ಮುಂಬರುವ ಜೂನ್​ನಲ್ಲಿ ಇಂಗ್ಲೆಂಡ್​​ ಪ್ರವಾಸ ಕೈಗೊಳ್ಳಲಿರುವ ಟೀಮ್​ ಇಂಡಿಯಾಗೆ ಇಂಗ್ಲೆಂಡ್​ ಕ್ರಿಕೆಟ್​​ ಬೋರ್ಡ್​​ ಗುಡ್​ನ್ಯೂಸ್​​ ನೀಡಿದೆ. ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ ಹಲವು ಸುತ್ತುಗಳು ನಡೆಸಿದ ಮಾತುಕತೆಯ ಫಲವಾಗಿ ಕೇವಲ 3 ದಿನ ಕ್ವಾರಂಟೀನ್​ಗೆ ಇಂಗ್ಲೆಂಡ್​​ ಕ್ರಿಕೆಟ್​ ಮಂಡಳಿ ಸಮ್ಮತಿಸಿದೆ. ನಿಯಮದ ಪ್ರಕಾರ 10 ದಿನಗಳ ಕಡ್ಡಾಯ ಕ್ವಾರಂಟೀನ್​ಗೆ ಒಳಗಾಗಬೇಕಿತ್ತು ಆದ್ರೆ, ಬಿಸಿಸಿಐನ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​​ 3 ದಿನಗಳ ಹೋಟೆಲ್​ ಕ್ವಾರಂಟೀನ್​ ಪೂರೈಸಿ 4ನೇ ದಿನದಿಂದ ಅಭ್ಯಾಸಕ್ಕೆ ಅನುವು ಮಾಡಿಕೊಟ್ಟಿದೆ. ಜೂನ್​ 18ರಿಂದ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಆರಂಭವಾಗಲಿದ್ದು, ಜೂನ್​ ಎರಡರಂದು ಕೊಹ್ಲಿ ನೇತೃತ್ವದ ಟೀಮ್​ ಇಂಡಿಯಾ ಚಾರ್ಟಡ್​ ಫ್ಲೈಟ್​​ನಲ್ಲಿ ಇಂಗ್ಲೆಂಡ್​ಗೆ​​ ಪ್ರಯಾಣ ಬೆಳೆಸಲಿದೆ.

The post ಟೀಮ್ ಇಂಡಿಯಾಕ್ಕೆ ಗುಡ್​ನ್ಯೂಸ್- ಇಂಗ್ಲೆಂಡ್​​ನಲ್ಲಿ ಕೊಹ್ಲಿ ಪಡೆಗೆ ಮೂರೇ ದಿನ ಕ್ವಾರಂಟೀನ್..! appeared first on News First Kannada.

Source: newsfirstlive.com

Source link