ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಅಂದ್ರೆ, ಕಣ್ಮುಂದೆ ಬರೋದು ವಿರಾಟ್ ಕೊಹ್ಲಿ, ರೋಹಿತ್​ ಶರ್ಮಾ, ಕೆ.ಎಲ್.ರಾಹುಲ್, ಶಿಖರ್ ಧವನ್ ಇತ್ಯಾದಿ.. ಆದ್ರೆ ಟೀಮ್ ಇಂಡಿಯಾದ ಪ್ರಮುಖ ಆಟಗಾರರನ್ನೇ ಯಂಗ್​ಸ್ಟಾರ್​ಗಳೂ ರಿಪ್ಲೇಸ್​ ಮಾಡೋಕೆ ರೆಡಿಯಾಗಿದ್ದಾರೆ. ಅದ್ರಲ್ಲೂ ಸ್ಟಾರ್​ ಆಟಗಾರರನ್ನೇ ರಿಪ್ಲೇಸ್ ಮಾಡೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ.

ಟೀಮ್ ಇಂಡಿಯಾ, ಮೂರು ಫಾರ್ಮೆಟ್​ನ ಗ್ರೇಟೆಸ್ಟ್ ಆ್ಯಂಡ್ ಸ್ಟ್ರಾಂಗೆಸ್ಟ್ ಟೀಮ್.. ಇದಕ್ಕೆ ಬೆಸ್ಟ್ ಎಕ್ಸಾಂಪಲ್, ಸದ್ಯ ಟೀಮ್ ಇಂಡಿಯಾ ಒಂದೇ ಸಮಯದಲ್ಲಿ ಎರಡು ವಿಭಿನ್ನ ಸರಣಿಗಳಿಗೆ ವಿದೇಶಕ್ಕೆ ತೆರಳಿರುವುದು. ಜೊತೆಗೆ ಲಂಕಾದಲ್ಲಿ ಯಂಗಿಸ್ತಾನ್ ಗೆದ್ದು ಬೀಗ್ತಿರುವುದು..!

ಹೌದು..! ಲಂಕಾ ಪ್ರವಾಸದಲ್ಲಿ ಶುಭಾರಂಭ ಮಾಡಿರುವ ಧವನ್ ನೇತೃತ್ವದ ಯಂಗಿಸ್ತಾನ್, ಆಡಿರುವ ಮೊದಲೆರೆಡು ಪಂದ್ಯಗಳಲ್ಲೇ ಜಬರ್ದಸ್ತ್​ ಪರ್ಫಾಮೆನ್ಸ್​ ನೀಡಿದೆ. ಅದ್ರಲ್ಲೂ ಯಂಗ್​ಸ್ಟಾರ್​ಗಳ ಆಟವನ್ನಂತೂ ಇಡೀ ವಿಶ್ವವೇ ಕೊಂಡಾಡ್ತಿದೆ. ಆದ್ರೆ ಈ ನಡುವೆ ಇದೇ ಯಂಗ್ ಸ್ಟಾರ್​ಗಳು ಟೀಮ್ ಇಂಡಿಯಾದ ಸ್ಟಾರ್​ ಆಟಗಾರರನ್ನೇ ಸೈಡ್​ಲೈನ್ ಮಾಡೋಕೆ ರೆಡಿಯಾಗಿದ್ದಾರೆ..!

ಧವನ್, ಕೊಹ್ಲಿ, ರಾಹುಲ್​ ಸ್ಥಾನಕ್ಕೆ ಕುತ್ತು..?
ಸದ್ಯ ವೈಟ್​​ಬಾಲ್ ಕ್ರಿಕೆಟ್​ನಲ್ಲಿ ವೃತ್ತಿ ಜೀವನದ ಅಂತ್ಯಕ್ಕೆ ಬಂದು ತಲುಪಿರುವ ಶಿಖರ್​ ಧವನ್ ಸ್ಥಾನ, ಆಗೋ ಹೀಗೋ ಎನ್ನುವಂತಿದೆ. ನಿಜಾ..! ಆದ್ರೆ ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಟೀಮ್ ಇಂಡಿಯಾದ ನಾಯಕ ವಿರಾಟ್ ಸ್ಥಾನವನ್ನೇ ಈಗ ರಿಪ್ಲೇಸ್​ ಮಾಡುವಂತ ಯಂಗಸ್ಟರ್,​ ಟೀಮ್ ಇಂಡಿಯಾಕ್ಕೆ ಸಿಕ್ಕಿದ್ದಾನೆ. ಅಷ್ಟೇ ಅಲ್ಲ..! ಇದರ ಜೊತೆಗೆ ಸ್ಟೈಲಿಷ್ ಬ್ಯಾಟ್ಸ್​ಮನ್ ಕೆ.ಎಲ್.ರಾಹುಲ್​ ಸ್ಥಾನವನ್ನ ಮತ್ತಷ್ಟು ಸಮರ್ಥವಾಗಿ ತುಂಬೋಕೆ ಯಂಗ್​ ಸ್ಟಾರ್​ಗಳು ಸೈ ಅಂತಿದ್ದಾರೆ..!

ಸ್ಟಾರ್​ಗಳಿಗೆ ಸೆಡ್ಡು ಹೊಡಿಯೋ ತ್ರಿಮೂರ್ತಿಗಳ್ಯಾರು..?
ವಿರಾಟ್ ಕೊಹ್ಲಿ, ಶಿಖರ್ ಧವನ್, ಕೆ.ಎಲ್.ರಾಹುಲ್​​ಗೆ ಸೆಡ್ಡು ಹೊಡೀತಿರೋ ಯುವ ಆಟಗಾರರು ಪೃಥ್ವಿ ಶಾ, ಇಶಾನ್ ಕಿಶಾನ್, ಸೂರ್ಯಕುಮಾರ್ ಯಾದವ್.. ಈ ಮೂವರೇ ಶಾರ್ಟ್​ ಫಾರ್ಮೆಟ್​ನಲ್ಲಿ ಕೊಹ್ಲಿ, ಧವನ್, ರಾಹುಲ್​ನ ರಿಪ್ಲೇಸ್ ಮಾಡೋ ಸಾಮರ್ಥ್ಯ ಹೊಂದಿರುವವರಾಗಿದ್ದಾರೆ.. ಇದಕ್ಕೆ ಕಾರಣ ಇವರ ಫಿಯರ್​ಲೆಸ್ ಬ್ಯಾಟಿಂಗ್ ಜೊತೆಗೆ ಸ್ಲಾಟ್​ಗೆ ತಕ್ಕಂತೆ ಗೇರ್​ ಚೇಂಜ್​ ಮಾಡುತ್ತಾ, ಗೇಮ್​ ಚೇಂಜಿಂಗ್ ಪ್ಲೇಯರ್​ಗಳಾಗಿ ಗುರುತಿಸಿಕೊಂಡಿರುವುದು..!

ಒಟ್ನಲ್ಲಿ ಸದ್ಯ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇಫ್ ಎನಿಸಿದರು. ಫ್ಲಾಫ್ ಶೋ ನೀಡಿದರೆ, ವಿಶ್ವಕಪ್​​ ಬಳಿಕ ಎತ್ತಂಗಡಿ ಗ್ಯಾರಂಟಿ ಅನ್ನೋದು ಮರೆಯುವಂತಿಲ್ಲ…

The post ಟೀಮ್ ಇಂಡಿಯಾದಲ್ಲಿ ಯುವ ಪಡೆ ಆರ್ಭಟ..! ಸ್ಥಾನ ಉಳಿಸಿಕೊಳ್ಳಲು ಸೀನಿಯರ್ಸ್ ಪರದಾಟ..! appeared first on News First Kannada.

Source: newsfirstlive.com

Source link