ಟೀಮ್​ ಇಂಡಿಯಾದ ಬಹು ಕಾಲದ ಸಮಸ್ಯೆಗೆ ಪರಿಹಾರ ಸಿಗೋ ಭರವಸೆ ಮೂಡಿದೆ. ಎರಡು ಯಂಗ್​ ವೆಪನ್​ಗಳು ಟೀಮ್​ ಇಂಡಿಯಾದ ವೀಕ್​ನೆಸ್​​​​ಗೆ ಉತ್ತರವಾಗಿ ಕಾಣಿಸಿಕೊಂಡಿದ್ದಾರೆ. ಸಮಸ್ಯೆ ಏನು..? ಅದಕ್ಕೆ ಸಿಕ್ಕಿರೋ ಪಾಸಿಟಿವ್​ ಪರಿಹಾರ ಏನು..?

ಒಬ್ಬ ಸಮರ್ಥ ಬೌಲಿಂಗ್​ ಆಲ್​ರೌಂಡರ್​ ಕೊರತೆ ಟೀಮ್​ ಇಂಡಿಯಾವನ್ನ, ಬಹು ವರ್ಷಗಳಿಂದಲೇ ಕಾಡ್ತಿದೆ. ಹಲವು ಮಹತ್ವದ ಪಂದ್ಯಗಳಲ್ಲಿ ಇದು ಸೋಲಿಗೂ ಕಾರಣವಾಗಿದೆ. ಇತ್ತೀಚೆಗೆ ಮುಕ್ತಾಯವಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಸೋಲಿಗೂ ಈ ವೀಕ್​ನೆಸ್​​​ ಪ್ರಮುಖ ಕಾರಣವಾಯ್ತು. ಸ್ವಿಂಗ್​, ಪೇಸ್​​ನೊಂದಿಗೆ ಬೌಲಿಂಗ್​​ ಮಾಡಬಲ್ಲ, ಲೋವರ್ ಡೌನ್​ ದ​​ ಆರ್ಡರ್​​ನಲ್ಲಿ ಸರಾಗವಾಗಿ ರನ್​ ಕಲೆ ಹಾಕಬಲ್ಲ ಆಟಗಾರನ ಕೊರತೆ ತಂಡವನ್ನ ಕಾಡಿತು.

ಈ ಸಮಸ್ಯೆಗೆ ಪರಿಹಾರ ಏನು?

ಈ ಪ್ರಶ್ನೆಗೆ ಕ್ರಿಕೆಟ್​​ ವಲಯ ಇಷ್ಟು ದಿನ ಹಾರ್ದಿಕ್​ ಪಾಂಡ್ಯ ಕಡೆ ಬೊಟ್ಟು ಮಾಡ್ತಿತ್ತು. ಆದ್ರೆ, ಬೌಲಿಂಗ್​ ಫಿಟ್​ನೆಸ್​​ ಕಂಡುಕೊಳ್ಳುವಲ್ಲಿ ಪಾಂಡ್ಯ ಹಿನ್ನಡೆ ಅನುಭವಿಸ್ತಿದ್ದಾರೆ. ಲಂಕಾ ವಿರುದ್ಧದ 2ನೇ ಏಕದಿನದಲ್ಲೂ ಹಾರ್ದಿಕ್​ರನ್ನ ಹಳೇ ಗಾಯ ಕಾಡಿತು. ಆದ್ರೆ ಇದೇ ಪಂದ್ಯ ಭಾರತದ ವೀಕ್​​ನೆಸ್​​ಗೆ ಪಾಸಿಟಿವ್​ ಪರಿಹಾರವನ್ನೂ ನೀಡ್ತು. ಆ ಉತ್ತರವೇ ದೀಪಕ್​ ಚಹರ್​.

ತಂಡ ಸೋತೇ ಬಿಡ್ತು ಅನ್ನೋ ಸಂದರ್ಭದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೀಪಕ್​​, ಒತ್ತಡಕ್ಕೆ ಒಳಗಾಗದೇ ಬ್ಯಾಟ್​ ಬೀಸಿದ್ರು. ದೀಪಕ್​ ಚಹರ್​ ಇನ್ನಿಂಗ್ಸ್​​ನಲ್ಲಿ ತಾಳ್ಮೆ, ಎಚ್ಚರಿಕೆ, ಗುರಿ ಸೇರಿಸುವ ಛಲ, ಕೆಚ್ಚೆದೆಯ ಹೋರಾಟ ಎಲ್ಲವೂ ಅಡಗಿತ್ತು. ಬ್ಯಾಟಿಂಗ್​ ಮಾತ್ರವಲ್ಲ.. ಬೌಲಿಂಗ್​ನಲ್ಲೂ 2 ವಿಕೆಟ್​ ಕಬಳಿಸಿ ಚಹರ್​ ಮಿಂಚಿದ್ರು. ಇದೇ ಮ್ಯಾನೇಜ್​ಮೆಂಟ್​​ ಲೆವೆಲ್​ನಲ್ಲಿ ಹೊದ ಭರವಸೆ ಮೂಡಿಸಿರೋ ಸಂಗತಿ.

ಮ್ಯಾನೇಜ್​ಮೆಂಟ್ ಗಮನ ಮತ್ಯಾರ ಮೇಲೆ?

ಚಹರ್​ ಮಾತ್ರವಲ್ಲ..!! ಶಾರ್ದೂಲ್​ ಠಾಕೂರ್​ ಮೇಲೂ ಮ್ಯಾನೇಜ್​ಮೆಂಟ್​​​ ಹೆಚ್ಚು ಗಮನವಿಟ್ಟಿದೆ. ಆಸ್ಟ್ರೇಲಿಯಾ ಪ್ರವಾಸದ 4ನೇ ಟೆಸ್ಟ್​ನಲ್ಲಿ ಶಾರ್ದೂಲ್​ ನೀಡಿದ ಪ್ರದರ್ಶನ ಹಾಗಿತ್ತು. ತಂಡ ಸೋಲಿನ ಸುಳಿಗೆ ಸಿಲುಕ್ಕಿದ್ದಾಗ ಕಟ್ಟಿದ ಹೋರಾಟದ ಇನ್ನಿಂಗ್ಸ್​ ವಿರೋಚಿತ ಡ್ರಾಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಇಬ್ಬರು ಯಂಗ್​ವೆಪನ್​ಗಳನ್ನ ಬೌಲಿಂಗ್​ ಆಲ್​​ರೌಂಡರ್​​ ಸಮಸ್ಯೆಗೆ ಸಿಕ್ಕ ಪರಿಹಾರ ಎಂದು ಮ್ಯಾನೇಜ್​ಮೆಂಟ್ ​ಭಾವಿಸಿದೆ. ಮುಂದೆಯೂ ಈ ಇಬ್ಬರೂ ಇದೇ ಟೆಂಪರ್​ಮೆಂಟ್​ ಕಾಯ್ದುಕೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

The post ಟೀಮ್ ಇಂಡಿಯಾದ ಬಹುಕಾಲದ ಸಮಸ್ಯೆಗೆ ಯಂಗ್ ​ವೆಪನ್​ಗಳೇ ಪರಿಹಾರ..? appeared first on News First Kannada.

Source: newsfirstlive.com

Source link