ಟೀಮ್ ಇಂಡಿಯಾಗೆ ನೆಟ್ಸ್​​ನಲ್ಲಿ ಬೌಲ್ ಮಾಡಲು ಜೆ&ಕೆ ಎಕ್ಸ್​ಪ್ರೆಸ್​  ಮಲಿಕ್​ರನ್ನು ಯುಎಈಯಲ್ಲೇ ಉಳಿಯುವಂತೆ ಹೇಳಲಾಗಿದೆ | J&K express Umarn Malik asked to stay back in UAE as net bowler to Team India

ಟೀಮ್ ಇಂಡಿಯಾಗೆ ನೆಟ್ಸ್​​ನಲ್ಲಿ ಬೌಲ್ ಮಾಡಲು ಜೆ&ಕೆ ಎಕ್ಸ್​ಪ್ರೆಸ್​  ಮಲಿಕ್​ರನ್ನು ಯುಎಈಯಲ್ಲೇ ಉಳಿಯುವಂತೆ ಹೇಳಲಾಗಿದೆ

ಉಮ್ರಾನ್ ಮಲಿಕ್

ಕ್ರಿಕೆಟ್​ನಲ್ಲಿ ಪ್ರತಿಭೆಯಿದ್ದರೆ ಮನ್ನಣೆ ಸಿಗುತ್ತದೆ ಅನ್ನೋದಿಕ್ಕೆ ಜಮ್ಮು ಮತ್ತು ಕಾಶ್ಮೀರ ವೇಗದ ಬೌಲರ್ ಉಮ್ರಾನ್ ಮಲಿಕ್ ಲೇಟೆಸ್ಟ್ ಸಾಕ್ಷಿ. ಈಗ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿರುವ ಜಾರಯಲ್ಲಿರುವ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ ಪರ ಆಡಿದ ಮಲಿಕ್ ಅವರನ್ನು ಎಸ್ ಆರ್ ಹೆಚ್ ಟೂರ್ನಿಯಿಂದ ಹೊರಬಿದ್ದರೂ ಅಲ್ಲೇ ಉಳಯವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೇಳಿದೆ. ಐಪಿಎಲ್ ಬಳಿಕ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತೀಯ ತಂಡದ ನೆಟ್ಸ್​​​ನಲ್ಲಿ ಬೌಲ್ ಮಾಡಲು ಮಲಿಕ್ಗೆ ತಿಳಿಸಲಾಗಿದೆ. ಹೈದರಾಬಾದ್ ತಂಡದ ಪರ ಗಮನ ಸೆಳೆಯುವ ರೀತಿಯಲ್ಲಿ ಪಾದಾರ್ಪಣೆ ಮಾಡಿದ ಮಲಿಕ್, 150 ಕಿಮೀ/ಗಂಟೆಗಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡಿ ಕ್ರಿಕೆಟ್ ವಲಯದ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ.

ಕೇವಲ ಎರಡು ತಿಂಗಳ ಅವಧಿಯಲ್ಲಿ ಅವರ ಬದುಕು ಬದಲಾಗಿಬಿಟ್ಟಿದೆ. ಈ ಬಾರಿಯ ಐಪಿಎಲ್ ಸೀಸನಲ್ಲಿ ಆಡುವ ಮೊದಲು ಕೇವಲ ಎರಡು ದೇಶೀಯ ಪಂದ್ಯಗಳನ್ನು ಮಾತ್ರ ಆಡಿದ್ದ 21 ವರ್ಷ ವಯಸ್ಸಿನ ಮಲಿಕ್ ತನ್ನ ವೇಗದ ಮೂಲಕ ಟೀಮ್ ಇಂಡಿಯ ನಾಯಕ ವಿರಾಟ್ ಮೇಲೆ ಅದೆಷ್ಟು ಗಾಢ ಫ್ರಭಾವ ಬೀರಿದ್ದಾರೆಂದರೆ, ಅವರು ಬಿಸಿಸಿಐಗೆ ಹೇಳಿ ಮಲಿಕ್​ರನ್ನು ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಉಳಿಸಿಕೊಂಡಿದ್ದಾರೆ. ಈ ಸೀಸನಲ್ಲಿ ಸತತವಾಗಿ 150 ಕಿಮೀ/ಗಂ ವೇಗದಲ್ಲಿ ಬೌಲ್ ಮಾಡಿದ ಮಲಿಕ್ ಅವರ ಒಂದು ಎಸೆತ 153 ಕಿಮೀ/ ಗಂ ಆಗಿತ್ತು. ಅಂದಹಾಗೆ, ಮಲಿಕ್ ತಂದೆ ಒಬ್ಬ ಹಣ್ಣಿನ ವ್ಯಾಪಾರಿಯಾಗಿದ್ದಾರೆ.

ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತಾಡಿರುವ ಎಸ್ ಆರ್ ಹೆಚ್ ಟೀಮಿನ ಅಧಿಕಾರಿಯೊಬ್ಬರು, ‘ಹೌದು, ಮಲಿಕ್ ಗೆ ಇಲ್ಲೇ ಉಳಿಯವಂತೆ ಹೇಳಲಾಗಿದೆ. ನೆಟ್ ಬೌಲರ್ ಆಗಿ ಅವರು ಇಂಡಿಯ ಬಯೋ-ಬಬಲ್ ಸೇರಲಿದ್ದಾರೆ,’ ಅಂತ ಹೇಳಿದ್ದಾರೆ.

ಈ ಬಾರಿಯ ಐಪಿಎಲ್ ಸೀಸನಲ್ಲಿ ಪಾದಾರ್ಪಣೆ ಮಾಡಿದ ಮಲಿಕ್ ಮೂರು ಪಂದ್ಯಗಳಿಂದ 2 ವಿಕೆಟ್ ಪಡೆದರು. ಎಸ್ ಆರ್ ಹೆಚ್ ಟೀಮ್ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನ ಗಳಿಸಿ ಟೂರ್ನಿಯಿಂದ ನಿರ್ಗಮಿಸಿತು.

ವಿರಾಟ್ ಕೊಹ್ಲಿ ಅವರು ಮಲಿಕ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘ಈ ಟೂರ್ನಮೆಂಟ್ ಪ್ರತಿವರ್ಷ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುತ್ತದೆ, ಯುವ ಬೌಲರನೊಬ್ಬ 150 ಕಿಮೀ/ ಗಂ ಬೌಲ್ ಮಾಡುವುದನ್ನು ನೋಡುತ್ತಿದ್ದರೆ ಸಂತೋಷವಾಗುತ್ತದೆ. ಇಂಥ ಪ್ರತಿಭಾವಂತರ ಪ್ರಗತಿಯನ್ನು ನಾವು ಗಮನಿಸುತ್ತಿರಬೇಕು,’ ಅಂತ ಕಳೆದ ವಾರ ಕೊಹ್ಲಿ ಹೇಳಿದ್ದರು.

‘ಸಾಕಷ್ಟು ಸಂಖ್ಯೆಯಲ್ಲಿ ವೇಗದ ಬೌಲರ್ಗಳು ಬೆಳಕಿಗೆ ಬರುತ್ತಿರುವುದು ಭಾರತೀಯ ಕ್ರಿಕೆಟ್ಕೆ ಶುಭ ಸೂಚನೆಯಾಗಿದೆ. ಮಲಿಕ್ ನಂಥ ಟ್ಯಾಲೆಂಟ್ ಕಣ್ಣಿಗೆ ಬಿದ್ದಾಗ ಸಹಜವಾಗೇ ಅವರ ಮೇಲೆ ಗಮನ ಕೇಂದ್ರೀಕೃತಗೊಳ್ಳುತ್ತದೆ. ಅವರ ಪ್ರತಿಭೆ ಏನು ಅನ್ನೋದು ಐಪಿಎಲ್ನಲ್ಲಿ ಗೊತ್ತಾಗಿರುವುದರಿಂದ ಇನ್ನು ಮುಂದೆ ಅದನ್ನು ಇಮ್ಮಡಿಗೊಳಿಸುವ ಪ್ರಯತ್ನಗಳಾಗಬೇಕು,’ ಎಂದು ಕೊಹ್ಲಿ ಹೇಳಿದ್ದರು.

ಟಿ20 ವಿಶ್ವಕಪ್​​​​ನಲ್ಲಿ ಭಾರತ ತನ್ನ ಅಭಿಯಾನವನ್ನು ಅಕ್ಟೋಬರ್ 24 ರಂದು ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯವನ್ನು ಆಡುವ ಮೂಲಕ ಆರಂಭಿಸಲಿದೆ.

ಇದನ್ನೂ ಓದಿ:  IPL 2021: ಟಿ. ನಟರಾಜನ್​ಗೆ ಕೊರೊನಾ ಸೋಂಕು; ಬದಲಿಯಾಗಿ ತಂಡ ಸೇರಿದ ಜಮ್ಮು ಮತ್ತು ಕಾಶ್ಮೀರದ ಯುವ ವೇಗಿ

TV9 Kannada

Leave a comment

Your email address will not be published. Required fields are marked *