ವಿಶ್ವ ಕ್ರಿಕೆಟ್​​ನ ಮೂರು ಫಾರ್ಮೆಟ್​ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡುತ್ತಿರುವ ಟೀಮ್ ಇಂಡಿಯಾ, ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಯಶಸ್ವಿ ತಂಡವಾಗಿ ಮುನ್ನುಗುತ್ತಿದೆ.

ಆದ್ರೆ ಟೀಮ್ ಇಂಡಿಯಾದ ಈ ಯಶಸ್ಸಿಗೆ ಕಾರಣ ನಾಯಕ ವಿರಾಟ್​ ಕೊಹ್ಲಿ ಅಲ್ಲ ಅಂತಾ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಪನೇಸರ್, ಟೀಮ್ ಇಂಡಿಯಾದಲ್ಲಿ ನಾಯಕ ಕೊಹ್ಲಿಯ ಪ್ರಭಾವಕ್ಕಿಂತ, ರವಿ ಶಾಸ್ತ್ರಿಯ ಪ್ರಭಾವ ಹೆಚ್ಚಿದೆ.

ತಂಡದ ಆಟಗಾರರಲ್ಲಿ ಕೋಚ್ ಶಾಸ್ತ್ರಿ ಆತ್ಮವಿಶ್ವಾಸ ಹೆಚ್ಚಿಸಿದ್ದಾರೆ. ಇದಕ್ಕೆ ಬೆಸ್ಟ್ ಎಂಕ್ಸಾಂಪಲ್, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿ ಗೆಲುವು. ಕಳೆದ ಕೆಲ ತಿಂಗಳ ಹಿಂದಿನ ಟೀಮ್ ಇಂಡಿಯಾ ಸಾಧನೆ ನೋಡಿದರೆ, ಟೀಮ್ ಇಂಡಿಯಾ ವಿರಾಟ್ ಕೊಹ್ಲಿಗಿಂತಲೂ ಹೆಚ್ಚು ಶಾಸ್ತ್ರಿಯ ತಂಡವಾಗಿ ಕಾಣುತ್ತೆ ಎಂದಿದ್ದಾರೆ. ಇಂಗ್ಲೆಂಡ್ ಮಾಜಿ ಎಡಗೈ ಸ್ಪಿನ್ನರ್ ಮಾಂಟಿ ಪನೇಸರ್.

The post ‘ಟೀಮ್ ಇಂಡಿಯಾ ಕೊಹ್ಲಿ ತಂಡವಲ್ಲ, ಕೋಚ್ ರವಿ ಶಾಸ್ತ್ರಿ ತಂಡ’ appeared first on News First Kannada.

Source: newsfirstlive.com

Source link