ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಜಸ್ಟ್​ 12 ದಿನಗಳು ಮಾತ್ರ ಇದೆ. ಆದ್ರೆ, ದಿನ ಕಳೆದಂತೆ ಮಾತ್ರ ಟೀಮ್ ಇಂಡಿಯಾಕ್ಕೆ ವಿಘ್ನಗಳು ಎದುರಾಗ್ತಿವೆ. ಅದ್ರಲ್ಲೂ ಈ ಬಾರಿ ಟೀಮ್ ಇಂಡಿಯಾದ ಕ್ಯಾಪ್ಟನ್​​, ವೈಸ್​ ಕ್ಯಾಪ್ಟನ್​​ಗಳ ಇಂಜುರಿ ತಲೆನೋವು ತರಿಸ್ತಿದೆ. ಹಾಗಾದ್ರೆ ಇಂಗ್ಲೆಂಡ್ ಸರಣಿಯಲ್ಲಿ ಆ ಇಬ್ಬರು ಆಡಲ್ವಾ..?

ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಕೌಂಟ್​​ಡೌನ್ ಶುರುವಾಗಿದೆ. ಇದಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ತಯಾರಿಯನ್ನೇ ನಡೆಸ್ತಿದೆ. ಟೆಸ್ಟ್​ ಸರಣಿಯ ಪೂರ್ವಾಭ್ಯಾಸಕ್ಕಾಗಿಯೇ ಟೀಮ್ ಇಂಡಿಯಾ, ಕೌಂಟಿ ಇಲೆವೆನ್ ವಿರುದ್ಧ ಅಭ್ಯಾಸ ಪಂದ್ಯವನ್ನೂ ಆಡುತ್ತಿದೆ. ಆದ್ರೆ ಈ ಅಭ್ಯಾಸ ಪಂದ್ಯ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ನಡೆದ ಬೆಳವಣಿಗೆ, ಕ್ರಿಕೆಟ್ ಅಭಿಮಾನಿಗಳಿಲ್ಲಿ ಭಾರೀ ನಿರಾಸೆಯನ್ನೇ ಮೂಡಿಸಿದೆ.

ವಿಶ್ರಾಂತಿಯಲ್ಲಿ ಕ್ಯಾಪ್ಟನ್, ವೈಸ್​ ಕ್ಯಾಪ್ಟನ್..!​
ಅಭ್ಯಾಸ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಟಾಸ್​ಗೆ ಬರ್ತಾರೆ ಅಂತಾನೇ ಊಹಿಸಲಾಗಿತ್ತು. ಆದ್ರೆ ಟಾಸ್ ವೇಳೆ ರೋಹಿತ್ ಶರ್ಮಾ ಕಾಣಿಸಿಕೊಂಡು, ಎಲ್ಲರಿಗೂ ಅಚ್ಚರಿ ಮೂಡಿಸಿದ್ರು. ವಿರಾಟ್​ ಬದಲಿಗೆ ರೋಹಿತ್ ಯಾಕೆ ಬಂದಿದ್ದೆಂಬ ಪ್ರಶ್ನೆಗಳು, ಹರಿದಾಡಿದ್ದವು, ಅದಕ್ಕೆ ಈಗ ಉತ್ತರ, ವಿರಾಟ್​ ಕೊಹ್ಲಿ ಬೆನ್ನು ನೋವಿನಿಂದ ಬಳಲುತ್ತಿರೋದೇ ಆಗಿದೆ.. ಹೀಗಾಗಿ ವೈದ್ಯರ ಸೂಚನೆಯಂತೆ ಕ್ಯಾಪ್ಟನ್ ವಿರಾಟ್ ಅಭ್ಯಾಸ ಪಂದ್ಯದಿಂದ ದೂರ ಉಳಿದಿದ್ದಾರೆ.. ಇನ್ನೂ hamstring ಇಂಜುರಿಗೆ ಒಳಗಾಗಿರುವ ರಹಾನೆ ಸ್ಥಿತಿ, ವಿರಾಟ್​ ಕೊಹ್ಲಿಗಿಂತ ಗಂಭೀರವಾಗಿದೆ ಎನ್ನಲಾಗಿದೆ.

ಟೆಸ್ಟ್ ಸರಣಿ ವೇಳೆಗೆ ಫಿಟ್ ಆಗ್ತಾರಾ ನಾಯಕರು..?
ಸದ್ಯ ಇಂಜುರಿ ಸಮಸ್ಯೆಯಿಂದ ಬಳಲುತ್ತಿರುವ ಉಭಯ ಆಟಗಾರರು, ಟೆಸ್ಟ್ ಸರಣಿ ವೇಳೆಗೆ ಫಿಟ್ ಆಗ್ತಾರೆ ಎನ್ನಲಾಗ್ತಿದೆ. ವಿರಾಟ್ ಕೊಹ್ಲಿ, ಜುಲೈ 26ರಿಂದ ಆರಂಭವಾಗಲಿರೋ ಎಡನೇ ಅಭ್ಯಾಸ ಪಂದ್ಯದ ವೇಳೆಗೆ, ಸಂಪೂರ್ಣ ಗುಣಮುಖರಾಗಲಿದ್ದಾರೆ. ಆದ್ರೆ ವೈಸ್​ ಕ್ಯಾಪ್ಟನ್ ರಹಾನೆ ಗುಣಮುಖ ಅನುಮಾನ ಎನ್ನಲಾಗ್ತಿದೆ. ಇದು ಟೀಮ್ ಇಂಡಿಯಾಕ್ಕೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಹೀಗಾಗಿಯೇ ಬಿಸಿಸಿಐ ವೈದ್ಯಕೀಯ ತಂಡ ರಹಾನೆ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಸದ್ಯ ಇಂಜುರಿಗೆ ಒಳಗಾಗಿರುವ ವಿರಾಟ್​ ಕೊಹ್ಲಿ, ಅಜಿಂಕ್ಯಾ ರಹಾನೆ, ಇಶಾಂತ್ ಶರ್ಮಾ, ಅಭ್ಯಾಸ ಪಂದ್ಯಗಳನ್ನ ಆಡದೇ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದ್ರೆ, ಟೀಮ್ ಇಂಡಿಯಾಕ್ಕೆ ಭಾರೀ ನಷ್ಟವೇ ಆಗಲಿದೆ. ಒಟ್ನಲ್ಲಿ.. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ, ರಹಾನೆ ಫಿಟ್​ ಆಗಲಿ ಅನ್ನೋದೇ, ಅಭಿಮಾನಿಗಳ ಆಶಯವಾಗಿದೆ.

The post ಟೀಮ್ ಇಂಡಿಯಾಕ್ಕೆ ಇಂಜುರಿ ಕಾಟ; ಟೆಸ್ಟ್ ಸರಣಿಗೂ ಮುನ್ನ ಫಿಟ್​ ಆಗ್ತಾರಾ ಕ್ಯಾಪ್ಟನ್, ವೈಸ್​ ಕ್ಯಾಪ್ಟನ್..? appeared first on News First Kannada.

Source: newsfirstlive.com

Source link