ಟೀಮ್​ ಇಂಡಿಯಾ ಪ್ರವಾಸ ರದ್ದಾಗುವ ಸಾಧ್ಯತೆ..?


ಕೊರೊನಾ ಸೋಂಕಿನ ನೂತನ ತಳಿಯ ಹಾವಳಿ ಹೆಚ್ಚಾದ ಕಾರಣ ದಕ್ಷಿಣ ಆಫ್ರಿಕಾದಲ್ಲಿ ಕ್ರೀಡಾ ಕ್ಷೇತ್ರ ಸ್ಥಗಿತಗೊಂಡಿದೆ. ನಿನ್ನೆ ನಡೆದ ದಕ್ಷಿಣ ಆಫ್ರಿಕಾ-ನೆದರ್ಲೆಂಡ್ಸ್‌ ನಡುವಿನ ಪಂದ್ಯವನ್ನ ಕೂಡ ಅರ್ಧಕ್ಕೆ ನಿಲ್ಲಿಸಲಾಯ್ತು. ಹೀಗಾಗಿ ಮುಂದಿನ ತಿಂಗಳು ಕೈಗೊಳ್ಳಬೇಕಿರುವ ಟೀಮ್​ ಇಂಡಿಯಾ, ಪ್ರವಾಸ ಸ್ಥಗಿತಗೊಳ್ಳುತ್ತಾ ಅನ್ನೋ ಅನುಮಾನ ಮೂಡಿದೆ.

ಸೌತ್​​ ಆಫ್ರಿಕಾ 50 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 277 ರನ್ ಗಳಿಸಿತ್ತು. ನೆದರ್​​​ಲೆಂಡ್​​ 2 ಓವರ್‌ಗಳಲ್ಲಿ 11 ರನ್ ಗಳಿಸಿದ್ದ ವೇಳೆ ಪಂದ್ಯವನ್ನ ನಿಲ್ಲಿಸಲಾಯಿತು. ಇನ್ನೆರಡು ದಿನಗಳಲ್ಲಿ ನೆದರ್​ಲೆಂಡ್​ ತವರಿಗೆ ಮರಳುವ ಸಾಧ್ಯತೆ ಇದೆ. ಉಭಯ ತಂಡಗಳ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಬೇಕಿತ್ತು.

ಇನ್ನು ಮುಂದಿನ ತಿಂಗಳು ಡಿಸೆಂಬರ್​ 17ರಿಂದ ಟೀಮ್ ಇಂಡಿಯಾ-ಸೌತ್​ ಆಫ್ರಿಕಾ ನಡುವೆ ಸರಣಿ ಆರಂಭವಾಗಲಿದೆ. ಆದರೆ ಬಯೋಬಬಲ್​​ ನಿಯಮಗಳ ಅನುಕರಣೆ ಸಲುವಾಗಿ ಡಿಸೆಂಬರ್​​​ 8ರಂದೇ ಭಾರತ, ದಕ್ಷಿಣಾ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಬೇಕಿದೆ. ಆದರೆ ಕೊರೊನಾ ಹಾವಳಿ ಮಿತಿ ಮೀರಿದ ಪರಿಣಾಮ, ಜನಜೀವನ ಅಸ್ತವ್ಯಸ್ತಗೊಂಡಿದೆ. ಕ್ರೀಡೆ ಮಾತ್ರವಲ್ಲದೆ, ಉಳಿದ ಕ್ಷೇತ್ರಗಳ ಚಟುವಟಿಕೆಗಳಿಗೂ ಬ್ರೇಕ್​ ಬಿದ್ದಿದೆ.

ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಮೂರು ಪಂದ್ಯಗಳ ಟೆಸ್ಟ್​ ಸರಣಿ​ (ಡಿಸೆಂಬರ್ 17ರಿಂದ ಆರಂಭ), ಮೂರು ಪಂದ್ಯಗಳ ಏಕದಿನ ಸರಣಿ (ಜನವರಿ 11ರಿಂದ ಆರಂಭ), ನಾಲ್ಕು ಪಂದ್ಯಗಳ ಟಿ20 ಸರಣಿ (ಜನವರಿ 19ರಿಂದ ಶುರು) ನಡೆಯಬೇಕಿದೆ. ಕೊರೊನಾ ಸುನಾಮಿ ಹೆಚ್ಚಾದ್ದರಿಂದ ಉಭಯ ಕ್ರಿಕೆಟ್​ ಮಂಡಳಿಗಳು ಯಾವ ನಿರ್ಧಾರಕ್ಕೆ ಬರುತ್ತವೆ ಅನ್ನೋದು ಕುತೂಹಲ ಮೂಡಿಸಿವೆ.

News First Live Kannada


Leave a Reply

Your email address will not be published. Required fields are marked *