14ನೇ ಆವೃತ್ತಿಯ ಐಪಿಎಲ್​​ನಲ್ಲಿ ಡೈನಾಮಿಕ್​​​ ಬೌಲಿಂಗ್​ನಿಂದಲೇ ಗಮನಾರ್ಹ ಪ್ರದರ್ಶನ ನೀಡಿದ್ದ ರಾಜಸ್ಥಾನ್ ರಾಯಲ್ಸ್​ ತಂಡದ ಎಡಗೈ ವೇಗಿ ಚೇತನ್ ಸಕಾರಿಯಾ, ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ.

ಶ್ರೀಲಂಕಾ ವಿರುದ್ಧ ನಡೆಯುವ ಭಾರತದ ಏಕದಿನ ಮತ್ತು ಟಿ20 ತಂಡಕ್ಕೆ ಆಯ್ಕೆಯಾಗಿರುವ ಚೇತನ್​, ತಂದೆಯನ್ನ ನೆನೆದು ಭಾವುಕರಾಗಿದ್ದಾರೆ. ಅರ್ಧಕ್ಕೆ ನಿಂತ ಐಪಿಎಲ್​ನಿಂದಾಗಿ ಮನೆಗೆ ತೆರಳಿದ ಕೆಲವೇ ದಿನಗಳಲ್ಲಿ ಚೇತನ್​ ತಂದೆ, ಕೋವಿಡ್​ಗೆ ಬಲಿಯಾದ್ರು.

ಇದಾಗಿ ಒಂದು ತಿಂಗಳಲ್ಲೇ, ಚೇತನ್​ ನ್ಯಾಷನಲ್​ ಟೀಮ್​ಗೆ ಸೆಲೆಕ್ಟ್​ ಆಗಿದ್ದಾರೆ. ಕಿರಿಯ ಸಹೋದರನನ್ನ ಕಳೆದುಕೊಂಡು ಕಷ್ಟದಲ್ಲಿದ್ದ ಸಕಾರಿಯಾರನ್ನ, ರಾಜಸ್ಥಾನ್ ರಾಯಲ್ಸ್​​ 1.20 ಕೋಟಿಗೆ ಖರೀದಿಸಿತು. ಇಲ್ಲಿ ತೋರಿದ ಅದ್ಭುತ ನಿರ್ವಹಣೆಯಿಂದಾಗಿ, ಬಿಸಿಸಿಐ ಮಣೆ ಹಾಕಿದೆ.

ಇನ್ನು ತಂಡಕ್ಕೆ ಆಯ್ಕೆಯಾಗಿರೋದ್ರ ಬಗ್ಗೆ ಮಾತಾಡಿರೋ ಸಕಾರಿಯಾ, ಈ ಸಂದರ್ಭದಲ್ಲಿ ತಂದೆ ಬದುಕಿರಬೇಕಿತ್ತು ಎಂದು ಭಾವುಕರಾಗಿದ್ದಾರೆ. ಭಾರತಕ್ಕಾಗಿ ಆಡಬೇಕೆಂದು ತಂದೆ ಬಯಸಿದ್ದರು ಎಂದ ಸಕಾರಿಯಾ, ನೆಟ್​​ ಬೌಲರ್ ​ಆಗಿ ಚಾನ್ಸ್​​ ಸಿಗುತ್ತೆ ಅಂದುಕೊಂಡಿದ್ದೆ. ಆದರೆ ತಂಡದಲ್ಲೇ ಅವಕಾಶ ಸಿಕ್ಕಿದೆ. ಇದರಿಂದ ನನಗೆ ತುಂಬಾ ಸಂತಸವಾಗ್ತಿದೆ ಎಂದಿದ್ದಾರೆ.

The post ಟೀಮ್ ಇಂಡಿಯಾಗೆ ಎಂಟ್ರಿ.. ತಂದೆಯನ್ನ ನೆನೆದು ಭಾವುಕರಾದ ಸಕಾರಿಯಾ appeared first on News First Kannada.

Source: newsfirstlive.com

Source link