ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳನ್ನ ಹೆದರಿ ಹೊರಗುಳಿದ್ರಾ ಶಾಹೀನ್ ಅಫ್ರಿದಿ..?


ಆಗಸ್ಟ್ 28 ರಂದು ಯುಎಇನ ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂ ಭಾರತ-ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೆ ಪಾಕಿಸ್ತಾನದ ಸ್ಟಾರ್ ವೇಗಿ ಶಾಹೀನ್ ಶಾ ಆಫ್ರಿದಿ ಅಲಭ್ಯರಾಗಿದ್ದಾರೆ. ಮೊಣಕಾಲಿನ ಗಾಯದಿಂದಾಗಿ ಅವರು ಏಷ್ಯಾ ಕಪ್-2022 ರಿಂದ ಹೊರಗುಳಿದಿದ್ದಾರೆ. ಆದರೆ ಅಫ್ರಿದಿ ಹೊರಗುಳಿಯಲು ಗಾಯವೊಂದೇ ಕಾರಣವಲ್ಲ ಎಂದಿದ್ದಾರೆ ಪಾಕಿಸ್ತಾನದ ಮಾಜಿ ವೇಗಿ ಅಕಿಬ್ ಜಾವೇದ್​. ಶಾಹೀನ್ ಅಫ್ರಿದಿ ಮೇಲೆ ಕೆಲಸದ ಹೊರೆ ಹೆಚ್ಚಾಗಿದೆ. ಹೀಗಾಗಿ ಯುವ ವೇಗಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿರಬಹುದು ಎಂದು ಅಕಿಬ್ ಜಾವೇದ್ ಅಭಿಪ್ರಾಯಪಟ್ಟಿದ್ದಾರೆ.  ಇದೀಗ ಮಾಜಿ ಕ್ರಿಕೆಟಿಗನ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಏಕೆಂದರೆ ಅಕಿಬ್ ಜಾವೇದ್ ಈ ಹಿಂದೆ ಪಾಕಿಸ್ತಾನದ ಬೌಲಿಂಗ್ ಕೋಚ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಇದೀಗ ಪ್ರಮುಖ ಟೂರ್ನಿಯಿಂದ ಶಾಹೀನ್ ಅಫ್ರಿದಿ ಹೊರಗುಳಿಯುತ್ತಿದ್ದಂತೆ, ಗಾಯವೊಂದೇ ಕಾರಣವಲ್ಲ ಎಂಬ ಅಭಿಪ್ರಾಯವನ್ನು ಅಕಿಬ್ ಜಾವೇದ್ ಮುಂದಿಟ್ಟಿದ್ದಾರೆ. ಶಾಹೀನ್ ನಿರಂತರವಾಗಿ ಕ್ರಿಕೆಟ್​ ಆಡುತ್ತಿದ್ದು, ಇದೀಗ ಕೆಲಸದ ಹೊರೆ ಹೆಚ್ಚಾಗಿದೆ. ಇದೇ ಕಾರಣದಿಂದಾಗಿ ಒತ್ತಡಕ್ಕೊಳಗಾಗುವ ಭಾರತದ ವಿರುದ್ದದ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ಅಕಿಬ್ ಜಾವೇದ್ ತಿಳಿಸಿದ್ದಾರೆ.

ಏಕೆಂದರೆ ಅಫ್ರಿದಿ ಪ್ರಸ್ತುತ ವಿಶ್ವದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು. ಅವರ ವೇಗ ಮತ್ತು ಸ್ವಿಂಗ್ ಅನೇಕ ಬ್ಯಾಟ್ಸ್‌ಮನ್‌ಗಳನ್ನು ತೊಂದರೆಗೀಡು ಮಾಡಿದೆ. 22 ವರ್ಷ ವಯಸ್ಸಿನ ಶಾಹೀನ್ ಶಾ ಆಫ್ರಿದಿ ಅವರ ಬೌಲಿಂಗ್ ಸರಾಸರಿಯು ಎಲ್ಲಾ ಮೂರು ಸ್ವರೂಪಗಳಲ್ಲಿ 25 ಕ್ಕಿಂತ ಕಡಿಮೆಯಿದೆ.

ಅಷ್ಟೇ ಅಲ್ಲದೆ ಕೆಲ ವರ್ಷಗಳಿಂದ ಅವರು ಪಾಕಿಸ್ತಾನದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ವರ್ಷ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ದದ ಪಂದ್ಯದಲ್ಲಿ ಪಾಕ್​ ಗೆಲುವಿನಲ್ಲಿ ಅಫ್ರಿದಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಇದೀಗ ಏಷ್ಯಾಕಪ್​ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಆದರೆ ಇಂತಹ ನಿರ್ಧಾರಕ್ಕೆ ಕಾರಣ ಕೆಲಸದ ಹೊರೆಯುಂಟಾದ ಗಾಯ ಕಾರಣವಾಗಿರಬಹುದು. ಏಕೆಂದರೆ ಶಾಹೀನ್ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಅಫ್ರಿದಿ ಅಲಭ್ಯತೆಯು ಪಾಕಿಸ್ತಾನಕ್ಕೆ ಭಾರೀ ಸಂಕಷ್ಟ ತರಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ ಸುದೀರ್ಘ ವೃತ್ತಿಜೀವನವನ್ನು ಗಮನದಲ್ಟಿಟ್ಟು ಇಂತಹ ನಿರ್ಧಾರ ತೆಗೆದುಕೊಂಡಿರಬೇಕು ಎಂದು ಅಕಿಬ್ ಜಾವೇದ್ ಹೇಳಿದ್ದಾರೆ.

ಇದೀಗ ಪಾಕಿಸ್ತಾನ್ ತಂಡದ ಮಾಜಿ ಬೌಲಿಂಗ್ ಕೋಚ್ ಅಕಿಬ್ ಜಾವೇದ್ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ. ಅದರಲ್ಲೂ 2021ರ ಟಿ20 ವಿಶ್ವಕಪ್​ನಲ್ಲಿ ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ವಿಕೆಟ್ ಕಬಳಿಸಿ ಅಫ್ರಿದಿ ಮೈದಾನದಲ್ಲೇ ಭಾರತೀಯ ಆಟಗಾರರನ್ನು ಹೀಯಾಳಿಸಿದ್ದರು. ಇದೇ ಕಾರಣದಿಂದಾಗಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಅಫ್ರಿದಿ ವಿರುದ್ದ ಏಷ್ಯಾಕಪ್​ನಲ್ಲಿ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಿತ್ತು. ಆದರೀಗ ಮೊಣಕಾಲಿನ ಗಾಯದ ಕಾರಣ ಶಾಹೀನ್ ಅಫ್ರಿದಿ ಹೊರಗುಳಿದಿದ್ದಾರೆ. ಆದರೆ ಅಫ್ರಿದಿ ಹೊರಗುಳಿಯಲು ಗಾಯವೊಂದೇ ಕಾರಣವಲ್ಲ ಎನ್ನುವ ಮೂಲಕ ಪಾಕ್ ಮಾಜಿ ಆಟಗಾರ ಅಕಿಬ್ ಜಾವೇದ್ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

 

TV9 Kannada


Leave a Reply

Your email address will not be published.