ಶ್ರೀಲಂಕಾ ಪ್ರವಾಸಕ್ಕೆ ರಾಹುಲ್​​​ ದ್ರಾವಿಡ್​ ಮುಖ್ಯಕೋಚ್​​ ಎಂದು ಬಿಸಿಸಿಐ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ಖಚಿತಪಡಿಸಿದ್ದು, ಗೊಂದಲಗಳಿಗೆ ತೆರೆ ಎಳೆದಿದೆ. ಟೀಮ್​ ಇಂಡಿಯಾ ಜೆರ್ಸಿ ಧರಿಸಿರುವ ದ್ರಾವಿಡ್​ ಜೊತೆಗೆ, ತಂಡದ ಕ್ಯಾಪ್ಟನ್​ ಶಿಖರ್ ಧವನ್​ ಫೋಟೋವನ್ನ ಬಿಸಿಸಿಐ ಹಂಚಿಕೊಂಡಿದೆ. ಇದೇ ಮೊದಲ ಬಾರಿಗೆ ನಾಯಕ ಮತ್ತು ಕೋಚ್​​ ಮಾತನಾಡಿದ್ದು ಸಂತಸ ವ್ಯಕ್ತಪಡಿಸಿದ್ದ್ದಾರೆ.

ಇನ್ನು ದ್ರಾವಿಡ್ ಮಾತನಾಡಿದ್ದು, ಯುವ ಕ್ರಿಕೆಟಿಗರಿಗೆ ಸಂದೇಶ ರವಾನಿಸಿದ್ದಾರೆ. ಆಟಗಾರರಿಗೆ ಇದೊಂದು ಅದ್ಭುತ ಅವಕಾಶ. ಹಾಗಾಗಿ ದೊರೆತ ಅವಕಾಶವನ್ನ ಸಮರ್ಥವಾಗಿ ಸದುಪಯೋಗಪಡಿಸಿಕೊಂಡು ಸಾಗಬೇಕು. ಇದರಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶವೂ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾ ಸರಣಿಯಲ್ಲಿ ಯುವ ಆಟಗಾರರು ಹೇಗೆ ಪ್ರದರ್ಶನ ನೀಡುತ್ತಾರೆ ಅನ್ನೋದನ್ನ ಆಯ್ಕೆ ಸಮಿತಿ ಸದಸ್ಯರು ನೋಡುತ್ತಾರೆ. ವಿಶ್ವಕಪ್​ ಟೂರ್ನಮೆಂಟ್​​ ಕೂಡ ಸಮೀಪಿಸುತ್ತಿದೆ. ಹಾಗಾಗಿ ಗಮನಾರ್ಹ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆಯಲು ಇದು ಸಕಾಲ ಎಂದು ಹೇಳಿದ್ದಾರೆ. ಟೀಮ್​ ಇಂಡಿಯಾ ಜುಲೈ 13ರಿಂದ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಈ ಸರಣಿಯಲ್ಲಿ ಆರು ಮಂದಿ ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ.

The post ಟೀಮ್​ ಇಂಡಿಯಾ ಜೆರ್ಸಿ ತೊಟ್ಟ ದ್ರಾವಿಡ್​​: ಯುವ ಕ್ರಿಕೆಟಿಗರಿಗೆ ಹೇಳಿದ್ದೇನು ಗೊತ್ತಾ..? appeared first on News First Kannada.

Source: newsfirstlive.com

Source link