಕಿಶನ್ ಮತ್ತು ಚಹಾರ್ ಸೇರ್ಪಡೆಯಾಗಿದ್ದಾರೆ. ಕಿಶನ್​ರನ್ನ ಎರಡನೇ ವಿಕೆಟ್ ಕೀಪರ್ ಆಗಿ ಸೇರ್ಪಡೆ ಮಾಡಲಾಗಿದೆ. ಮೊದಲ ಪಂದ್ಯವು ನವೆಂಬರ್ 23ರಂದು ಪ್ರಾರಂಭವಾಗಲಿದೆ.

The post ಟೀಂ ಇಂಡಿಯಾ A ತಂಡ ಸೇರಿದ ದೀಪಕ್​​ ಚಹಾರ್​​, ಇಶಾನ್​​ ಕಿಶನ್​​ appeared first on News First Kannada.

News First Live Kannada

Leave a comment

Your email address will not be published. Required fields are marked *