ಟೆಸ್ಟ್​ ಕ್ರಿಕೆಟ್​ನ ವಿಶ್ವಕಪ್​ ಅಂತಾನೇ ಬಿಂಬಿತವಾಗಿರೋ ವಿಶ್ವ ಟೆಸ್ಟ್ ಚಾಂಪಿಯನ್​​ ಶಿಪ್​​ಗೆ, ಬೆರಳೆಣಿಕೆ ದಿನಗಳಷ್ಟೇ ಬಾಕಿ ಇದೆ. ಚೊಚ್ಚಲ ಟೆಸ್ಟ್​ ವಿಶ್ವಕಪ್ ಗೆಲ್ಲೋ ಉತ್ಸಾಹದಲ್ಲಿ ಟೀಮ್ ಇಂಡಿಯಾ ಇದೆ. ಆದ್ರೆ ಆ ಒಬ್ಬ ವಿರಾಟ್​ ಪಡೆಗೆ, ನಾನೇ ವಿಲನ್ ಅಂತಿದ್ದಾನೆ.

ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​​ನ ಪ್ರತಿಷ್ಠೆಯ ಕಾದಾಟಕ್ಕೆ, ದಿನಗಣನೆ ಶುರುವಾಗಿದೆ. ಟೆಸ್ಟ್ ಚಾಂಪಿಯನ್​ಶಿಪ್​ನ ಅಂಕಪಟ್ಟಿಯಲ್ಲಿ ಆಗ್ರಸ್ಥಾನದಲ್ಲಿರೋ ಟೀಮ್ ಇಂಡಿಯಾ, ಶತಾಯ ಗತಾಯ ಪ್ರತಿಷ್ಠಿತ ಟ್ರೋಫಿ ಗೆಲ್ಲೋಕೆ ಪಣತೊಟ್ಟಿದೆ. ಇದರೊಂದಿಗೆ ವಿರಾಟ್​ ನೇತೃತ್ವದಲ್ಲಿ ಮೊದಲ ಐಸಿಸಿ ಟ್ರೋಫಿ ಗೆಲ್ಲೋ ಕನಸು ಕಾಣುತ್ತಿದೆ. ಆದ್ರೆ ಟೀಮ್ ಇಂಡಿಯಾದ ಈ ಕನಸಿಗೆ ಕಿವೀಸ್​ನ ಮಾರಕ ವೇಗಿ ಟ್ರೆಂಟ್​ ಬೋಲ್ಟ್​, ವಿಲನ್ ಆಗೋಕೆ ತುದಿಗಾಲಿನಲ್ಲಿ ನಿಂತಿದ್ದಾನೆ.

ಹೌದು! ಟೀಮ್ ಇಂಡಿಯಾಕ್ಕೆ ಹೊಲಿಸಿದ್ರೆ, ಇಂಗ್ಲೆಂಡ್ ಹವಾಮಾನ ಕಿವೀಸ್​ಗೆ ಲಾಭದಾಯಕವಾಗಿದೆ. ಇಂಗ್ಲೆಂಡ್ ಪಿಚ್ ಆ್ಯಂಡ್ ಕಂಡೀಷನ್ಸ್​ ಸಂಪೂರ್ಣ ಟೀಮ್ ಇಂಡಿಯಾಕ್ಕೆ ವ್ಯತಿರಿಕ್ತವೇ ಆಗಿದೆ. ಈ ಪಿಚ್​ಗಳು ಥೇಟ್ ಕಿವೀಸ್​ ಪಿಚ್​​ಗಳಂತೆ ಇರೋದ್ರಿಂದ, ಈ ಫಾಸ್ಟ್ ಆ್ಯಂಡ್ ಬೌನ್ಸಿ ಟ್ರ್ಯಾಕ್​​ಗಳು, ಕಿವೀಸ್​ ಬೌಲರ್​ಗಳಿಗೆ ವರದಾನವೇ ಆಗಿದೆ.

ಇಂಗ್ಲೆಂಡ್ ಕಂಡೀಷನ್​ನಲ್ಲಿ ಬೋಲ್ಟ್​ ಸುನಾಮಿ..!
ಸದ್ಯ ಕೇನ್ ವಿಲಿಯಮ್ಸನ್ ಪಡೆಯ ಬ್ರಹ್ಮಾಸ್ತ್ರ ಟ್ರೆಂಟ್ ಬೋಲ್ಟ್. ಸ್ವಿಂಗ್ ಆ್ಯಂಡ್ ಬೌನ್ಸಿ ಎಸೆತಗಳೊಂದಿಗೆ ಎದುರಾಳಿಗಳಿಗೆ ಕಾಡುವ ಟ್ರೆಂಟ್, ಇಂಗ್ಲೆಂಡ್​ ನೆಲದಲ್ಲೇ ಮೋಸ್ಟ್​ ಡೇಂಜರಸ್ ಬೌಲರ್​ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದ್ರಲ್ಲೂ ಇಂಗ್ಲಿಷ್ ಕಂಡೀಷನ್​ನಲ್ಲಿ ಈತನ ಘಾತುಕ ಎಸೆತಗಳನ್ನ ಎದುರಿಸೋದು, ಬ್ಯಾಟ್ಸ್​​​ಮನ್​ಗಳಿಗೆ ಅಗ್ನಿಪರೀಕ್ಷೆಯೇ ಆಗಿದೆ. ಅದ್ರಲ್ಲೂ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ನಲ್ಲಿ ಟ್ರೆಂಟ್ ಬೋಲ್ಟ್​ ಸುನಾಮಿಯನ್ನೇ ಸೃಷ್ಟಿಸೋದು, ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್​ ಆ್ಯಂಡ್ ಅಂಕಿ ಅಂಶಗಳು. ಇದಕ್ಕೆ ಬೆಸ್ಟ್ ಎಕ್ಸಾಂಪಲ್.. ಈ ಮೂರು ಸೂಪರ್​ ಸ್ಪೆಲ್​ಗಳು.

ಟ್ರೆಂಟ್​ ಬೋಲ್ಟ್​ ವೇಗಕ್ಕೆ ತತ್ತರಿಸಿತ್ತು ಇಂಗ್ಲೆಂಡ್
ಸ್ವಿಂಗ್ ಆ್ಯಂಡ್ ಬೌನ್ಸಿ ಟ್ರ್ಯಾಕ್​​ನಲ್ಲಿ ಟ್ರೆಂಟ್ ಬೋಲ್ಟ್​ ಪರಾಕ್ರಮಕ್ಕೆ ಸಾಕ್ಷಿ. 2018ರಲ್ಲಿ ಆಕ್ಲೆಂಡ್​ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯ. ಈ ಪಂದ್ಯದ ಮೊದಲ ಇನ್ನಿಂಗ್ಸ್​​ ಆರಂಭಿಸಿದ್ದ ಇಂಗ್ಲೆಂಡ್, ಟ್ರೆಂಟ್ ಬೋಲ್ಟ್ ಸುಂಟರಗಾಳಿಯ ವೇಗಕ್ಕೆ ತತ್ತರಿಸಿತ್ತು. ಅದು ಯಾವ ಮಟ್ಟಕ್ಕೆ ಎಂದರೆ, ಅಲೆಸ್ಟರ್​ ಕುಕ್, ಜೋ ರೂಟ್, ಬೆನ್ ಸ್ಟೋಕ್ಸ್​ರಂಥಹ ಸ್ಪೆಷಲಿಸ್ಟ್ ಆಟಗಾರರೇ, ಟ್ರೆಂಟ್​​ಗೆ ತಲೆಬಾಗಿ 58 ರನ್​​ಗೆ ಆಲೌಟ್​ ಆಗಿತ್ತು. ಈ ಇನ್ನಿಂಗ್ಸ್​ನಲ್ಲಿ 32 ರನ್ ಮಾತ್ರ ನೀಡಿದ್ದ ಟ್ರೆಂಟ್ ಬೋಲ್ಟ್,​ 6 ವಿಕೆಟ್ ಉರುಳಿಸಿ ಮೆರೆದಾಡಿದ್ದರು.

2013ರಲ್ಲಿ ಇಂಗ್ಲೆಂಡ್ ಉಡೀಸ್ ಮಾಡಿದ ಎಡಗೈ ವೇಗಿ
ಇದೊಂದೆ ಅಲ್ಲ! 2013ರಲ್ಲೂ ಇಂಗ್ಲೆಂಡ್​ಗೆ ಮಾರಕವಾಗಿದ್ದ ಬೋಲ್ಟ್​​, 68 ರನ್​ ನೀಡಿ 6 ವಿಕೆಟ್ ಉರುಳಿಸಿದ್ದರು. ಬೋಲ್ಟ್​ ಘಾತುಕ ಎಸೆತಗಳಿಗೆ ಪ್ರತ್ಯುತ್ತರ ನೀಡದ ಇಂಗ್ಲೆಂಡ್, ಅಲ್ಪ ಮೊತ್ತವನ್ನೇ ಪೇರಿಸಿದರು. ಆದ್ರೆ ಕಿವೀಸ್​ ಬ್ಯಾಟ್ಸ್​ಮನ್​​​ಗಳ ಕೆಟ್ಟ ಬ್ಯಾಟಿಂಗ್​​ಗೆ ಪಂದ್ಯ ಕೈಚೆಲ್ಲಿತ್ತು.

ಲಾರ್ಡ್ಸ್​​ನಲ್ಲೂ ಆಂಗ್ಲರಿಗೆ ಬಿಸಿಮುಟ್ಟಿಸಿದ್ದ ಬೋಲ್ಟ್​​
ಸ್ವದೇಶದಲ್ಲಿ ಆಂಗ್ಲರನ್ನ ಬೇಟೆಯಾಡಿದ್ದ ಬೋಲ್ಟ್​, 2015ರ ಇಂಗ್ಲೆಂಡ್ ಪ್ರವಾಸದಲ್ಲೂ ಅತಿಥೇಯರಿಗೆ ಸವಾಲ್ ಆಗಿ ಪರಿಣಮಿಸಿದ್ದರು. ಅದ್ರಲ್ಲೂ ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ಬೋಲ್ಟ್​ ಬೆಂಕಿ ಚೆಂಡುಗಳಿಗೆ, ಮರು ಉತ್ತರವೇ ಇರಲಿಲ್ಲ. ಮೊದಲ ಇನ್ನಿಂಗ್ಸ್​ನಲ್ಲಿ 4 ವಿಕೆಟ್ ಪಡೆದಿದ್ದ ಬೋಲ್ಟ್​, ಎರಡನೇ ಇನ್ನಿಂಗ್ಸ್​ನಲ್ಲಿ 5 ವಿಕೆಟ್ ಉರುಳಿಸಿ ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳಿಗೆ ಕಬ್ಬಿಣದ ಕಡಲೆಯಾಗಿದ್ದರು. ಆದ್ರೆ ಈ ಪಂದ್ಯವನ್ನ ಕಿವೀಸ್​ ಕೈಚೆಲ್ಲಿದರು. ನಂತರ ಟೆಸ್ಟ್ ಗೆದ್ದು ಸರಣಿಯನ್ನ ಡ್ರಾ ಮಾಡಿಕೊಂಡಿತು. ಅಷ್ಟೇ ಅಲ್ಲ! ಈ ಸರಣಿಯಲ್ಲಿ ಗರಿಷ್ಠ ವಿಕೆಟ್ ಟೇಕರ್ ಬೌಲರ್ ಆಗಿಯೂ ಮಿಂಚಿದ್ದರು.

ಟೀಮ್ ಇಂಡಿಯಾಕ್ಕೂ ವಿಲನ್ ಆಗ್ತಾರಾ ಟ್ರೆಂಟ್ ಬೋಲ್ಟ್​?
ಇಂಗ್ಲೆಂಡ್​​ ಹವಾಮಾನಕ್ಕೆ ಅನುಗುಣವಾಗಿ ಬೌಲಿಂಗ್ ಮಾಡಬಲ್ಲ ಟ್ರೆಂಟ್, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ನಲ್ಲಿ ಕೊಹ್ಲಿ ಪಡೆಗೆ ವಿಲನ್ ಆಗೋದು ಶತಸಿದ್ಧ.. ಅದ್ರಲ್ಲೂ ಇಂಗ್ಲೆಂಡ್​​ನ ಫಾಸ್ಟ್​ ಟ್ರ್ಯಾಕ್​​​ಗಳು ನ್ಯೂಜಿಲೆಂಡ್​​ಗೆ ಅನುಕೂಲರ ವಿಚಾರ ಒಂದೆಡೆಯಾದರೆ, ಡ್ಯೂಕ್ ಬಾಲ್​​ಗಳು ಕೂಡ ಕಿವೀಸ್​ ವೇಗಿಗಳಿಗೆ ವರದಾನವೇ ಆಗಲಿದೆ. ಮುಖ್ಯವಾಗಿ ಸ್ವಿಂಗ್ ಮಾಡುವ ವೇಗಿಗಳಿಗೆ ಡ್ಯೂಕ್ ಬಾಲ್, ಹೆಚ್ಚು ಅನುಕೂಲ ತರಲಿದೆ. ಅದ್ರಲ್ಲೂ ಕಿವೀಸ್​ನ ಸ್ಟೀಡ್​​​ಸ್ಟರ್​ ಟ್ರೆಂಟ್ ಬೋಲ್ಟ್​, ಪಿಚ್ ಹಾಗೂ ಡ್ಯೂಕ್ ಬಾಲ್​​ನ ಎರಡು ಲಾಭ ಪಡೆಯೋದು ಗ್ಯಾರಂಟಿ. ಅಷ್ಟೇ ಅಲ್ಲ, ಇಂಗ್ಲೆಂಡ್​​ ನೆಲದಲ್ಲಿನ ಅಂಕಿಅಂಶಗಳೂ ಸಹ, ಟ್ರೆಂಟ್ ಬೋಲ್ಟ್​ ಕಂಟಕ ಅಂತಾನೇ ಹೇಳ್ತಿವೆ.

ಇಂಗ್ಲೆಂಡ್ ನೆಲದಲ್ಲಿ ಬೋಲ್ಟ್​
ಇಂಗ್ಲೆಂಡ್​​ನಲ್ಲಿ 4 ಟೆಸ್ಟ್ ಪಂದ್ಯಗಳನ್ನಾಡಿರುವ ಟ್ರೆಂಟ್ ಬೋಲ್ಟ್​, 21 ವಿಕೆಟ್ ಉರುಳಿಸಿದ್ದಾರೆ. 57 ರನ್ ನೀಡಿ 5 ವಿಕೆಟ್ ಪಡೆದಿರೋದು, ಎಡಗೈ ವೇಗಿಯ ಬೆಸ್ಟ್​ ಪರ್ಫಾಮೆನ್ಸ್ ಆಗಿದೆ. ಒಟ್ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಗೆಲ್ಲೋಕೆ ಪಣತೊಟ್ಟಿರುವ ಟೀಮ್​ ಇಂಡಿಯಾಕ್ಕೆ, ಕಿವೀಸ್​ ವೇಗಿ ಟ್ರೆಂಟ್ ಬೋಲ್ಟ್​ ವಿಲನ್ ಆಗ್ತಾರಾ? ಅಥವಾ ಬೋಲ್ಟ್​​ಗೆ ಕೊಹ್ಲಿ ಬಾಯ್ಸ್​ ತಕ್ಕ ಉತ್ತ ನೀಡ್ತಾರಾ ಅನ್ನೋದನ್ನ ಕಾದುನೋಡಬೇಕಷ್ಟೇ.

The post ಟೀಮ್ ಇಂಡಿಯಾಗೂ ವಿಲನ್ ಆಗ್ತಾರಾ ಟ್ರೆಂಟ್ ಬೋಲ್ಟ್​? appeared first on News First Kannada.

Source: newsfirstlive.com

Source link