ಶ್ರೀಲಂಕಾ ವಿರುದ್ಧದ ಸೀಮಿತ ಓವರ್​​ಗಳ ಸರಣಿಗಾಗಿ ಟೀಮ್​ ಇಂಡಿಯಾ ಇಂದು ಶ್ರೀಲಂಕಾಗೆ ತೆರಳಿದೆ. ಲಂಕಾ ಪ್ರವಾಸದ ಹಿನ್ನೆಲೆಯಲ್ಲಿ ಇಷ್ಟು ದಿನಗಳ ಕಾಲ ಮುಂಬೈನ ಗ್ರಾಂಡ್​ ಹಯಾತ್​ ಹೋಟೆಲ್​ನಲ್ಲಿ ಧವನ್​ ನೇತೃತ್ವದ ತಂಡ ಕ್ವಾರಂಟೀನ್​ಗೆ ಒಳಗಾಗಿತ್ತು. ಕ್ವಾರಂಟೀನ್​ ಅವಧಿಯಲ್ಲಿ ಟೀಮ್​ ಇಂಡಿಯಾ ಆಟಗಾರರು ಸವಿದ ಇಷ್ಟದ ಖಾದ್ಯ ಯಾವುದು ಅನ್ನೋ ಇಂಟರೆಸ್ಟಿಂಗ್​ ವಿಚಾರ ಇದೀಗ ಬಹಿರಂಗವಾಗಿದೆ. ಮುಂಬೈನ ಹೋಟೆಲ್​ನಲ್ಲಿ ಆಟಗಾರರು ‘ಮಾಕ್​ ಡಕ್​’ ಎನ್ನುವ ವಿಶೇಷ ಖಾದ್ಯ ಹೆಚ್ಚು ಇಷ್ಟಪಟ್ಟಿದ್ರು ಎಂದು ತಿಳಿದುಬಂದಿದೆ. ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಾಟ್​ ಫೇವರಿಟ್​​ ಡಿಶ್ ತಯಾರಿಸುವ ವಿಧಾನವನ್ನ ಒಳಗೊಂಡ ವಿಡಿಯೋವನ್ನ ಬಿಸಿಸಿಐ, ಹಂಚಿಕೊಂಡಿದೆ.

The post ಟೀಮ್ ಇಂಡಿಯಾ ಆಟಗಾರರ ‘ಫೇವರಿಟ್ ಫುಡ್’ ಯಾವುದು..? appeared first on News First Kannada.

Source: newsfirstlive.com

Source link