ವೀರೇಂದ್ರ ಸೆಹ್ವಾಗ್​..! ಟೀಮ್​ ಇಂಡಿಯಾಗೆ ಸಿಕ್ಕ ಡೇರ್​ ಡೆವಿಲ್​ ಬ್ಯಾಟ್ಸ್​​ಮನ್​. ಆರಂಭಿಕನಾಗಿ ಕಣಕ್ಕಿಳಿದು ಫಿಯರ್​​ಲೆಸ್​ ಬ್ಯಾಟಿಂಗ್​ ನಡೆಸ್ತಾ ಇದ್ದ ವೀರೂ, ಎದುರಾಳಿಗಳ ಪಾಲಿಗೆ ಕಂಟಕವಾಗಿದ್ರು. ಸೆಹ್ವಾಗ್​ರ ಅಗ್ರೆಸಿವ್​ ಇನ್ನಿಂಗ್ಸ್​​ಗಳು ಎಷ್ಟೋ ಗೆಲುವಿಗೆ, ಕೊಡುಗೆ ನೀಡಿವೆ ಕೂಡ..! ಇದೀಗ ವೀರೂ ಬ್ಯಾಟಿಂಗ್​ ಶೈಲಿಯನ್ನ ಹಾಡಿ ಹೊಗಳಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಕ್ಲೈನ್​ ಮುಷ್ತಾಕ್,​ ಸೆಹ್ವಾಗ್​ ಬ್ಯಾಟಿಂಗ್​ ಶೈಲಿ ಇಡೀ ತಂಡದ ಬ್ಯಾಟಿಂಗ್​ ಮನಸ್ಥಿತಿಯನ್ನೇ ಬದಲಾಯಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಕ್ಲೈನ್ ಮುಷ್ತಾಕ್​ರ ಅಭಿಪ್ರಾಯ ಸತ್ಯವೂ ಹೌದು..! ಟೀಮ್​ ಇಂಡಿಯಾ ಈಗನ ಓಪನರ್​​ಗಳಾದ ಶಿಖರ್​ ಧವನ್​, ರೋಹಿತ್​ ಶರ್ಮಾ, ಶುಭ್​ಮನ್​ ಗಿಲ್​, ಕೆ.ಎಲ್​ ರಾಹುಲ್​ ಇವರೆಲ್ಲರ ಬ್ಯಾಟಿಂಗ್​ ಶೈಲಿ, ಮತ್ತಷ್ಟು ಅಗ್ರೆಸಿವ್​ ಸ್ವರೂಪಕ್ಕೆ ಹೋಗಿರೋದು ಸ್ಪಷ್ಟವಾಗಿ ಕಾಣುತ್ತೆ. ಕೇವಲ ಆರಂಭಿಕರು ಮಾತ್ರವಲ್ಲ..! ತಂಡದ ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್​ಗಳು ಫಿಯರ್​​ಲೆಸ್​ ಅಪ್ರೋಚ್​​ ಮಾಡ್ತಿದ್ದಾರೆ. ಇದರಲ್ಲಿ ಕೆಲ ಮಟ್ಟಿಗಾದ್ರೂ, ವೀರೂ ಪ್ರಭಾವ ಇರೋದನ್ನ ಅಲ್ಲಗಳೆಯುವಂತಿಲ್ಲ..!

ವೀರೂ ಟೀಮ್​ ಇಂಡಿಯಾ ಬ್ಯಾಟಿಂಗ್​ ಅಪ್ರೋಚ್​ ಬದಲಾಯಿಸಿದ್ರು ಅನ್ನೋದು ಸಕ್ಲೈನ್ ಮುಷ್ತಾಕ್​ ಅಭಿಪ್ರಾಯವಾಗಿತ್ತು. ಅದರಲ್ಲಿ ಸ್ವಲ್ಪಮಟ್ಟಿನ ಸತ್ಯಾಂಶವೂ ಇದೆ ಅನ್ನೋದನ್ನ, ಮರೆಯುವಂತಿಲ್ಲ. ಇದೀಗ ಇದರ ಜೊತೆಗೆ ಟೀಮ್​ ಇಂಡಿಯಾ ಬದಲಾವಣೆಗೆ ಕಾರಣವಾದ ಆಟಗಾರ ಯಾರು ಎಂಬ ಚರ್ಚೆ ಹುಟ್ಟಿದೆ. ಅದಕ್ಕೆ ಉತ್ತರವೂ ಸ್ಪಷ್ಠ..! ಕಾಲದಿಂದ ಕಾಲಕ್ಕೆ ಆಟಗಾರರ ಸಾಮರ್ಥ್ಯ ಹಾಗೂ ಹಾರ್ಡ್​ ವರ್ಕ್​​ನ ಪರಿಶ್ರಮ ತಂಡವನ್ನ ಈಗ, ವಿಶ್ವದ ಅಗ್ರ ತಂಡವನ್ನಾಗಿ ನಿಲ್ಲಿಸಿದೆ. ಇದರಲ್ಲಿ ತಂಡದ ನಾಯಕರ ಕೊಡುಗೆಯೂ ಹೆಚ್ಚಿದೆ.

ಗೆಲುವಿನ ರುಚಿ ಹಚ್ಚಿಸಿದ ಕಪೀಲ್​ ದೇವ್​..!
ಭಾರತ ತಂಡದ ಅಪ್ರೋಚ್​​ ಬದಲಾಗಿದ್ದೇ, 1983ರ ವಿಶ್ವಕಪ್​ನಿಂದ. ಅಲ್ಲಿಯವರೆಗೂ ಅಂಡರ್​ ರೇಟೆಡ್​​ ತಂಡವಾಗಿ ಗುರುತಿಸಿಕೊಂಡಿದ್ದ ಭಾರತ, ಐತಿಹಾಸಿಕ ಸಾಧನೆ ಮಾಡಿದ್ದು ಕ್ರಿಕೆಟ್​ ದಿಕ್ಕನ್ನೇ ಬದಲಾಯಿಸಿತು. ಅದೂ ಸತತ ಎರಡು ಬಾರಿ ವಿಶ್ವಕಪ್​ ಗೆದ್ದಿದ್ದ ಬಲಾಢ್ಯರ ತಂಡವಾದ ವೆಸ್ಟ್​ ಇಂಡೀಸ್​ ಅನ್ನ ಮಣಿಸೋದು, ಸುಲಭದ ಮಾತೇ. ಇದೆಲ್ಲಾ ಸಾಧ್ಯವಾಗಿದ್ದು ಗೆಲುವಿನ ಹಂಬಲ ಮತ್ತು ಛಲದಿಂದ. ಅಂದು ಕಪೀಲ್​ ದೇವ್​ ಮಾಡಿದ ಮೋಡಿ, ಭಾರತ ಪ್ರತಿಷ್ಠಿತ ಕದನದಲ್ಲೂ ಗೆಲ್ಲಬಹುದು ಎಂಬ ರುಚಿಯನ್ನ ಹೆಚ್ಚಿಸಿತು.

ತಂಡವನ್ನ ಮರು ಸ್ಥಾಪಿಸಿದ್ದು ಬೆಂಗಾಲ್​ ಟೈಗರ್​..!
ಸ್ಪಾಟ್​​​ ಫಿಕ್ಸಿಂಗ್​ ಕಳಂಕಕ್ಕೆ ಒಳಗಾಗಿ, ವಿಶ್ವ ಕ್ರಿಕೆಟ್​ನಲ್ಲಿ ತಲೆ ತಗ್ಗಿಸುವಂತಹ ಸ್ಥಿತಿ ನಿರ್ಮಾಣವಾದಾಗ, ಭಾರತ ತಂಡದ ಸಾರಥ್ಯದ ಜವಾಬ್ಧಾರಿ ಹೊತ್ತಿದ್ದು ಸೌರವ್​ ಗಂಗೂಲಿ. ಇಡೀ ತಂಡಕ್ಕೆ ಅಗ್ರೆಸಿವ್ ಟಚ್​ ಸಿಕ್ಕಿದ್ದು ಗಂಗೂಲಿ ನಾಯಕತ್ವದ ಕೆಳಗೆ ಅಂದ್ರೆ, ತಪ್ಪಾಗಲ್ಲ. ಬೆಂಗಾಲ್​ ಟೈಗರ್​​​​ ನಾಯಕತ್ವದಲ್ಲಿ ದೇಶ-ವಿದೇಶಗಳಲ್ಲಿ ಪಾರಮ್ಯ ಮೆರೆದ ಟೀಮ್​ ಇಂಡಿಯಾ, 2003ರ ವಿಶ್ವಕಪ್​ನಲ್ಲಿ ಫೈನಲ್​ ಪ್ರವೇಶಿಸಿತ್ತು.

ಮಾಹಿ ನಾಯಕತ್ವದಲ್ಲಿ ಉತ್ತುಂಗಕ್ಕೇರಿದ ಟೀಮ್​ ಇಂಡಿಯಾ​..!
ಗಂಗೂಲಿ ಬಳಿಕ ಟೀಮ್​ಇಂಡಿಯಾ ಫುಲ್​ ಟೈಮ್​ ನಾಯಕನಾಗಿ ಜವಾಬ್ಧಾರಿ ಹೊತ್ತಿದ್ದು, ಮೋಸ್ಟ್​ ಸಕ್ಸಸ್​ಫುಲ್​ ಕ್ಯಾಪ್ಟನ್​ ಎಮ್.​ಎಸ್​ ಧೋನಿ. ತಂಡವನ್ನ ರಿಕಂಸ್ಟ್ರಕ್ಟ್ ಮಾಡಿದ ಧೋನಿ, ಯುವ ಆಟಗಾರರನ್ನ ಇಟ್ಟುಕೊಂಡೆ ಚೊಚ್ಚಲ ಅಗ್ನಿ ಪರೀಕ್ಷೆ ಜಯಿಸಿದ್ರು. ಆ ಬಳಿಕ 2011ರಲ್ಲಿ ಭಾರತೀಯರ 28 ವರ್ಷಗಳ ಕನಸನ್ನ ನನಸು ಮಾಡಿದ್ರು. ಇಷ್ಟೇ ಅಲ್ಲ.. 2013ರ ಚಾಂಪಿಯನ್ಸ್​​ ಟ್ರೋಫಿಯೂ ಭಾರತದ ಮುಡಿಗೇರಿತು. 3 ಪ್ರತಿಷ್ಠಿತ ಐಸಿಸಿ ಟ್ರೋಫಿಗಳನ್ನ ಗೆಲ್ಲಿಸಿದ ಮಾಹಿ, ಟೀಮ್​ ಇಂಡಿಯಾ ಕ್ರಿಕೆಟ್​​ನಲ್ಲಿ ಹೊಸ ಭಾಷ್ಯ ಬರೆದರು.

ಕೊಹ್ಲಿ ನಾಯಕತ್ವದಲ್ಲಿ ಫಿಟ್​ನೆಸ್​​ ಕ್ರಾಂತಿ​..!
ಧೋನಿ ಬಳಿಕ ಟೀಮ್​ ಇಂಡಿಯಾ ಸಾರಥ್ಯ ವಹಿಸಿಕೊಂಡಿದ್ದು ಯಂಗ್​ ವಿರಾಟ್​ ಕೊಹ್ಲಿ. ಟೆಸ್ಟ್​ ಕ್ರಿಕೆಟ್​​ನಲ್ಲಿ ಟೀಮ್​ ಇಂಡಿಯಾಗೆ ನಂಬರ್​.1 ಸ್ಥಾನ, ಇತಿಹಾಸದಲ್ಲೇ ಮೊದಲು ಕಾಂಗರೂ ನೆಲದಲ್ಲಿ ಟೆಸ್ಟ್​ ದಿಗ್ವಿಜಯ, ಹೀಗೆ ಹಲವು ದಾಖಲೆಗಳಿಗೆ ಕ್ಯಾಪ್ಟನ್​ ಕೊಹ್ಲಿ ಒಡೆಯ. ಇವೆಲ್ಲವುಕ್ಕಿಂತ ಹೆಚ್ಚಾಗಿ ಕೊಹ್ಲಿ ನಾಯಕತ್ವದಲ್ಲಿ ಶುರವಾಗಿದ್ದು, ಫಿಟ್​ನೆಸ್​​ ಕ್ರಾಂತಿ..! ನಾಯಕತ್ವಕ್ಕೆ ಕೊಹ್ಲಿ ನೀಡಿದ ಹೊಸ ಟಚ್​, ಪ್ರತಿ ಸರಣಿಯಲ್ಲೂ ನಾವು ನೋಡುತ್ತಲೇ ಇದ್ದೀವಲ್ಲ..! ಇವರಷ್ಟೇ ಅಲ್ಲ..! ನಾಯಕರಾಗಿ ಕರ್ನಾಟಕದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್​​ರ ಕೊಡುಗೆಯನ್ನೂ, ಮರೆಯುವಂತಿಲ್ಲ.

ಯೆಸ್​​..! ಟೀಮ್​ ಇಂಡಿಯಾದಲ್ಲಿ ಬದಲಾವಣೆಯನ್ನೋದು, ಯಾರೋ ಬಬ್ಬರಿಂದ ಘಟಿಸಿದ ಅಂಶವಲ್ಲ. ಕಾಲದಿಂದ ಕಾಲಕ್ಕೆ, ವ್ಯಕ್ತಿಗಳಿಂದ ವ್ಯಕ್ತಿಗಳಿಗೆ, ಸೋಲು-ಗೆಲುವುಗಳ ಆಧಾರದಲ್ಲಿ ಆಗಿರೋದು..! ಕೇವಲ ನಾಯಕರಿಂದ ಮಾತ್ರವಲ್ಲ..! ತಂಡಗಳ ಪ್ರೋಗ್ರೆಸ್​​​ನಲ್ಲಿ ಆಟಗಾರರ ಕೊಡುಗೆಯೂ ಅಷ್ಟೇ ಇದೆ.!!

The post ಟೀಮ್ ಇಂಡಿಯಾವನ್ನ ಬದಲಾಯಿಸಿದ ಆ ಮಹಾನ್ ಕ್ರಿಕೆಟಿಗ ಯಾರು..? appeared first on News First Kannada.

Source: newsfirstlive.com

Source link