ಟೀಮ್​ ಇಂಡಿಯಾ ಪರ ಆರ್​ಸಿಬಿ ಡೆತ್​ ಓವರ್​ ಸ್ಪೆಷಲಿಸ್ಟ್ ಪದಾರ್ಪಣೆ


ಇಂಡೋ-ಕಿವೀಸ್​​​ ನಡುವೆ ಇಂದು ಎರಡನೇ ಟಿ20 ಪಂದ್ಯ ನಡೆಯುತ್ತಿದೆ. ಆರ್​​ಸಿಬಿ ವೇಗಿ, ಪರ್ಪಲ್​​ ಕ್ಯಾಪ್​ ವಿಜೇತ ಹರ್ಷಲ್​ ಪಟೇಲ್​ ಇಂದು​ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮಾಜಿ ಕ್ರಿಕೆಟರ್​ ಅಜಿತ್​ ಅಗರ್ಕರ್ ಅವರು ಹರ್ಷಲ್​​ಗೆ ಟೀಮ್​ ಇಂಡಿಯಾ ಕ್ಯಾಪ್​ ನೀಡಿದ್ರು.

14ನೇ ಆವೃತ್ತಿಯ ಐಪಿಎಲ್​​ನಲ್ಲಿ ಹರ್ಷಲ್​​ ಪಟೇಲ್​ ಅದ್ಭುತ ಪ್ರದರ್ಶನ ನೀಡಿದ್ರು. ಆಡಿದ 15 ಪಂದ್ಯಗಳಲ್ಲಿ ಬರೋಬ್ಬರಿ 32 ವಿಕೆಟ್​​ಗಳನ್ನ ಕಬಳಿಸಿ ಐಪಿಎಲ್​​ನಲ್ಲಿ ಪರ್ಪಲ್​ ಕ್ಯಾಪ್​ ವಿಜೇತ ಕೂಡ ಆಗಿದ್ರು. ಡೆತ್​ ಓವರ್​​ಗಳ ಸ್ಪೆಷಲಿಸ್ಟ್​ ಆಗಿದ್ದ ಈತ, ಇಂದು ಭಾರತ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ಐಪಿಎಲ್​ನಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದಾಗಿ ಹರ್ಷಲ್​ ಅವರನ್ನ ಟಿ20 ವಿಶ್ವಕಪ್​ ಸಮಯದಲ್ಲಿ ನೆಟ್​ ಬೌಲರ್​ ಆಗಿ ಆಯ್ಕೆ ಮಾಡಲಾಗಿತ್ತು. ಅದಾದ ಬಳಿಕ ಅನುಭವಿ ವೇಗಿಗಳಿಗೆ ವಿಶ್ರಾಂತಿ ನೀಡಿದ ಪರಿಣಾಮ, ನ್ಯೂಜಿಲೆಂಡ್​ ಟಿ20 ಸರಣಿಗೆ ಹರ್ಷಲ್​ರನ್ನ ಸೆಲೆಕ್ಟ್​ ಮಾಡಲಾಗಿತ್ತು.

ಇದನ್ನೂ ಓದಿ: ‘RCB ಫ್ಯಾನ್ಸ್​​ ತೋರಿದ ಪ್ರೀತಿಗೆ ಬೆಲೆ ಕಟ್ಟಲಾಗದು, ನಾನು ಎಂದಿಗೂ ಕೊಹ್ಲಿ ಸಪೋರ್ಟರ್​​’- ABD

News First Live Kannada


Leave a Reply

Your email address will not be published. Required fields are marked *