ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಹೈವೋಲ್ಟೇಜ್​ ಫೈನಲ್​ ಫೈಟ್​, ಹತ್ತಿರವಾಗ್ತಿದೆ. ಟೆಸ್ಟ್​ ಕ್ರಿಕೆಟ್​​ನ ಮದಗಜಗಳಾದ ಇಂಡೋ-ಕಿವೀಸ್​ ಟೆಸ್ಟ್ ಚಾಂಪಿಯನ್​ ಪಟ್ಟ ಗಿಟ್ಟಿಸಿಕೊಳ್ಳುಲು, ಸಜ್ಜಾಗಿ ನಿಂತಿವೆ. ಒಂದೆಡೆ ಒಂದು ತಿಂಗಳ ಮುನ್ನವೇ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಕೇನ್ ಪಡೆ, ಕ್ರಿಕೆಟ್​ ಜನಕರ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿದೆ. ಆ ಮೂಲಕ ಎಡ್ಜ್​​ಬಸ್ಟನ್​​ನಿಂದ ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿರುವ ನ್ಯೂಜಿಲೆಂಡ್​​, ನೆಕ್ಸ್ಟ್​​ ಟಾರ್ಗೆಟ್​ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಅಂತಿದೆ.

ಆದ್ರೆ ಇತ್ತ ಇನ್ಟ್ರಾ ಸ್ಕ್ವಾಡ್​ ಫೋರ್​ ಡೇ ಪ್ರಾಕ್ಟೀಸ್ ಮ್ಯಾಚ್ ಆಡಿರುವ ಟೀಮ್ ಇಂಡಿಯಾ, ವಿಶ್ವ ಟೆಸ್ಟ್​ ಚಾಂಪಿಯನ್​ ಜಿದ್ದಾಜಿದ್ದಿನ ಕಾದಾಟಕ್ಕೆ ಶಸ್ತ್ರಸನ್ನದ್ಧವಾಗಿದೆ. ಇನ್ನೂ ಅಭ್ಯಾಸ ಪಂದ್ಯದಲ್ಲಿನ ಆಟಗಾರರ ಪ್ರದರ್ಶನ, ಟೀಮ್ ಇಂಡಿಯಾ ಪಾಳಯದಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ಇದಕ್ಕೆ ಕಾರಣ ಅಭ್ಯಾಸ ಪಂದ್ಯದಲ್ಲಿ ಆ ಐವರ ಆಟಗಾರರ, ಸಾಲಿಡ್ ಪರ್ಫಾಮೆನ್ಸ್​…!

ಸಾಲಿಡ್ ಓಪನಿಂಗ್ ನೀಡೋಕೆ ಶುಭ್​ಮನ್ ರೆಡಿ..!
4 ದಿನಗಳ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾಕ್ಕೆ ಸಿಕ್ಕ ಗುಡ್​ನ್ಯೂಸ್, ಶುಭ್​​ಮನ್​ ಗಿಲ್ ಅರ್ಧಶತಕದ ಆಟವಾಗಿದೆ.. ಇಂಗ್ಲೆಂಡ್ ಪ್ರವಾಸದಲ್ಲಿ ವೈಫಲ್ಯದ ಅನುಭವಿಸಿದ್ದ ಶುಭ್​​​ಮನ್​, ಇನ್ಟ್ರಾ ಸ್ಕ್ವಾಡ್​ ಮ್ಯಾಚ್​ನಲ್ಲಿ ಫಾರ್ಮ್​ಗೆ ಮರಳಿದ್ದಾರೆ. ಈ ಪಂದ್ಯದಲ್ಲಿ 135 ಎಸೆತಗಳನ್ನ ಎದುರಿಸಿದ್ದ ಶುಭ್​ಮನ್, 85 ರನ್​ ಕಲೆಹಾಕಿದ್ದಾರೆ. ಆ ಮೂಲಕ ಟೆಸ್ಟ್ ಚಾಂಪಿಯನ್​ಶಿಪ್​​ ಫೈನಲ್​​ನಲ್ಲಿ, ಸಾಲಿಡ್ ಓಪನಿಂಗ್ ನೀಡೋಕೆ ಸಜ್ಜಾಗಿ ನಿಂತಿದ್ದಾರೆ.

ಮಧ್ಯಮ ಕ್ರಮಾಂಕಕ್ಕೆ ಪಂತ್​ ‘ಪವರ್​’..!
ವೃತ್ತಿ ಜೀವನದ ಶ್ರೇಷ್ಠ ಲಯದಲ್ಲಿರುವ ಪಂತ್​, ನ್ಯೂಜಿಲೆಂಡ್ ಎದುರು ಪರಾಕ್ರಮ ಮೆರೆಯೋಕೆ ಸೈ ಅಂತಿದ್ದಾರೆ. ಅದ್ರಲ್ಲೂ ಇನ್ಟ್ರಾ ಸ್ಕ್ವಾಡ್ ಮ್ಯಾಚ್​ನಲ್ಲಿ ಅಜೇಯ 121 ರನ್ ಚಚ್ಚಿರುವ ಪಂತ್​, ಕಿವೀಸ್​ ದಂಡೆಯಾತ್ರೆಗೆ ನಾನ್ ರೆಡಿ ಎಂಬ ಎಚ್ಚರಿಕೆ ಸಂದೇಶ ರವಾನಿದ್ದಾರೆ. ಇಂಗ್ಲೆಂಡ್​ ಕಂಡೀಷನ್ಸ್​ನಲ್ಲಿ ಮಧ್ಯಮ ಕ್ರಮಾಂಕ ಜವಾಬ್ದಾರಿಯ ಜೊತೆಗೆ, ಮ್ಯಾಚ್ ಫಿನಿಷರ್ ರೋಲ್ ಸಹ, ಪಂತ್​​ ಪ್ಲೇ ಮಾಡ್ತಾರಾ ಎಂಬ ಅನುಮಾನಕ್ಕೆ ಶತಕದ ಉತ್ತರ ನೀಡಿದ್ದಾರೆ. ಇದರೊಂದಿಗೆ ಮಿಡಲ್ ಆರ್ಡರ್​ನಲ್ಲಿ ಪಂತ್​ ಪವರ್​​ ಹೆಚ್ಚಾಗಿರೋದಂತೂ, ಸುಳ್ಳಲ್ಲ.

ಅರ್ಧಶತಕ ಸಿಡಿಸಿ ಮಿಂಚಿದ ಜಡೇಜಾ..!
ಇಂಜುರಿ ಬಳಿಕ ಟೆಸ್ಟ್​ ಫಾರ್ಮೆಟ್​ಗೆ ಮರಳಿರುವ ಆಲ್​ರೌಂಡರ್ ರವೀಂದ್ರ ಜಡೇಜಾ, ಟೆಸ್ಟ್​​ಗೆ ಫಿಟ್​ ಇದ್ದಾರಾ ಎಂಬ ಅನುಮಾನ ಮೂಡಿತ್ತು. ಅಭ್ಯಾಸ ಪಂದ್ಯದಲ್ಲಿ ಜಡ್ಡು ಬ್ಯಾಟ್​ನಿಂದ ಸಿಡಿದ ಅರ್ಧಶತಕ, ಟೀಮ್ ಇಂಡಿಯಾ ಲೋವರ್ ಆರ್ಡರ್​ಗೆ ಮತ್ತಷ್ಟು ಬಲವನ್ನೇ ತುಂಬಿದೆ. ಆ ಮೂಲಕ ಜಡ್ಡುಗೆ ಬೆಂಚ್ ಕಾಯಿಸಿ ಅಂತಿದ್ದ ಮಾಜಿಗಳಿಗೆ, ಸರಿಯಾಗೇ ಟಾಂಗ್ ಕೊಟ್ಟಿದ್ದಾರೆ.

ಅನುಭವಿ ಇಶಾಂತ್ ಡಿಸೆಂಟ್ ಸ್ಪೆಲ್..!
ಸದ್ಯ ಟೀಮ್ ಇಂಡಿಯಾದ ಬೌಲಿಂಗ್ ತ್ರಿವಳಿ ವೇಗಿಗಳ ಕಾಂಬಿನೇಷನ್​ನಲ್ಲಿ, ಅನುಭವಿ ಇಶಾಂತ್​ ಶರ್ಮಾಗೆ ಮೊದಲ ಆದ್ಯತೆ. ಇನ್ನೂ ಇಂಗ್ಲೆಂಡ್​ನ ಹವಾಮಾನ, ಬಿಸಿಲಿನ ವಾತವಾರಣದಲ್ಲಿ ಹಿರಿಯ ಆಟಗಾರರನ ಬದಲಿಗೆ, ಸಿರಾಜ್​ಗೆ ಚಾನ್ಸ್​ ನೀಡಿ ಎಂಬ ಅಭಿಪ್ರಾಯಗಳು ಕೇಳಿ ಬರ್ತಿವೆ. ಆದ್ರೆ ಅಭ್ಯಾಸ ಪಂದ್ಯದಲ್ಲಿ ಡಿಸೆಂಟ್ ಸ್ಪೆಲ್ ಹಾಕಿದ ಇಶಾಂತ್, 36 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ. ಇದು ಟೀಮ್ ಇಂಡಿಯಾದ ಬೌಲಿಂಗ್ ವಿಭಾಗದಲ್ಲಿನ ಮಂದಹಾಸ ಮೂಡಿಸಿದೆ.

ಸಿರಾಜ್ ಸೂಪರ್ ಪರ್ಫಾಮೆನ್ಸ್​, ಕೊಹ್ಲಿಗೆ ಹೆಚ್ಚಾಯ್ತು ಕಾನ್ಫಿಡೆನ್ಸ್
ಒಂದೆಡೆ ಅನುಭವಿ ಇಶಾಂತ್ ಶರ್ಮಾ, ಮೂರು ವಿಕೆಟ್ ಉರುಳಿಸಿ ಮಿಂಚಿದ್ರೆ, ಇತ್ತ ಇಂಗ್ಲೆಂಡ್​ ಕಂಡೀಷನ್​​ನಲ್ಲಿ 22 ರನ್​ ನೀಡಿ 2 ವಿಕೆಟ್ ಉರುಳಿಸಿರುವ ಸಿರಾಜ್, ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. ಅಷ್ಟೇ ಅಲ್ಲ…! ಪ್ರೆಸ್​​ಮೀಟ್​ನಲ್ಲಿ ಲಾಲಾ ಸಿಕ್ರೇಟ್​​ ಹೇಳಿದ್ದ ನಾಯಕ ವಿರಾಟ್​ ಕೊಹ್ಲಿಯ ಕಾನ್ಫಿಡೆನ್ಸ್ ಕೂಡ, ಹೆಚ್ಚಿಸಿದ್ದಾರೆ.. ಇದರ ಜೊತೆಗೆ ಇಶಾಂತ್​ ವರ್ಸಸ್ ಸಿರಾಜ್ ಎಂಬ ಚರ್ಚೆಗೆ ತುಪ್ಪ ಸುರಿದಿರುವ ಸಿರಾಜ್, ಕಿವೀಸ್​​ ತಂಡವನ್ನ ಉಡೀಸ್ ಮಾಡೋಕೆ ನಾನು ಕೂಡ ರೆಡಿ ಎಂಬ ಮೆಸೇಜ್ ಪಾಸ್ ಮಾಡಿದ್ದಾರೆ.

ಇವರಷ್ಟೇ ಅಲ್ಲ..! ತಂಡದಲ್ಲಿ ಹಲವು ಆಟಗಾರರು ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಡಿಸೆಂಟ್​ ಪರ್ಫಾಮೆನ್ಸ್ ನೀಡಿರೋದು, ಟೀಮ್ ಇಂಡಿಯಾ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತೆ ಮಾಡಿದೆ. ಒಟ್ನಲ್ಲಿ ಫೈನಲ್​ ಫೈಟ್​​ಗೂ ಮುನ್ನ ಭರ್ಜರಿ ತಯಾರಿಯನ್ನೇ ನಡೆಸಿರುವ ಕಿವೀಸ್​ಗೆ ಕಿಕ್ ನೀಡೋಕೆ, ಟೀಮ್ ಇಂಡಿಯಾ ಸಕಲ ತಯಾರಿ ನಡೆಸಿದೆ. ಸೌತ್​​ಹ್ಯಾಂಪ್ಟನ್​ನಲ್ಲಿ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನ ಹೊರಗಾಕಿದ್ದೇ ಆದ್ರೆ, ಟೆಸ್ಟ್​ ಚಾಂಪಿಯನ್​​ಶಿಪ್​ ಪಟ್ಟದ ಜೊತೆಗೆ, ನಂ.1 ಪಟ್ಟ ಕೂಡ, ಟೀಮ್ ಇಂಡಿಯಾ ಮುಡಿಗೇರೋದು ಗ್ಯಾರಂಟಿ..!

The post ಟೀಮ್ ಇಂಡಿಯಾ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಯಾರು ಹಿಟ್.. ಯಾರು ಫ್ಲಾಪ್…? appeared first on News First Kannada.

Source: newsfirstlive.com

Source link