2019ರಲ್ಲಿ ಆರಂಭವಾದ ಟೀಮ್ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಜಿರ್ನಿ, ಈಗ ಫೈನಲ್​ವರೆಗೆ ಬಂದು ನಿಂತಿದೆ. ವೆಸ್ಟ್ ಇಂಡೀಸ್, ​ಸೌತ್​ ಆಫ್ರಿಕಾ, ಬಾಂಗ್ಲಾದೇಶ ವಿರುದ್ಧದ ಬ್ಯಾಕ್​​​ ಟು ಬ್ಯಾಕ್ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ, ನಂತರ ನ್ಯೂಜಿಲೆಂಡ್ ಪ್ರವಾಸದಲ್ಲಿ ವೈಟ್​ವಾಶ್​ ಮುಖಭಂಗಕ್ಕೀಡಾಗಿತ್ತು. ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಜುರಿ, ಜನಾಂಗೀಯ ನಿಂದನೆ ಸೇರಿದಂತೆ ಹಲವು ಸವಾಲುಗಳನ್ನ ಮೆಟ್ಟಿನಿಂತಿದ್ದ ಯಂಗ್​​ ಟೀಮ್ ಇಂಡಿಯಾ, ಬಾರ್ಡರ್​​-ಗವಾಸ್ಕರ್ ಟ್ರೋಫಿಯನ್ನ ಮುಡಿಗೇರಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿತ್ತು.

ನಂತರ ಸ್ವದೇಶದಲ್ಲಿ ಇಂಗ್ಲೆಂಡ್​ ತಂಡವನ್ನ 3-1ರ ಅಂತರದಲ್ಲಿ ಬಗ್ಗುಬಡಿದ ವಿರಾಟ್​ ಬಾಯ್ಸ್​, ವಿಶ್ವ ಟೆಸ್ಟ್​ ಚಾಂಪಿಯನ್​​​ಶಿಪ್​​ನ ಫೈನಲ್​​​ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದ್ರೀಗ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೆ ಸಜ್ಜಾಗ್ತಿರುವ ಟೀಮ್ ಇಂಡಿಯಾ, ಕಿವೀಸ್​ ಪಡೆ ವಿರುದ್ಧ ಗೆದ್ದು ಚೊಚ್ಚಲ ಟೆಸ್ಟ್​ ಚಾಂಪಿಯನ್​ಶಿಪ್​​ ಮುಡಿಗೇರಿಸಿಕೊಳ್ಳುವ ಇರಾದೆಯಲ್ಲಿದೆ. ಆದ್ರೆ ಎಂಥಹ ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನೇ ಧೂಳಿಪಟ ಮಾಡಬಲ್ಲ ಘಾತುಕ ವೇಗಿಗಳಿಗೆ ದಿಟ್ಟ ಉತ್ತರ ನೀಡಬೇಕಿರುವ ಟೀಮ್ ಇಂಡಿಯಾ, ಇದರ ಜೊತೆಗೆ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ.

ಹೌದು..! ಬಲಿಷ್ಠವಾಗಿರುವ ಟೀಮ್ ಇಂಡಿಯಾಕ್ಕೆ, ಚೊಚ್ಚಲ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಗೆಲ್ಲಲು ಇದು ಬೆಸ್ಟ್ ಚಾನ್ಸ್… ಆದ್ರೆ ಉದ್ಘಾಟನಾ ಟೆಸ್ಟ್​ ಚಾಂಪಿಯನ್​ಶಿಪ್ ಗೆಲ್ಲಬೇಕೆಂದ್ರೆ, ರಣರಂಗಕ್ಕಿಳಿಯುವ ಮುನ್ನವೇ ಟೀಮ್ ಇಂಡಿಯಾ ಮೂರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ. ಇದು ಕೋಚ್​ ರವಿ ಶಾಸ್ತ್ರಿ ಹಾಗೂ ನಾಯಕ ವಿರಾಟ್​ ಕೊಹ್ಲಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗಾದ್ರೆ ಟೀಮ್ ಇಂಡಿಯಾ ಉತ್ತರ ಕಂಡುಕೊಳ್ಳಬೇಕಿರುವ ಆ ಯಕ್ಷಪ್ರಶ್ನೆಗಳೇನು..?

ಪ್ರಶ್ನೆ – 01
ಬೆಸ್ಟ್​ ತ್ರಿವಳಿ ವೇಗಿಗಳ ಕಾಂಬಿನೇಷನ್ ಯಾವುದು​​​​​..?

ವಿದೇಶಿ ನೆಲದಲ್ಲಿ ವಿರಾಟ್​ ಪಡೆಯ ಯಶಸ್ಸಿಗೆ ಕಾರಣ ವೇಗಿಗಳು..! ಮ್ಯಾಚ್​ ವಿನ್ನರ್ ಬೌಲರ್​ಗಳನ್ನ ಒಳಗೊಂಡಿರುವ ಟೀಮ್ ಇಂಡಿಯಾ, ಇದುವರೆಗೆ ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಸೌತ್​ ಆಫ್ರಿಕಾದಲ್ಲಿ ಟೆಸ್ಟ್​ ಸರಣಿ ಗೆದ್ದ ಸಾಧನೆ ಮಾಡಿಲ್ಲ.. ಆದ್ರೆ, ನ್ಯೂಜಿಲೆಂಡ್ ಎದುರು ತೀವ್ರ ಪೈಪೋಟಿ ನೀಡಲು ಬೆಸ್ಟ್​ ಟ್ರಯೋ ಅಟ್ಯಾಕರ್ಸ್​ಗಳನ್ನೇ ಕಣಕ್ಕಿಳಿಸಬೇಕಿದೆ. ಹಾಗಾಗಿ ಜಸ್​​ಪ್ರೀತ್​ ಬೂಮ್ರಾ, ಮಹಮ್ಮದ್ ಶಮಿ, ಇಶಾಂತ್ ಶರ್ಮಾರೇ ಮುಂಚೂಣಿ ಬೌಲರ್​ಗಳಾಗಿದ್ದರು. ಟೀಮ್ ಇಂಡಿಯಾದ ಹೊಸ ಡೆಡ್ಲಿ ಅಟ್ಯಾಕರ್ಸ್ ಮತ್ತಷ್ಟು ಪರಿಣಾಮಕಾರಿಯಾಗಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಂಪ​ಲ್ ಬಾರ್ಡರ್​-ಗವಾಸ್ಕರ್ ಟ್ರೋಫಿ….

ಹೌದು..! ಇಶಾಂತ್​ ಶರ್ಮಾ, ಮಹಮ್ಮದ್ ಶಮಿ, ಜಸ್​ಪ್ರೀತ್​ ಬೂಮ್ರಾ ಅಲಭ್ಯತೆಯಲ್ಲಿ ಕಣಕ್ಕಿಳಿದ್ದಿದ್ದ ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ನಟರಾಜನ್, ಗಾಬಾ ಟೆಸ್ಟ್​ ಗೆಲುವಿನಲ್ಲಿ ಮಹತ್ವದ ನಿರ್ವಹಿಸಿದ್ದರು. ಐತಿಹಾಸಿಕ ಸರಣಿ ಗೆದಿದ್ದಲ್ಲದೇ, ಗಾಬಾದಲ್ಲಿ 32 ವರ್ಷಗಳಿಂದ ಸೋಲನ್ನ ಅರಿಯದ ಆಸ್ಟ್ರೇಲಿಯಾಗೆ ಮಣ್ಣುಮುಕ್ಕಿಸಿದ್ದರು. ಆದ್ರೀಗ ಇಶಾಂತ್ ಶರ್ಮಾ, ಮಹಮ್ಮದ್ ಶಮಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಹಾಗಾಗಿ ತಂಡದಲ್ಲಿನ ಆರು ಮಂದಿ ಬೌಲರ್​​ಗಳು ಪೈಕಿ, ಯಾವ ತ್ರಿವಳಿ ಕಾಂಬಿನೇಷನ್​ನಲ್ಲಿ ಕಣಕ್ಕಿಳಿಯಬೇಕು ಅನ್ನೋ ಪ್ರಶ್ನೆ ಮ್ಯಾನೇಜ್​ಮೆಂಟ್​ ಮುಂದಿದೆ.

ಪ್ರಶ್ನೆ – 02
ಸ್ಪಿನ್ನರ್​​ಗಳು ಇಬ್ಬರಾ ಅಥವಾ ಒಬ್ಬರಾ..?

ಕೋಚ್ ರವಿ ಶಾಸ್ತ್ರಿ ಹಾಗೂ ವಿರಾಟ್​ ಕೊಹ್ಲಿಗೆ ಬಹುವಾಗಿ ಕಾಡುತ್ತಿರುವ ಪ್ರಶ್ನೆ, ಅಶ್ವಿನ್-ಜಡೇಜಾ ಜೋಡಿಯನ್ನ ಅಂಗಳಕ್ಕಿಳಿಸೋದಾ ಇಲ್ವಾ..!! ಇಬ್ಬರಲ್ಲಿ ಒಬ್ಬರನ್ನು ಮಾತ್ರವೇ ಪ್ರಯೋಗಕ್ಕಿಳಿಸೋದಾ ಎಂಬುದಾಗಿದೆ. ಹೌದು..! ಸದ್ಯ ಭಾರತೀಯ ಬ್ಯಾಟ್ಸ್​​ಮನ್​ಗಳಿಗೆ ಇಂಗ್ಲೆಂಡ್​ ಪಿಚ್​​ಗಳು ಸವಾಲಾಗಲಿವೆ. ಹಾಗಾಗಿ ಆರು ಪರಿಪೂರ್ಣ ಬ್ಯಾಟ್ಸ್​ಮನ್​ಗಳೊಂದಿಗೆ ಕೊಹ್ಲಿ ಸೇನೆ ಕಣಕ್ಕಿಳಿಯೋ ಸಾಧ್ಯತೆ ಇದೆ. ಆದ್ರೆ ಸದ್ಯ ಆಲ್​ರೌಂಡರ್​ ಹನುಮ ವಿಹಾರಿ, ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡ್ತಿದ್ದು, ಅಲ್ಲಿನ ಪರಿಸ್ಥಿತಿಗಳಿಗೆ ಒಗ್ಗಿಕೊಂಡಿದ್ದಾರೆ ಕೂಡ. ಹೀಗಾಗಿ ವಿಹಾರಿಯನ್ನ ಬ್ಯಾಟ್ಸ್‌ಮನ್‌ ಆಗಿ ಸೇರಿಸಿಕೊಳ್ಳಬೇಕಾ.. ಬೇಡವಾ ಎಂಬ ಪ್ರಶ್ನೆ ಬಹುವಾಗಿ ಕಾಡಲಿದೆ. ಅಕಸ್ಮಾತ್ ವಿಹಾರಿಯನ್ನ ಸೇರಿಸಿಕೊಂಡರೆ, ಟೀಮ್ ಇಂಡಿಯಾ ಮೂವರು ಸೀಮರ್​​ಗಳ ಜೊತೆ ಕಣಕ್ಕಿಳಿಯಬೇಕಾದ ಅನಿವಾರ್ಯತೆಯ ಜೊತೆಗೆ ಅಶ್ವಿನ್ ಅಥವಾ ಜಡೇಜಾ, ಈ ಇಬ್ಬರಲ್ಲಿ ಒಬ್ಬರನ್ನ ಕೈಬಿಡಬೇಕಾಗುತ್ತದೆ. ಹಾಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ ಆಯ್ಕೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ.

ಪ್ರಶ್ನೆ -3
ಆರಂಭಿಕರಾಗಿ ರೋಹಿತ್ ಶರ್ಮಾ ಜೊತೆಗಾರ ಯಾರು..?

ಸದ್ಯ ಟೆಸ್ಟ್​ ಓಪನರ್ ಆಗಿ ಮಿಂಚುತ್ತಿರುವ ರೋಹಿತ್ ಶರ್ಮಾ, ಸ್ವದೇಶದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ. ಆದ್ರೆ ಇಂಗ್ಲೆಂಡ್​ನ ಹವಾಮಾನ ಹಿಟ್​ಮ್ಯಾನ್ ರೋಹಿತ್​ ಶರ್ಮಾಗೆ ಅಗ್ನಿಪರೀಕ್ಷೆ ಆಗಿದ್ರೂ, ಹೆಚ್ಚು ನಿರೀಕ್ಷೆ ಇಡಲಾಗಿದೆ. ಆದ್ರೆ, ಟೀಮ್ ಇಂಡಿಯಾಕ್ಕೆ ಕಾಡ್ತಿರುವ ಪ್ರಶ್ನೆ, ಹಿಟ್​​ಮ್ಯಾನ್ ಜೊತೆ ಕಣಕ್ಕಿಳಿಯೋದು ಯಾರು? ಇದಕ್ಕೆ ಟೀಮ್ ಮ್ಯಾನೇಜ್​ಮೆಂಟ್​​ ಬಳಿ ಮಲ್ಟಿಪಲ್ ಚಾಯ್ಸ್​ ಇದೆ. ಒಂದು ಶುಭ್​​ಮನ್​ ಗಿಲ್​ ಹಾಗೂ ಮಯಾಂಕ್ ಅಗರ್ವಾಲ್… ಆದ್ರೆ ಇಬ್ಬರಲ್ಲಿ ಯಾರನ್ನ ಕಣಕ್ಕಿಳಿಸಬೇಕು ಅನ್ನೋದೇ, ಮ್ಯಾನೇಜ್​ಮೆಂಟ್​ಗೆ ಕಾಡ್ತಿರುವ ಪ್ರಶ್ನೆಯಾಗಿದೆ.

ಅದ್ರಲ್ಲೂ ಆಸ್ಟ್ರೇಲಿಯಾ ಸರಣಿ ವೇಳೆ ಮಿಂಚಿದ್ದ ಶುಭ್​​ಮನ್​ ಗಿಲ್​, ಇಂಗ್ಲೆಂಡ್ ಹಾಗೂ ಐಪಿಎಲ್​​ನಲ್ಲಿ ಫ್ಲಾಪ್ ಶೋ ನೀಡಿದ್ದಾರೆ.. ಆದ್ರೆ ಆಸಿಸ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ್ದ ಮಯಾಂಕ್, ಸದ್ಯ ಅದ್ಬುತ ಫಾರ್ಮ್​ನಲ್ಲಿದ್ದಾರೆ. ಆದ್ರೆ ಉಭಯ ಆಟಗಾರರು ಸ್ವಿಂಗ್ ಎಸೆತಗಳ ಮುಂದೆ ಮಂಡಿಯೂರಿದ್ದಾರೆ. ಹೀಗಾಗಿ ಇಬ್ಬರಲ್ಲಿ ಯಾರನ್ನ ಕಣಕ್ಕಿಳಿಸೋದು ಎಂಬ ಪ್ರಶ್ನೆಯೂ ವಿರಾಟ್​ ಆ್ಯಂಡ್ ಮ್ಯಾನೇಜ್​ಮೆಂಟ್​​​ಗೆ ಕಾಡ್ತಿದೆ. ಇವರ ಜೊತೆ ಇಂಗ್ಲೆಂಡ್​ ನೆಲದಲ್ಲಿ ಅದ್ಬುತ ಟ್ರ್ಯಾಕ್ ರೆಕಾರ್ಡ್​ ಹೊಂದಿರುವ ಕೆ.ಎಲ್.ರಾಹುಲ್​​ ತಂಡದಲ್ಲಿರೋದು, ವಿರಾಟ್​ ತಲೆಬಿಸಿಯನ್ನ ಮತ್ತಷ್ಟು ಹೆಚ್ಚಿಸಿದೆ.

ಒಟ್ನಲ್ಲಿ.. ಒಂದೆಡೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಗೆಲ್ಲೋ ಉತ್ಸಾಹದಲ್ಲಿರುವ ಟೀಮ್ ಇಂಡಿಯಾ, ಕಿವೀಸ್​ ವಿರುದ್ಧದ ಫೈನಲ್​​ ಫೈಟ್​ಗೂ ಮುನ್ನ ಸಾಲು ಸಾಲು ಪ್ರಶ್ನೆಗಳಿಗೆ ಮೊದಲು ಉತ್ತರ ಕಂಡುಕೊಳ್ಳಬೇಕಿದೆ.

The post ಟೀಮ್ ಇಂಡಿಯಾ ಮುಂದಿರೋ 3 ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ..? appeared first on News First Kannada.

Source: newsfirstlive.com

Source link