ಯುಜುವೇಂದ್ರ ಚಹಲ್, ಟೀಮ್ ಇಂಡಿಯಾದ ಮ್ಯಾಜಿಕಲ್ ಸ್ಪಿನ್ನರ್… ತನ್ನ ಗೂಗ್ಲಿ ಎಸೆತಗಳಿಂದಲೇ ಎದುರಾಳಿ ಬ್ಯಾಟ್ಸ್​ಮನ್​ಗಳಿಗೆ ನಿದ್ದೆಯಲ್ಲೂ ಕಾಡುತ್ತಿದ್ರು. ಕೈ ಜಾರಿದ್ದ ಪಂದ್ಯಗಳನ್ನ ಕ್ಷಣಾರ್ಧದಲ್ಲೇ ಟೀಮ್ ಇಂಡಿಯಾ ಜೋಳಿಗೆಗೆ ಬೀಳುವಂತೆ ಮಾಡುತ್ತಿದ್ದ ಚಹಲ್, ಟೀಮ್ ಇಂಡಿಯಾಕ್ಕೆ ಎಂಟ್ರಿಕೊಟ್ಟ ಅಲ್ಪ ಸಮಯದಲ್ಲೇ, ಮ್ಯಾಚ್ ವಿನ್ನರ್ ಆಗಿ ಗುರುತಿಸಿಕೊಂಡರು. ಆದ್ರೆ ಅದ್ಯಾಕೋ ಚುಟಕು ಕ್ರಿಕೆಟ್​​ನಲ್ಲಿ ಈ ಮ್ಯಾಚ್​​ ವಿನ್ನರ್​, ಈಗ ಠುಸ್ ಆಗ್ತಿದ್ದಾರೆ..

2019ರಿಂದ ವೈಫಲ್ಯದ ಹಾದಿಯಲ್ಲಿ ಚಹಲ್ ..!
ಚುಕುಟು ಕ್ರಿಕೆಟ್​​ನಲ್ಲಿ ಬ್ಯಾಟ್ಸ್​ಮನ್​ಗಳಿಗೆ ಚಳ್ಳೆಹಣ್ಣು ತಿನ್ನುಸುತ್ತಿದ್ದ ಚಹಲ್, ಎಕಾನಮಿ ಸ್ಪೆಲ್​ ಜೊತೆಗೆ ವಿಕೆಟ್​​ ಬೇಟೆಗಾರ. ಆದ್ರೀಗ ಈ ವಿಕೆಟ್​ ಟೇಕರ್​ ಬೌಲರ್, ದುಬಾರಿ ಬೌಲರ್​ ಆಗಿ ಮಾರ್ಪಟ್ಟಿದ್ದಾರೆ. ವಿಕೆಟ್​​ ಪಡೆಯೋಕೆ ಪರದಾಡುತ್ತಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಆಸ್ಟ್ರೇಲಿಯಾ ಪ್ರವಾಸ, ತವರಿನ ಇಂಗ್ಲೆಂಡ್ ಸರಣಿ ಹಾಗೂ ಐಪಿಎಲ್​​ ಟೂರ್ನಿ…

ಹೌದು..! 2019ರ ತನಕ ಟೀಮ್ ಇಂಡಿಯಾದ ವಿಕೆಟ್​ ಟೇಕಿಂಗ್ ಬೌಲರ್ ಎನಿಸಿಕೊಂಡ ಯುಜಿ, 2019ರ ಬಳಿಕ ವಿಕೆಟ್​ ಪಡೆಯಲು ಹರ ಸಾಹಸವನ್ನೇ ಮಾಡ್ತಿದ್ದಾರೆ. 2019ರಿಂದ ಕೇವಲ 21 ಟಿ20 ಪಂದ್ಯಗಳನ್ನಾಡಿರುವ ಚಹಲ್, 9.14ರ ಎಕಾನಮಿಯಲ್ಲಿ ರನ್​ ನೀಡಿ, 18 ವಿಕೆಟ್‌ ಪಡೆಯುವಲ್ಲಿ ಮಾತ್ರ ಪಡೆದಿದ್ದಾರೆ. ಅದ್ರಲ್ಲೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಜಡೇಜಾ ಬದಲಿಗೆ ಕನ್ಕಷನ್ ಪ್ಲೇಯುರ್​ ಆಗಿ ಕಣಕ್ಕಿಳಿದು 3 ವಿಕೆಟ್​ ಕಬಳಿದ್ದು ಬಿಟ್ಟರೇ, ಹೇಳಿಕೊಳ್ಳುವ ಪ್ರದರ್ಶನ ಮೂಡಿಬಂದಿಲ್ಲ.. ಇಷ್ಟೇ ಅಲ್ಲ..! ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ ದುಬಾರಿಯಾಗಿದ್ದೇ ಹೆಚ್ಚು.

ಮಿಡಲ್ ಓವರ್‌ಗಳಲ್ಲಿ ವಿಕೆಟ್ ಪಡೆಯದ ಚಹಲ್, ರನ್​ ವೇಗಕ್ಕೂ ಕಡಿವಾಣ ಹಾಕುತ್ತಿಲ್ಲ. ಇದು ಟೀಮ್ ಇಂಡಿಯಾವನ್ನ ಆತಂಕಕ್ಕೆ ದೂಡಿದೆ. ಹಾಗಾಗಿಯೇ ಈಗ ಚಹಲ್​​​ಗೆ ಪ್ರತಿಸ್ಪರ್ಧಿಯೊಬ್ಬ ಹುಟ್ಟಿಕೊಂಡಿದ್ದಾರೆ.

ಚಹಲ್​ಗೆ ಪೈಪೋಟಿ ನೀಡುತ್ತಿದ್ದಾನೆ ರಾಹುಲ್ ಚಹರ್..!
ಯೆಸ್..! ಯಜುವೇಂದ್ರ ಚಹಲ್​ ಜೊತೆ ಪೈಪೋಟಿಗೆ ಇಳಿದಿರೋದು, ಬೇಱರು ಅಲ್ಲ..! ರಾಜಸ್ತಾನದ ಮೂಲದ ಲೆಗ್ ಸ್ಪಿನ್ನರ್ ರಾಹುಲ್ ಚಹರ್.. ಚುಟುಕು ಕ್ರಿಕೆಟ್​​ನಲ್ಲಿ ಜಾದೂ ಮಾಡ್ತಿರುವ ಈ ಯಂಗ್ ಲೆಗ್​ ಸ್ಪಿನ್ನರ್, ಸದ್ಯ ಟೀಮ್ ಇಂಡಿಯಾದ ಲೆಗ್​ ಸ್ಪಿನ್ನರ್​​ ಆಯ್ಕೆಯಲ್ಲಿ ಮುಂಚೂಣಿಯಲ್ಲಿ ನಿಂತಿದ್ದಾರೆ. ದೇಶಿ ಟೂರ್ನಿಗಳಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿರುವ ರಾಹುಲ್ ಚಹರ್, ಅನುಭವಿ ಲೆಗ್​​ ಸ್ಪಿನ್ನರ್ ಯುಜುವೇಂದ್ರ ಚಹಲ್​​ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾನೆ.

ಐಪಿಎಲ್ ಟೂರ್ನಿಗಳಲ್ಲಿ ರಾಹುಲ್ ಚಹರ್ ಮ್ಯಾಜಿಕ್..!
ರಾಯಲ್ ಚಾಲೆಂಜರ್ಸ್ ಪರ ಅನುಭವಿ ಯುಜುವೇಂದ್ರ ಚಹಲ್ ಮ್ಯಾಜಿಕ್ ಮಾಡಲಿಲ್ಲ. ಆದ್ರೆ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿದಿದ್ದ ರಾಹುಲ್ ಚಹರ್, ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದರು. ಇಷ್ಟೇ ಅಲ್ಲ..! ಕಳೆದೆರೆಡು ವರ್ಷಗಳಿಂದ ಮುಂಬೈ ಇಂಡಿಯನ್ಸ್​ ಪರ ಸ್ಥಿರ ಪ್ರದರ್ಶನ ನೀಡುತ್ತಿರುವ ರಾಹುಲ್ ಚಹರ್, ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್​ ಮೂಲಕ ಆಯ್ಕೆಗಾರರ ಗಮನವನ್ನೂ ಸೆಳೆದಿದ್ದಾನೆ. ಇನ್ನೂ ಪ್ರಸಕ್ತ ವರ್ಷ ಆಡಿದ 7 ಇನ್ನಿಂಗ್ಸ್​​ಗಳಿಂದ 11 ವಿಕೆಟ್ ಉರುಳಿಸಿದ ಚಹರ್​, 7.21ರ ಏಕಾನಮಿಯಲ್ಲಿ ರನ್ ನೀಡಿದ್ದಾರೆ.

ದೇಶಿ ಕ್ರಿಕೆಟ್​ನಲ್ಲೂ ರಾಹುಲ್ ಚಹರ್ ಜಾದೂ..!
ರಾಜಸ್ಥಾನ್​​ನ ಈ ರಾಹುಲ್​ ಚಹರ್, ಐಪಿಎಲ್​ನಲ್ಲಿ ಮಾತ್ರವೇ ಅಲ್ಲ.. ದೇಶಿ ಕ್ರಿಕೆಟ್​​ನಲ್ಲೂ ಕಮಾಲ್ ಮಾಡ್ತಿದ್ದಾರೆ. 2018-19ರ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ 9 ಪಂದ್ಯಗಳಿಂದ 20 ವಿಕೆಟ್ ಉರುಳಿಸಿದ್ದ ಚಹರ್, 4.28ರ ಏಕನಾಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಇನ್ನೂ 2019-20ರ ಸೈಯದ್​ ಮುಷ್ತಾಕ್ ಆಲಿ ಟೂರ್ನಿಯಲ್ಲಿ 5 ಪಂದ್ಯಗಳಿಂದ 11 ವಿಕೆಟ್ ಉರುಳಿಸಿ, 6.55ರ ಏಕಾನಮಿಯಲ್ಲಿ ಮಾತ್ರವೇ ರನ್ ನೀಡಿದ್ದಾರೆ. ಎದುರಾಳಿಗಳ ರನ್​​ ಗಳಿಕೆಗೆ ಕಡಿವಾಣ ಹಾಕಿರುವ ಚಹರ್, ವಿಕೆಟ್ ಟೇಕಿಂಗ್ ಬೌಲರ್ ಅಂತಾನೂ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಆಯ್ಕೆ ಸಮಿತಿಯ ಮೊದಲ ಆಯ್ಕೆಯಾಗಿರುವ ಚಹರ್, ಈಗ ಯಜುವೇಂದ್ರ ಚಹಲ್​​​ಗೆ ಪ್ರತಿಸ್ಪರ್ಧಿಯಾಗಿ ನಿಂತಿದ್ದಾರೆ.

ಎಚ್ಚೆತ್ತುಕೊಳ್ಳದಿದ್ದರೆ ಚಹಲ್​​​​ಗೆ ಕಾದಿದೆ ಕಂಟಕ..!
V.O – ಹೌದು..! ಸದ್ಯ ಮೂರು ವರ್ಷಗಳಿಂದ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿರುವ ಚಹಲ್, ಮುಂದಿನ ದಿನಗಳಲ್ಲಿ ಎಚ್ಚೆತ್ತುಕೊಳ್ಳದಿದ್ದರೇ ಅಪಾಯ ಗ್ಯಾರಂಟಿ. ಈಗಾಗಲೇ ಟೀಮ್ ಇಂಡಿಯಾಕ್ಕೆ ಹಲವು ಯವ ಆಟಗಾರರು ಎಂಟ್ರಿ ನೀಡುತ್ತಿದ್ದಾರೆ. ಸಿಕ್ಕ ಒಂದೊಂದು ಅವಕಾಶದಲ್ಲೇ ಅಕ್ಷರ್​ ಪಟೇಲ್, ಸುಂದರ್ ಸದ್ಬಳಕೆ ಮಾಡಿಕೊಂಡಿದ್ದಾರೆ. ಇವರ ಜೊತೆಗೆ ಈಗ ರಾಹುಲ್ ಚಹರ್​​ನಿಂದಲೂ ತೀವ್ರ ಪೈಪೋಟಿಯೇ ಏರ್ಪಟ್ಟಿದೆ. ಇಂಥಹ ಸಮಯದಲ್ಲಿ ಚಹಲ್ ಫಾರ್ಮ್​ಗೆ ಮರಳದೇ ಇದ್ರೆ, ಗೇಟ್​ಪಾಸ್​ ಪಡೆಯೋದು ಪಕ್ಕಾ…

ಒಟ್ನಲ್ಲಿ ಸದ್ಯ ಟೀಮ್ ಇಂಡಿಯಾಕ್ಕೆ ಗುಣಮಟ್ಟದ ಲೆಗ್​ ಸ್ಪಿನ್ನರ್​​ನ ಅಗತ್ಯವಿದ್ದು, ಈಗ ಚಹಲ್, ಎಚ್ಚೆತ್ತು ಕೊಳ್ತಾರಾ..? ಚಹರ್​ಗೆ ದಾರಿ ಮಾಡಿಕೊಡ್ತಾರಾ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.

The post ಟೀಮ್ ಇಂಡಿಯಾದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಲೆಗ್​ಸ್ಪಿನ್ನರ್​ ಚಹಲ್..! appeared first on News First Kannada.

Source: newsfirstlive.com

Source link