ಇಂಡೋ- ಕಿವೀಸ್​​ ಟೆಸ್ಟ್​​ ಚಾಂಪಿಯನ್​ ಶಿಪ್​ ಫೈನಲ್​ ಫೈಟ್​​ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಏಕ್ಸಪರ್ಟ್​​ಗಳು, ಮಾಜಿ ಆಟಗಾರರು ಹೈವೋಲ್ಟೆಜ್​ ಕದನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನ ಮಂಡಿಸುತ್ತಲೇ ಇದ್ದಾರೆ. ಈ ಸರದಿಯಲ್ಲಿ ಯಾವೆಲ್ಲಾ ಆಟಗಾರರು ಟೀಮ್​ ಇಂಡಿಯಾ ಪಾಲಿಗೆ ಕಂಟಕವಾಗಲಿದ್ದಾರೆ ಅನ್ನೋದರ ಬಗ್ಗೆಯೂ ವಾದಗಳು ಮಂಡನೆಯಾಗಿವೆ. ಆದ್ರೆ, ಬ್ಲ್ಯಾಕ್​​​​ಕ್ಯಾಪ್ಸ್​​ ಬಳಗದ ಈ ಪ್ರಬಲ ಅಸ್ತ್ರದ ಬಗ್ಗೆ ಹೆಚ್ಚು ಚರ್ಚೆಗಳೇ ನಡೆದಿಲ್ಲ. ಆದ್ರೆ, ಸೌತಾಂಪ್ಟನ್ ಅಂಗಳದಲ್ಲಿ ನಿಜಕ್ಕೂ ಭಾರತಕ್ಕೆ ಸವಾಲಾಗೋದು ಈ ಆಟಗಾರನೇ..!​

ಟೀಮ್ ​ಇಂಡಿಯಾಗೆ ಆರ್​​ಸಿಬಿ ಆಲ್​​ರೌಂಡರ್​​ ಕಂಟಕ..!
ಸೌತ್​ಹ್ಯಾಂಪ್ಟನ್​ನಲ್ಲಿ ಸೀರಿಯಸ್​ ಥ್ರೆಟ್​​ ಆಗ್ತಾರಾ ಜೆಮಿಸನ್​..!
14ನೇ ಆವೃತ್ತಿ ಐಪಿಎಲ್​ಗೂ ಮುನ್ನ ನಡೆದ ಮಿನಿ ಹರಾಜಿನ ಬಳಿಕ ಈ ಆಟಗಾರನ ಆಯ್ಕೆ ಬಗ್ಗೆ ಹುಬ್ಬೇರಿಸಿದವರೇ ಹೆಚ್ಚು. ಯಾಕಂದ್ರೆ, ಶತಯುಗತಾಯ ಕಪ್​ ಗೆಲ್ಲೋ ಪಣ ತೊಟ್ಟಿದ್ದ ಆರ್​​ಸಿಬಿ ಈ ಆಟಗಾರರನ ಮೇಲೆ ಸುರಿದಿದ್ದು ಬರೋಬ್ಬರಿ 15 ಕೋಟಿ..! ಆದ್ರೆ, ಆತ ನೀಡಿದ ಪೈಸಾ​ ವಸೂಲ್​ ಪರ್ಫಾಮೆನ್ಸ್​​​​ ಇಡೀ ತಂಡಕ್ಕೆ ಬಲ ತುಂಬಿತು. ಯೆಸ್​​​..! ಆತ ಬೇರಾರು ಅಲ್ಲ, ಕಿವೀಸ್​​​ ಪಾಳಯದ 6.8 ಎತ್ತರದ ವೇಗಿ ಕೈಲ್​ ಜೆಮಿಸನ್​..!

ಆರ್​​​ಸಿಬಿ ಪಾಳಯದಲ್ಲಿ ಸಾಲಿಡ್​​ ಫರ್ಪಾಮೆನ್ಸ್​ ನೀಡಿದ ಜೆಮಿಸನ್​ ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲೂ ಪದಾರ್ಪಣೆ ಮಾಡಿದ ಕೆಲವೇ ದಿನಗಳಲ್ಲೇ ಛಾಪು ಮೂಡಿಸಿದ್ದಾನೆ. ಲೈನ್​ ಆ್ಯಂಡ್​ ಲೆಂಥ್​ ಬೌಲಿಂಗ್​ನೊಂದಿಗೆ ಕರಾರುವಕ್​ ದಾಳಿ ಸಂಘಟಿಸೋ ಸಾಮರ್ಥ್ಯ ಈ ವೇಗಿಗಿದೆ. ಜೊತೆಗೆ ಎತ್ತರದ ಅಡ್ವಾಂಟೇಜ್​, ಬೌನ್ಸಿ ಟ್ರ್ಯಾಕ್​ನಲ್ಲಿ ಈತನಿಗೆ ಪ್ಲಸ್​ ಪಾಯಿಂಟ್ಸ್​​ ಆಗಲಿದೆ. ಹೀಗಾಗಿಯೇ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಫೈಟ್​​ನಲ್ಲಿ ಭಾರತವನ್ನ ಈತ ಕಾಡಲಿದ್ದಾನೆ ಅನ್ನೋ ಚರ್ಚೆ ಆರಂಭವಾಗಿರೋದು..!

ಡೆಬ್ಯೂ ಸಿರೀಸ್​​ನಲ್ಲೇ ಭಾರತಕ್ಕೆ ನೀಡಿದ್ದ ಶಾಕ್​ ಟ್ರೀಟ್​​ಮೆಂಟ್​..!
ಅದು 2020ರ ಭಾರತದ ನ್ಯೂಜಿಲೆಂಡ್​ ಪ್ರವಾಸ. ಈ ಪ್ರವಾಸದಲ್ಲಿ ಏಕದಿನ ಹಾಗೂ ಟೆಸ್ಟ್​ ಮಾದರಿಯಲ್ಲಿ ಪಾದಾರ್ಪಣೆ ಮಾಡಿದ ಈ ವೇಗಿ ಟೀಮ್​ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನ ಬಿಡದೇ ಕಾಡಿದ್ದ. ಟೆಸ್ಟ್​​ ಸ್ಪೆಷಲಿಸ್ಟ್​ ಪೂಜಾರ, ಹನುಮ ವಿಹಾರಿ ನಾಯಕ ವಿರಾಟ್​ ಕೊಹ್ಲಿಯಂತ ಸ್ಟಾರ್​​ಗಳಿಗೆ ಪೆವಿಲಿಯನ್​ ದಾರಿ ತೋರಿಸಿದ್ದ ಜೆಮಿಸನ್​ ಸೆನ್ಸೇಷನ್​ ಹುಟ್ಟು ಹಾಕಿದ್ದ. ಇನ್​ಫ್ಯಾಕ್ಟ್​​​ ಭಾರತ-ನ್ಯೂಜಿಲೆಂಡ್​​ ನಡುವಿನ 2 ಟೆಸ್ಟ್​​ ಪಂದ್ಯಗಳಲ್ಲಿ ಜೆಮಿಸನ್​ ಕಬಳಿಸಿದ್ದು 9 ವಿಕೆಟ್​​..!

GFX: ಡೆಬ್ಯೂ ಸರಣಿಯಲ್ಲಿ ಜೆಮಿಸನ್​ ಪ್ರದರ್ಶನ
ಇನ್ನಿಂಗ್ಸ್​             4
ಓವರ್​​              57
ವಿಕೆಟ್​​              09
ಬೆಸ್ಟ್​​​​​               5/45

ಕೇವಲ ಪದಾರ್ಪಣೆ ಸರಣಿ ಮಾತ್ರವಲ್ಲ..! ನಂತರ ಆಡಿದ ಟೆಸ್ಟ್​​​ ಪಂದ್ಯಗಳಲ್ಲೂ ಜೆಮಿಸನ್​ ನೀಡಿದ್ದು ಮಾಸ್ಟರ್​ ಕ್ಲಾಸ್​ ಪ್ರದರ್ಶನವೇ..! ಹೀಗಾಗಿಯೇ ಆಡಿದ 6 ಪಂದ್ಯಗಳಿಗೆ ಈತನಿಗೆ ಟಿಪಿಕಲ್​ ಟೆಸ್ಟ್​ ಪ್ಲೇಯರ್​ ಎಂದು ಗುರುತಿಸೋದು.

ಕೈಲ್​ ಜೆಮಿಸನ್​ ಟೆಸ್ಟ್​​ ಕರಿಯರ್​​
ಇನ್ನಿಂಗ್ಸ್​            12
ಓವರ್​​           200.2
ವಿಕೆಟ್​​             36
ಬೆಸ್ಟ್​​​​​              6/48

ಕೇವಲ ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ ಕೈಲ್​ ಜೆಮಿಸನ್​ ಭಾರತಕ್ಕೆ ಕಂಟಕವಾಗಲಿದ್ದಾರೆ ಅನ್ನೋ ಚರ್ಚೆ ಆರಂಭವಾಗಿಲ್ಲ. ಇಂಗ್ಲೆಂಡ್​​ನ ಪ್ಲೇಯಂಗ್​ ಕಂಡಿಷನ್ಸ್​​​, ನ್ಯೂಜಿಲೆಂಡ್​​ಗಿಂತ ಹೆಚ್ಚೇನು ಭಿನ್ನವಾಗಿಲ್ಲ. ಇದು ಕೂಡ ಕಿವೀಸ್​​ ವೇಗಿಗೆ ಸಹಾಯಕವಾಗಲಿದೆ ಅನ್ನೋದು ತಜ್ಙರ ಅಭಿಪ್ರಾಯವಾಗಿದೆ. ಜೊತೆಗೆ ಸೌತಾಂಪ್ಟನ್​ನ ಬೌನ್ಸಿ ಟ್ರಾಕ್​ನಲ್ಲಿ ಜೇಮಿಸನ್​ಗೆ ತನ್ನ​ ಹೈಟ್​​ ಕೂಡ ಪ್ಲಸ್​​ ಪಾಯಿಂಟ್​​..!

ಕೈಲ್​ ಜೆಮಿಸನ್​ ಭಾರತವನ್ನ ಕಾಡಲಿದ್ದಾನೆ ಹಲವು ವಿಶ್ಲೇಷಕರ ಅಭಿಪ್ರಾಯವೇನೋ ಹೌದು..! ಹಾಗೆಂದ ಮಾತ್ರಕ್ಕೆ ಕಳೆದ ಸರಣಿಯಲ್ಲಿ ಪೆಟ್ಟು ತಿಂದ ಟೀಮ್​ ಇಂಡಿಯನ್ಸ್​ ಈ ಬಾರಿ ಜೆಮಿಸನ್​ ತಂತ್ರಕ್ಕೆ ಪ್ರತಿತಂತ್ರ ಹೆಣೆಯದೇ ಇರ್ತಾರಾ..? ಈ ಬಾರಿ ಆ ತಪ್ಪು ಮರುಕಳಿಸಲ್ಲ ಅನ್ನೋದು ಅಭಿಮಾನಿಗಳ ವಿಶ್ವಾಸವಾಗಿದೆ.

The post ಟೀಮ್ ಇಂಡಿಯಾಕ್ಕೆ ಶುರುವಾಯ್ತಾ ವೇಗಿ ಕೈಲ್ ಜೇಮಿಸನ್ ಭಯ..? appeared first on News First Kannada.

Source: newsfirstlive.com

Source link